‘ಅಣ್ಣಾ ಬಾಂಡ್’ ಪುಣ್ಯ ಭೂಮಿಯಲ್ಲಿ ‘ಬಾಂಡ್ ರವಿ’
ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿರುವ ‘ಬಾಂಡ್ ರವಿ’ ಸಿನಿಮಾ ತಂಡ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ಕೊಟ್ಟಿದೆ. ಅಪ್ಪು ನಟನೆಯ ‘ಅಣ್ಣಾ ಬಾಂಡ್’ ಸಿನಿಮಾದಲ್ಲಿ ಬಾಂಡ್ ರವಿ ಅನ್ನೋ ಪಾತ್ರದ ಸ್ಫೂರ್ತಿಯನ್ನ ಪಡೆದು ಬಾಂಡ್ ರವಿ ಸಿನಿಮಾವನ್ನ ಮಾಡಿದ್ದಾರೆ ನಿರ್ದೇಶಕ ಪ್ರವೀಣ್. ನವ ನಟ ಪ್ರಮೋದ್ ಮದ್ದೂರ್ ನಾಯಕ ನಟನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ.
ವಿಕ್ರಾಂತ್ ರೋಣ ನಿರ್ಮಾಪಕರಿಂದ ಹೊಸ ಸಿನಿಮಾ
ಈ ವರ್ಷದ ತೆರೆಕಂಡು ಯಶಸ್ವಿಯಾಗಿರುವ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕರಿಂದ ಹೊಸ ಸಿನಿಮಾ ಘೋಷಣೆಯಾಗಿದೆ. ಜಾಕ್ ಮಂಜು ನಿರ್ಮಾಣದಲ್ಲಿ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬರ್ತಿದ್ದು ಚಿತ್ರಕ್ಕೆ ಪಾದರಾಯ ಎಂದು ಹೆಸರಿಡಲಾಗಿದೆ. ನಿರ್ದೇಶಕ ನಾಗಶೇಖರ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಚಕ್ರವರ್ತಿ ಚಂದ್ರಚೂಡ್ ಅವರು ಪಾದರಾಯ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ.
ಪಾರ್ವತಮ್ಮ ರಾಜ್ ಕುಮಾರ್ ಅವರ ಸವಿ ನೆನಪು
ಸ್ಯಾಂಡಲ್ವುಡ್ನ ಧೀರ ಮಹಿಳೆ , ಎಷ್ಟೋ ಜನರ ಅನ್ನಧಾತೆಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರ ಜನ್ಮ ದಿನ ಸವಿ ನೆನಪು ಇಂದು. 70ಕ್ಕೂ ಹೆಚ್ಚು ಚಿತ್ರಗಳನ್ನ ನಿರ್ಮಾಣ ಮಾಡಿರುವ ಹೆಗ್ಗಳಿಕೆ ಪಾರ್ವತಮ್ಮ ರಾಜ್ ಕುಮಾರ್ ಅವರದ್ದು. ಇಂದು ಅವರ ಜನ್ಮದಿನದ ಸವಿನೆನಪಿನ ಪ್ರಯುಕ್ತ ಸೋಶೀಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಮುಖರು ಸ್ಮರಿಸಿದ್ದಾರೆ.
ಛತ್ರಪತಿ ಶಿವಾಜಿ ಪಾತ್ರದಲ್ಲಿ ಅಕ್ಷಯ್ ಕುಮಾರ್!
ಬಯೋಪಿಕ್ ವಿಚಾರದಲ್ಲಿ ಬಾಲಿವುಡ್ ಮಂದಿ ಒಂದ್ ಹೆಜ್ಜೆ ಮುಂದು. ನೈಜ ಅಭಿನಯದಲ್ಲಿ ಆ್ಯಕ್ಷನ್ ಕಿಂಗ್ ಖಿಲಾಡಿ ಅಕ್ಷಯ್ ಕುಮಾರ್ ಕೂಡ ಹತ್ತು ಹೆಜ್ಜೆ ಮುಂದೆ ಇರೋ ನಟ. ಈಗ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಮಂಜ್ರೇಕರ್ ನಿರ್ದೇಶನದಲ್ಲಿ ವಸಿಂ ಖುರೇಶಿ ನಿರ್ಮಾಣದಲ್ಲಿ ಶಿವಾಜಿ ಜೀವನಾಧಾರಿತ ಸಿನಿಮಾ ಮೂಡಿಬರಲಿದೆ.
ದುಬೈಗೆ ಮಹೇಶ್ ಬಾಬು ಅಂಡ್ ಟೀಂ!
ತಂದೆ ಸಾವಿನ ಬಳಿಕ ವಿಶ್ರಾಂತಿಯಲ್ಲಿದ್ದ ನಟ ಮಹೇಶ್ ಬಾಬು ಈಗ ಶೂಟಿಂಗ್ಗೆ ಸಜ್ಜಾಗುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ತಮ್ಮ ಮುಂದಿನ ಸಿನಿಮಾ ಮಾಡ್ತಿದ್ದು, ಐ ಆ್ಯಮ್ ಬ್ಯಾಕ್ ಟು ವರ್ಕ್ ಅಂತ ಫೋಟೋ ಸಹ ಶೇರ್ ಮಾಡಿದ್ದರು. ಇದೀಗ, ಮಹೇಶ್ ಬಾಬು ಮತ್ತು ತಂಡ ದುಬೈಗೆ ಹಾರಲಿದ್ದಾರೆ ಎಂದು ತಿಳಿದು ಬಂದಿದೆ. ನಿರ್ದೇಶಕ ಶ್ರೀನಿವಾಸ್, ಮ್ಯೂಸಿಕ್ ಡೈರೆಕ್ಟರ್ ಎಸ್ ತಮನ್ ಹಾಗೂ ಮಹೇಶ್ ಬಾಬು ಒಂದು ವಾರಗಳ ಕಾಲ ದುಬೈಗೆ ಹೋಗಲಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post