T10 ಲೀಗ್ನಲ್ಲಿ ಆಡುವಂತೆ ಎಂ.ಎಸ್ ಧೋನಿಗೆ ಮನವಿ ಮಾಡಲಾಗುವುದು ಎಂದು T10 ಮುಖ್ಯಸ್ಥ ಶಾಜಿ ಮುಲ್ಕ್ ಹೇಳಿದ್ದಾರೆ. T10ಲೀಗ್ ಮೇಲೆ ಧೋನಿ ಪ್ರಭಾವ ಸಾಕಷ್ಟಿದೆ. ಹೀಗಾಗಿ ನಾವು ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮುಲ್ಕ್ ಹೇಳಿದ್ದಾರೆ.
ಭಾರತದ ಮಾಜಿ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್, ಶ್ರೀಶಾಂತ್, ಅಭಿಮನ್ಯು ಮಿಥುನ್ ಸೇರಿದಂತೆ ಹಲವರು ಈಗಾಗಲೇ T10 ಲೀಗ್ನ ಭಾಗವಾಗಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಆರಂಭಕ್ಕೆ ಇನ್ನೂ ಐದಾರು ತಿಂಗಳು ಬಾಕಿ ಇದೆ. ಆದ್ರೆ, ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ MS ಧೋನಿ ಈಗಲೇ ತಯಾರಿ ಆರಂಭಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ತಮ್ಮ ತವರು ರಾಂಚಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸ್ತಿದ್ದಾರೆ. ಮಾಹೀ ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡ್ತಿರೋ ವಿಡಿಯೋ, ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post