2023ರ ಚುನಾವಣೆ ಹತ್ತಿರವಾಗ್ತಿದ್ದಂತೆ ರೌಡಿಗಳ ರಾಜಕೀಯ ಪ್ರವೇಶದ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ. ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತು ಬೆತ್ತನಗೆರೆ ಶಂಕರನ ಸ್ಪರ್ಧೆ ಬಗ್ಗೆ ವಿವಾದಗಳೆದ್ದಿದ್ದವು. ಇಷ್ಟಾದ್ರೂ ಚುನಾವಣೆ ಅಖಾಡಕ್ಕೆ ಸೈಲೆಂಟ್ ಸುನೀಲ ಎಂಟ್ರಿ ಕೊಡೋದು ಪಕ್ಕಾ ಎನ್ನಲಾಗ್ತಿದೆ.
ರೌಡಿ ಶೀಟರ್ ಸೈಲೆಂಟ್ ಸುನೀಲನ ಸ್ಪರ್ಧೆ ಖಚಿತ!?
ಚಾಮರಾಜಪೇಟೆಯಿಂದ ಸೈಲೆಂಟ್ ಸುನೀಲ್ ಸ್ಪರ್ಧೆ!
ಈ ಬಾರಿಯ ಚುನಾವಣೆಯಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಸ್ಪರ್ಧೆ ಮಾಡೋ ವಿಚಾರ ವಿವಾದ ಹುಟ್ಟುಹಾಕಿತ್ತು. ಚಾಮರಾಜಪೇಟೆಯಿಂದ ಬಿಜೆಪಿ ಟಿಕೆಟ್ ಅಕಾಂಕ್ಷಿ ಅಂತ ಗುಲ್ಲೆದ್ದಿತ್ತು. ಇದರ ಬಗ್ಗೆ ರಾಷ್ಟ್ರೀಯ ಪಕ್ಷಗಳ ಜೊತೆ ಪ್ರಾದೇಶಿಕ ಪಕ್ಷದ ನಾಯಕರು ಕೂಡ ಸೈಲೆಂಟ್ ಸುನೀಲ್ ಸ್ಪರ್ಧೆ ಬಗ್ಗೆ ಪರ, ವಿರೋಧದ ಮಾತುಗಳನ್ನ ಆಡಿದ್ರು. ಸಾಕಷ್ಟು ವಿರೋಧ ಸಹ ಎದ್ದಿದ್ವು. ಇಷ್ಟೆಲ್ಲದರ ಮಧ್ಯೆಯೂ ರೌಡಿ ಶೀಟರ್ ಸೈಲೆಂಟ್ ಸುನೀಲ ಈ ಬಾರಿ ಸ್ಪರ್ಧೆ ಮಾಡೋದು ಖಚಿತ ಎನ್ನಲಾಗ್ತಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸೈಲೆಂಟ್ ಸುನೀಲ್ ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿಯಿಂದ ರೌಡಿಶೀಟರ್ ಸೈಲೆಂಟ್ ಸುನೀಲ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕೆಂದು ಸೈಲೆಂಟ್ ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಬಿಜೆಪಿ ನಾಯಕರ ಜೊತೆಗೆ ಸೈಲೆಂಟ್ ಸುನೀಲ ಗುರುತಿಸಿಕೊಂಡಿದ್ದಾರೆ. ಬಿಜೆಪಿಯಲ್ಲೂ ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಚರ್ಚೆಗಳಾಗ್ತಿವೆ.
ಇದನ್ನೂ ಓದಿ: ಜಮೀರ್ ಸೋಲಿಸಲು ‘ಸೈಲೆಂಟ್’ ಪ್ಲಾನ್.. ಗುಪ್ತ್ ಗುಪ್ತ್ ಸಭೆಯಲ್ಲಿ ಒಂದಾದ ಹಳೇ ದೋಸ್ತಿಗಳು..!
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭದ್ರಕೋಟೆ. ಜಮೀರ್ ಎದುರಿಸಬೇಕಾದ್ರೆ, ಸ್ಟ್ರಾಂಗ್ ಬ್ಯಾಕ್‌ಗ್ರೌಂಡ್ ಇರೋರು ಬೇಕು. ಜೊತೆಗೆ ಚಾಮರಾಜಪೇಟೆ ಕ್ಷೇತ್ರ ರೌಡಿಗಳು ವಾಸವಿದ್ದಂತಹ ಸ್ಥಳ. ಹೀಗಾಗಿ ರೌಡಿಶೀಟರ್ ಇದ್ದರೆ ಏನೇನೂ ಸಮಸ್ಯೆಯಿಲ್ಲ ಎಂಬ ಚರ್ಚೆಗಳಾಗ್ತಿವೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ, ರೌಡಿಗೆ ಮಣೆ ಹಾಕಿ ಡ್ಯಾಮೇಜ್ ಮಾಡಿಕೊಳ್ಳಲ್ಲ ಎಂಬ ಮಾತುಗಳು ಸಹ ಕೇಳಿ ಬರ್ತಿವೆ. ಒಂದು ವೇಳೆ ಬಿಜೆಪಿ ಮಣೆ ಹಾಕಲಿಲ್ಲ ಅಂದ್ರೂ ಸೈಲೆಂಟ್ ಸುನೀಲ್ ಪಕ್ಷೇತರರಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಬೆತ್ತನಗೆರೆ ಶಂಕರನ ವಿರುದ್ಧ ಮತ್ತೊಂದು ಪ್ರಕರಣ!
ಮತ್ತೊಂದು ಕಡೆ ಬೆತ್ತನಗೆರೆ ಶಂಕರನ ವಿರುದ್ಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ನವೆಂಬರ್ 30ರಂದು ಶಂಕರನ ವಿರುದ್ಧ ಸುಲಿಗೆ ಹಾಗೂ ಬೆದರಿಕೆ ಕೇಸ್ ರಿಜಿಸ್ಟರ್ ಆದ್ರೂ, ವಿಚಾರಣೆಗೂ ಕರೆಸಿಲ್ಲ ಅಂತ ಆರೋಪ ಕೇಳಿ ಬಂದಿದೆ.
ಜಮೀನು ವಿಚಾರವಾಗಿ ಶಂಕರನ ವಿರುದ್ಧ ಸುಲಿಗೆ ಮತ್ತು ಬೆದರಿಕೆಯ ಆರೋಪ ಕೇಳಿ ಬಂದಿದೆ. ಬೆಂಗಳೂರು ನಿವಾಸಿ ಕೃಷ್ಣಂರಾಜು 2006ರಲ್ಲಿ ಖದೀರಿ ಜಾಗ ಖರೀದಿ ಮಾಡಿದ್ದ. ನಗದು ಮತ್ತು ಚೆಕ್ ಮೂಲಕ 5 ಲಕ್ಷಕ್ಕೆ ಕ್ರಯ ಮಾಡಲಾಗಿತ್ತು. ಆದ್ರೆ ಇದಕ್ಕೆ 2014ರಲ್ಲಿ ನಾರಾಯಣಸ್ವಾಮಿ ಮಗ ಅರುಣಕುಮಾರ್ ಕ್ಯಾತೆ ತೆಗೆದಿದ್ದ. PTCL ಕಾಯ್ದೆಯಂತೆ ಮಾರಾಟಕ್ಕೆ ಸರ್ಕಾರದ ಅನುಮತಿ ಬೇಕು. ಅನುಮತಿ ಬೇಕು ಅಂತ ಬೆತ್ತನಗೆರೆ ಶಂಕರನನ್ನ ಅರುಣ್ ಕರೆಸಿದ್ದ. ಜಮೀನು ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಡುತ್ತೇನೆ ಎಂದಿದ್ದಾರೆ.
ಆದ್ರೆ ಶಂಕರನ ಮಾತಿಗೆ ಕೃಷ್ಣಂರಾಜು ಅವರು ಒಪ್ಪಿರಲಿಲ್ಲ. ಆಗ ರಿಜಿಸ್ಟರ್ ಆಗಬೇಕಂದ್ರೆ 15 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದ. ಹಣ ಕೊಡದೇ ಇದ್ದಲ್ಲಿ ತೊಂದರೆ ನೀಡುವುದಾಗಿಯೂ ಧಮ್ಕಿ ಹಾಕಿದ್ದಾನೆ ಅಂತ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಂಕರನ ವಿರುದ್ಧ ಐಪಿಸಿ ಸೆಕ್ಷನ್ 420, 384, 506 ಮತ್ತು ಐಪಿಸಿ ಸೆಕ್ಷನ್ 34 ಅಡಿ ಪ್ರಕರಣ ದಾಖಲಾಗಿತ್ತು. ನವೆಂಬರ್ 30ರಂದು ಪ್ರಕರಣ ದಾಖಲಾದ್ರೂ ಕನಿಷ್ಠ ಪಕ್ಷ ಬೆತ್ತನಗೆರೆ ಶಂಕರನ ವಿಚಾರಣೆಗೂ ಕರೆಸಿಲ್ಲ ಅಂತ ಆರೋಪಿಸಲಾಗಿದೆ. ವಿಚಾರಣೆ ನಡೆಸೋದಕ್ಕೆ ಪೊಲೀಸರು ಹಿಂದೇಟು ಹಾಕ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post