ವಿರಾಟ್ ಕೊಹ್ಲಿ, ಬಾಂಗ್ಲಾದೇಶ ವಿರುದ್ಧ ಅಬ್ಬರಿಸಿ ಬೊಬ್ಬರಿಯುತ್ತಿದ್ರು. ಆದರೆ ಅದ್ಯಾಕೋ, ಕಳೆದ 7 ವರ್ಷಗಳಿಂದ ಬಾಂಗ್ಲಾ ವಿರುದ್ಧ, ಕೊಹ್ಲಿ ಆಟ ನಡೀತಿಲ್ಲ. ಬಾಂಗ್ಲಾ ಹುಲಿಗಳೆದ್ರು ವಿರಾಟ್, ರನ್ಗಳಿಸೋಕೆ ಪರದಾಡ್ತಿದ್ದಾರೆ. ಕ್ರಿಕೆಟ್ ದುನಿಯಾದಲ್ಲಿ ಏಷ್ಯಾಕಪ್ ಟೂರ್ನಿಗೂ ಮುನ್ನ, ವಿರಾಟ್ ಕೊಹ್ಲಿ ಫಾರ್ಮ್ನದ್ದೇ, ಬಿಗ್ ಡಿಬೇಟ್ ಆಗಿತ್ತು. ಏಷ್ಯಾಕಪ್ ಟೂರ್ನಿಯಲ್ಲಿ ಕೊಹ್ಲಿ ಸ್ಟ್ರಾಂಗ್ಕಮ್ ಬ್ಯಾಕ್ ಮಾಡಿದ್ರು. ತಮ್ಮ ವಿರುದ್ಧದ ಟೀಕೆಗಳಿಗೆ, ಬ್ಯಾಟ್ನಿಂದಲೇ ಉತ್ತರಿಸಿದ್ದಾರೆ. T20 ಫಾರ್ಮೆಟ್ನಲ್ಲೇನೋ ವಿರಾಟ್ ಕೊಹ್ಲಿ, ತಮ್ಮ ರಿಯಲ್ ಪವರ್ ತೋರಿಸಿದ್ದಾಗಿದೆ. ಒನ್ಡೇ ಫಾರ್ಮೆಟ್ನಲ್ಲಿ ಮಾತ್ರ, ಕಿಂಗ್ ಕೊಹ್ಲಿ ಇನ್ನು ತಮ್ಮ ಹಳೆ ಖದರ್ಗೆ ಮರಳಿಲ್ಲ.
ಬಾಂಗ್ಲಾ ವಿರುದ್ಧ ರನ್ಗಳಿಸಲು ರನ್ಮಷಿನ್ ಪರದಾಟ
ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ವೈಫಲ್ಯ ಅನುಭವಿಸಿದ್ರು. ಈ ಪಂದ್ಯ ಅಷ್ಟೇ ಅಲ್ಲ. ಕಳೆದ 7 ವರ್ಷಗಳಿಂದಲೂ ಒನ್ ಡೇ ಕ್ರಿಕೆಟ್ನಲ್ಲಿ ಕೊಹ್ಲಿ, ಬಾಂಗ್ಲಾ ಹುಲಿಗಳ ವಿರುದ್ಧ ಘರ್ಜನೆ ಅಷ್ಟಕಷ್ಟೇ. 2015ರಿಂದ 2022ರವರೆಗೆ ಕೊಹ್ಲಿ ಬಾಂಗ್ಲಾದೇಶ ವಿರುದ್ಧ, ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ತಮ್ಮ ರೇಂಜ್ಗೆ ತಕ್ಕ ಆಟವಾಡಿಲ್ಲ. ಇದಕ್ಕೆ ಈ ಅಂಕಿಶಗಳೇ ಸಾಕ್ಷಿ. 2015 ರಿಂದ 2022ರವರೆಗೂ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ವಿರುದ್ಧ 7 ಪಂದ್ಯಗಳನ್ನಾಡಿದ್ದಾರೆ. ಕೇವಲ 30.5ರ ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ. ಇದು ಕೊಹ್ಲಿ ರೇಂಜ್, ಅಲ್ಲವೇ ಅಲ್ಲ. ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ, ಬಾಂಗ್ಲಾ ವಿರುದ್ಧ ಪರದಾಡ್ತಿದ್ದಾರೆ ಅನ್ನೋದಕ್ಕೆ ಇದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.
T20 ಆಯ್ತು, ODIನಲ್ಲಿ ಅಬ್ಬರಿಸೋದು ಯಾವಾಗ.?
T20 ವಿಶ್ವಕಪ್ ಟೂರ್ನಿಗೂ ಮುನ್ನ ಕೊಹ್ಲಿ ಫಾರ್ಮ್ಗೆ ಬಂದ್ರೆ ಸಾಕು ಎನ್ನುವಂತಿತ್ತು. ಇದೀಗ ಒನ್ಡೇ ಫಾರ್ಮೆಟ್ನ್ಲಿ ಕೊಹ್ಲಿ, ಯಾವಾಗ ಫಾರ್ಮ್ಗೆ ಮರಳ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಒಂದೆಡೆ ವಿರಾಟ್ ಕೊಹ್ಲಿ ಶತಕ ಸಿಡಿಸಿ, ಮೂರು ವರ್ಷಗಳೇ ಕಳೆದಿವೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಸರಾಸರಿ ಕೂಡ, ಪಾತಾಳಕ್ಕೆ ಕುಸಿದಿದೆ. ಈ ವರ್ಷದಲ್ಲಿ ವಿರಾಟ್ ಕೊಹ್ಲಿ 9 ಏಕದಿನ ಪಂದ್ಯಗಳನ್ನಾಡಿದ್ದು, ಜಸ್ಟ್ 20.44ರ ಸರಸಾರಿಯಲ್ಲಿ 184 ರನ್ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬಿಟ್ಟರೆ ಮತ್ಯಾವ ಸರಣಿಯಲ್ಲೂ ಕೊಹ್ಲಿ ಅರ್ಧಶತಕದ ಗಡಿ ದಾಟಿಲ್ಲ. ಟಿ20 ಯಂತೆ ಏಕದಿನ ಮಾದರಿಯಲ್ಲೂ ವಿರಾಟ್ ಕೊಹ್ಲಿ ಅಬ್ಬರಿಸಲಿ. ಇಂದು ಬಾಂಗ್ಲಾ ವಿರುದ್ಧ ನಡೆಯೋ ಎರಡನೇ ಪಂದ್ಯದಲ್ಲಿ, ಜಬರ್ದಸ್ತ್ ಇನ್ನಿಂಗ್ಸ್ ಮೂಲಕ ಮಿಂಚಲಿ ಅನ್ನೋದೇ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶಯ. .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post