ಕಲ್ಪತರು ನಾಡಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರಿದಿದೆ. ಸೋಮವಾರ ಶಿರಾ ಕ್ಷೇತ್ರದಲ್ಲಿ ಅಬ್ಬರಿಸಿದ ಕುಮಾರಸ್ವಾಮಿ ನಿನ್ನೆ ಗುಬ್ಬಿಯಲ್ಲಿ ಗುಡುಗಿದ್ದಾರೆ. ಪಂಚರತ್ನ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜೆಡಿಎಸ್ಗೆ ಅಧಿಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಎಲ್ಲರ ಕೈಯಲ್ಲೂ ಜೆಡಿಎಸ್ ಬಾವುಟ. ತೆನೆ ಹೊತ್ತು ಮಹಿಳೆಯರ ನೃತ್ಯ. ಕಾರ್ಯಕರ್ತರಿಂದ ಜೆಡಿಎಸ್ಗೆ ಜೈಕಾರ. ಜೆಡಿಎಸ್ ಱಲಿಗೆ ವಾದ್ಯ ಮೇಳಗಳ ಮೆರುಗು. ಕಿಲೋ ಮೀಟರ್ಗಟ್ಟಲೇ ಜೆಡಿಎಸ್ ಕಾರ್ಯರ್ತರು, ಅಭಿಮಾನಿಗಳ ದಂಡು. ಹೆಲಿಕಾಪ್ಟರ್ ಮೂಲಕ ಜೆಡಿಎಸ್ ನಾಯಕರ ಮೇಲೆ ಹೂಮಳೆ. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಜೆಡಿಎಸ್ ಭದ್ರಕೋಟೆ ಗುಬ್ಬಿ ಕ್ಷೇತ್ರದಲ್ಲಿ ನಡೆದ ಪಂಚರತ್ನರಥಯಾತ್ರೆಯಲ್ಲಿ.
ಟ್ರ್ಯಾಕ್ಟರ್, ಆಟೋಗಳಲ್ಲಿ ಕಾರ್ಯಕರ್ತರ ಭರ್ಜರಿ ಱಲಿ..!
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಇವತ್ತು 19ನೇ ದಿನವನ್ನ ಪೂರೈಸಿದೆ. ಬೆಳಗ್ಗೆ ಶಿರಾ ಕ್ಷೇತ್ರದಿಂದ ಹೊರಟ ಯಾತ್ರೆ ಮಧ್ಯಾಹ್ನ ಗುಬ್ಬಿ ಕ್ಷೇತ್ರ ಪ್ರವೇಶಿಸ್ತು. ಜೆಡಿಎಸ್ ಕಾರ್ಯಕರ್ತರು ಟ್ರ್ಯಾಕ್ಟರ್, ಆಟೋಗಳಲ್ಲಿ ಭರ್ಜರಿ ಱಲಿ ಮೂಲಕ ಹೆಚ್ಡಿಕೆಗೆ ಅದ್ಧೂರಿ ಸ್ವಾಗತ ಕೋರಿದ್ರು. ದಳಪತಿ ಕುಮಾರಸ್ವಾಮಿಗೆ ಹೂವು ಹಾಗೂ ಮಾವಿನಕಾಯಿಯಿಂದ ಮಾಡಿದ ಬೃಹತ್ ಹಾರ ಹಾಕಿದ್ರು. ಮಾಜಿ ಪ್ರಧಾನಿ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಗುಬ್ಬಿಯ ಮುಂದಿನ ಶಾಸಕ ನಾಗರಾಜಣ್ಣ ಅಂತ ಫೋಟೋ ಹಿಡಿದ ಅಭಿಮಾನಿಗಳು ಜೆಡಿಎಸ್ ಪರ ಜೈಕಾರ ಕೂಗಿದ್ರು. ಗುಬ್ಬಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದ ಹೆಚ್ಡಿಕೆ ಚನ್ನಬಸವೇಶ್ವರ ದೇಗುಲದ ಬಳಿ ಬಹಿರಂಗ ಸಭೆ ನಡೆಸಿದ್ರು.
ಬಳಿಕ ಱಲಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಪಂಚಭೂತಗಳ ಶಕ್ತಿಯಿಂದ ಈ ಜಗತ್ತು ಸೃಷ್ಟಿಯಾಗಿದೆ. ಮಾನವನ ದೇಹ ಪಂಚೇಂದ್ರಿಯಗಳನ್ನು ಹೊಂದಿರುವಂತೆ ನಾಡಿನ ಜನರ ಅಭಿವೃದ್ಧಿಗೆ ಪಂಚರತ್ನ ಯಾತ್ರೆ ಪೂರಕವಾಗಿದೆ. ಕಾಂಗ್ರೆಸ್-ಬಿಜೆಪಿ ಸರ್ಕಾರಗಳು ರಾಜ್ಯದ ಅಭಿವೃದ್ಧಿ ಮಾಡುವಲ್ಲಿ ವೈಫಲ್ಯವಾಗಿವೆ ಅಂತ ವಾಗ್ದಾಳಿ ನಡೆಸಿದ್ರು. ಸಮ್ಮಿಶ್ರ ಸರ್ಕಾರ ಬಂದರೆ ಮುಸ್ಲಿಂ ಸಿಎಂ ಅಂತ ಘೋಷಣೆ ಮಾಡಲಿ ಎಂಬ ಜಮೀರ್ ಸವಾಲಿಗೂ ತಿರುಗೇಟು ಕೊಟ್ರು. ಜೆಡಿಎಸ್ ಯಾತ್ರೆ ಹೋದ ಕಡೆಯೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಮಾರ್ಚ್ 25ರವರೆಗೆ ಜೆಡಿಎಸ್ ಯಾತ್ರೆ ನಡೆಯಲಿದ್ದು ಇಂದು ಗುಬ್ಬಿಯಲ್ಲಿ ಮೊದಲ ಹಂತದ ಪ್ರಚಾರಕ್ಕೆ ತೆರೆ ಬಿದ್ದಿದೆ. ನಾಳೆ ಕೆಜಿಎಫ್ನಲ್ಲಿ ಬೃಹತ್ ಸಭೆ, ನಾಡಿದ್ದು ಅಫಜಲಪುರದಲ್ಲಿ ಬೃಹತ್ ಸಮಾವೇಶ ಹಾಗೂ ಡಿ.9ರಂದು ಶಿರಹಟ್ಟಿಯಲ್ಲಿ ಕಾರ್ಯಕ್ರಮ ಇದ್ದು 4 ದಿನಗಳ ಕಾಲ ಜೆಡಿಎಸ್ ಪಂಚರತ್ನಯಾತ್ರೆ ಮುಂದೂಡಲಾಗಿದೆ. ಡಿ.11ರಿಂದ ಚಿಕ್ಕನಾಯಕನಹಳ್ಳಿಯಿಂದ ಮತ್ತೆ ಪಂಚರತ್ನಯಾತ್ರೆ ಮುಂದುವರಿಯಲಿದೆ.
ಅಭಿಮಾನದ ಮಹಾಮಳೆ.
ಪ್ರವಾಹದಂತೆ ಹರಿದು ಬಂದಿದ್ದ ಮಹಾಜನತೆಯ ಮೇಲೆ ನೀಲಾಕಾಶದಿಂದ ಪುಷ್ಪ ಸಿಂಚನ. ಇದು ಆವಿಸ್ಮರಣೀಯ ನೆನಪು ಹಾಗೂ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸದ ಪರಾಕಾಷ್ಠೆ.
ಗುಬ್ಬಿ ಕ್ಷೇತ್ರದ ಜನತೆಗೆ ಅನಂತ ಧನ್ಯವಾದಗಳು. ಕ್ಷೇತ್ರದ ಅಭ್ಯರ್ಥಿ ಶ್ರೀ ನಾಗರಾಜ್ ರಿಗೆ ಶುಭ ಹಾರೈಕೆಗಳು.#ಪಂಚರತ್ನ_ರಥಯಾತ್ರೆ#ಗುಬ್ಬಿ #ತುಮಕೂರು pic.twitter.com/ACq18e0xgO— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 6, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post