ರನ್ಮಷಿನ್ ವಿರಾಟ್ ಕೊಹ್ಲಿ, ಎಂತ ಗ್ರೇಟ್ ಬ್ಯಾಟ್ಸ್ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಕ್ರಿಕೆಟ್ ದುನಿಯಾಗೆ ಕೊಹ್ಲಿ ಬ್ಯಾಟಿಂಗ್ ತಾಕತ್ತು ಗೊತ್ತಾಗಿ ಅದ್ಯಾವುದೋ ಕಾಲವಾಗಿದೆ. ರೀಸೇಂಟಾಗಿ ಟಿ20 ವಿಶ್ವಕಪ್ನಲ್ಲೂ ಅದು ಮತ್ತೊಮ್ಮೆ ಪ್ರೂವ್ ಆಗಿದೆ.
ಗ್ರೌಂಡ್ ಯಾವ್ದೇ ಇರಲಿ, ಪಿಚ್ ಎಂಥದ್ದೇ ಇರಲಿ, ಬೌಲರ್ ಯಾರೇ ಆಗಿರಲಿ, ಅದ್ಯಾವುದೂ ಕೊಹ್ಲಿಗೆ ಮ್ಯಾಟರೇ ಆಗಲ್ಲ. ಹೋಮ್ ಆ್ಯಂಡ್ ಓವರ್ಸೀಸ್ ಎರಡೂ ಕಂಡೀಷನ್ಗಲ್ಲೂ, ಕೊಹ್ಲಿ ಅಬ್ಬರಿಸಿದ್ದಾರೆ. ಹಲವು ದಾಖಲೆಗಳನ್ನ ಬರೆದಿದ್ದಾರೆ. ಆದ್ರೆ, ಇಂತಹ ಕೊಹ್ಲಿಗೆ, ಈ ಬೌಲರ್ಗಳೇ ವಿಲನ್ ಆಗಿ ಕಾಡ್ತಿದ್ದಾರೆ.
ಯೆಸ್, ವಿರಾಟ್ ಕೊಹ್ಲಿ ಪೇಸ್ ಬೌಲರ್ಸ್ಗಳ ವಿರುದ್ಧ ಜಬರ್ದಸ್ತ್ ಆಗಿ ಆಡ್ತಾರೆ. ಕ್ಲಾಸ್ ಬ್ಯಾಟಿಂಗ್ ಮೂಲಕ ಮಿಂಚ್ತಾರೆ. ಆದ್ರೆ, ಅದ್ಯಾಕೋ ಸ್ಪಿನರ್ಸ್ ವಿರುದ್ಧ ಮಾತ್ರ ಕೊಹ್ಲಿ ರನ್ ಗಳಿಸಲು ಪರದಾಡ್ತಾರೆ. ಅದರಲ್ಲೂ ಎಡಗೈ ಸ್ಪಿನರ್ಸ್ ಕೊಹ್ಲಿಗೆ ಅಕ್ಷರಶಃ ಕಂಟಕವಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಕೊಹ್ಲಿ, ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿದ್ರು.
ಅತಿಹೆಚ್ಚು ಬಾರಿ ಔಟ್ ಮಾಡಿದ 4ನೇ ಬೌಲರ್ ಶಕೀಬ್.!
ಕೊಹ್ಲಿ ಎಡಗೈ ಸ್ಪಿನರ್ಸ್ ವಿರುದ್ಧ ರನ್ ಗಳಿಸಲು ಒದ್ದಾಡ್ತಾರೆ ಅನ್ನೋದಕ್ಕೆ, ಇದೊಂದು ಬೆಸ್ಟ್ ಎಕ್ಸಾಂಪಲ್. ಏಕದಿನ ಕ್ರಿಕೆಟ್ನಲ್ಲಿ ವಿರಾಟ್, 10 ಇನ್ನಿಂಗ್ಸ್ನಲ್ಲಿ 4 ಬಾರಿ ಶಕೀಬ್ ಅಲ್ ಹಸನ್ಗೆ, ವಿಕೆಟ್ ಒಪ್ಪಿಸಿದ್ದಾರೆ. ಒನ್ಡೇ ಕ್ರಿಕೆಟ್ನಲ್ಲಿ ಶಕೀಬ್, ಕೊಹ್ಲಿಯನ್ನ ಅತಿಹೆಚ್ಚು ಬಾರಿ ಔಟ್ ಮಾಡಿದ 4ನೇ ಬೌಲರ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post