ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 9ರ ಸ್ಪರ್ಧಿಗಳು 72 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದ್ದಾರೆ. ಈ ನಡುವೆ ರೂಪೇಶ್ ರಾಜಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಕೆಲ ಸ್ಪರ್ಧಿಗಳು ಆಗಾಗ ತಮಾಷೆಯ ರೂಪದಲ್ಲಿ ಗಲಾಟೆ ಮಾಡಿಕೊಳ್ಳುತ್ತಿರ್ತಾರೆ. ಆದರೆ ಕೆಲವೊಮ್ಮೆ ಆ ಜಗಳ ಅತಿರೇಕಕ್ಕೆ ಹೋಗೋವುದು ಉಂಟು. ಇದೀಗ ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ರಾಜಣ್ಣ ನಡುವೆ ಅದೇ ರೀತಿ ಆದಂತೆ ಕಾಣ್ತಿದೆ.
ಇದನ್ನು ಓದಿ: #BiggBoss ಅಯ್ಯಯ್ಯೋ.. ಪ್ರಶಾಂತ್ ಸಂಬರ್ಗಿಗೆ ಏನಾಯ್ತು..?
ಆರಂಭದಲ್ಲಿ ಶುರುವಾದ ತಮಾಷೆ ಬಳಿಕ ಬಡಿದಾಡುವ ಸ್ಥಿತಿಗೆ ತಿರುಗಿದೆ. ನನಗೆ ಏಕೆ ಹೊಡೆದ್ರಿ ಎಂದು ರೂಪೇಶ್ ರಾಜಣ್ಣ ಕೇಳ್ತಾರೆ. ತಮಾಷೆಗೆ ಹೊಡೆದೆ ಎಂದು ಆರ್ಯವರ್ಧನ್ ಗುರೂಜಿ ಹೇಳುತ್ತಾರೆ. ಹೀಗೆ ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆ ಮಾಡಿಕೊಂಡಿದ್ದಾರೆ.
ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಯಾವಾಗಲೂ ಒಟ್ಟಿಗೆ ಬಿಗ್ಬಾಸ್ ಮನೆಯಲ್ಲಿದ್ದಾರೆ. ಅವರವರೇ ಎಂದಿನಂತೆ ಮಾತನಾಡುತ್ತಾ ಇದ್ದಾಗ ಏಕಾಏಕಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಪಿ ಥರಾ ಆಡ್ತೀರಾ ಎಂದು ರಾಜಣ್ಣ ಗುರೂಜಿಗೆ ಹೇಳಿದ್ದಾರೆ. ನಾನಲ್ಲ, ನೀನು ಕಪಿ ಹಾಗೆ ಆಡ್ತೀಯ ಎಂದು ಗುರೂಜಿ ರಾಜಣ್ಣನಿಗೆ ಹೇಳಿರೋ ವಿಡಿಯೋವನ್ನ ಕಲರ್ಸ್ ಕನ್ನಡ ಶೇರ್ ಮಾಡಿದೆ.
ಅಲ್ಲೇ ಕುಳಿತ ಇತರೆ ಸ್ಪರ್ಥಿಗಳು ಇವರಿಬ್ಬರ ಜಗಳ ನೋಡಿ ಶಾಕ್ ಆಗಿದ್ದಾರೆ. ಇವರಿಬ್ಬರ ಜಗಳವನ್ನು ಬೀಡಿಸಲು ಅರುಣ್ ಸಾಗರ್ ಹಾಗೂ ರೂಪೇಶ್ ಶೆಟ್ಟಿ ಹರಸಾಹಸ ಪಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post