ನಿಮ್ಮ ಗುರಿ ಏನು? ಗೆಲುವಾ, ಸೋಲಾ? ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಫ್ಯಾನ್ಸ್ ಕೇಳ್ತಿರೋ ಪ್ರಶ್ನೆಯಿದು. ಹಿಂದಾದ ಮುಖಭಂಗ, ಸೋಲಿನ ಅವಮಾನಕ್ಕೆ ಬ್ರೇಕ್ ಹಾಕಿ, ನಮ್ಮ ತಂಡ ಚಾಂಪಿಯನ್ ಆಗುತ್ತೆ ಅನ್ನೋದು ಅಭಿಮಾನಿಗಳ ನಿರೀಕ್ಷೆ. ಟೀಮ್ ಮ್ಯಾನೇಜ್ಮೆಂಟ್ಗೆ, ಕಪ್ ಗೆಲ್ಲೋ ಉದ್ದೇಶವೇ ಇದ್ದಂತಿಲ್ಲ.
ಟೀಮ್ ಇಂಡಿಯಾ ಅಭಿಮಾನಿಗಳನ್ನ ಇನ್ನೂ, ಟಿ20 ವಿಶ್ವಕಪ್ ಸೋಲಿನ ಕಹಿ ನೆನಪೇ ಕಾಡ್ತಿದೆ. ಅದಾಗಲೇ ಮತ್ತೊಂದು ಸೋಲು, ಬರ ಸಿಡಿಲಿನಂತೆ ಅಪ್ಪಳಿಸಿದೆ. ಅಂಡರ್ ಡಾಗ್ ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ, ಹೀನಾಯ ಸೋಲಿಗೆ ಟೀಮ್ ಇಂಡಿಯಾ ತುತ್ತಾಗಿದೆ. ಈ ಒಂದು ಹೀನಾಯ ಸೋಲು, ಆಟಗಾರರ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ.
ರೋಹಿತ್ ಶರ್ಮಾನ ಇನ್ನೆಷ್ಟು ದಿನ ನಂಬ್ತೀರಾ?
ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಇವರಿಬ್ಬರ ಫಾರ್ಮ್ & ಪರ್ಫಾಮೆನ್ಸ್ ಬಗ್ಗೆ ಹೆಚ್ಚು ಡೀಟೇಲ್ಸ್ ಬೇಕಿಲ್ಲ. ಕ್ರಿಸ್ ಕಚ್ಚಿ ನಿಂತು ರನ್ಗಳಿಸೋದಕ್ಕಿಂತ, ಹೋದಷ್ಟೇ ವೇಗವಾಗಿ ಪೆವಿಲಿಯನ್ಗೆ ವಾಪಾಸ್ಸಾಗ್ತಿದ್ದಾರೆ. ಇವರಿಬ್ಬರನ್ನೂ ರಿಪ್ಲೇಸ್ ಮಾಡೋಕೆ ಯಂಗ್ಸ್ಟರ್ಗಳ ದಂಡೇ ರೆಡಿ ಇದೆ. ಆದ್ರೆ, ನಾಯಕ, ಉಪನಾಯಕನ ಸೀನಿಯರ್ ಕೋಟಾ ಮುಂದೆ ಯುವ ಆಟಗಾರರ ಟ್ಯಾಲೆಂಟ್ ಬೆಲೆಯೇ ಇಲ್ಲದಂತಾಗಿದೆ.
ವಿರಾಟ್ ಕೊಹ್ಲಿಯನ್ನ ಇನ್ನೆಷ್ಟು ದಿನ ಮೆರೆಸ್ತೀರಾ?
ವಿರಾಟ್ ಕೊಹ್ಲಿ ವಿಶ್ವಕ್ರಿಕೆಟ್ ಲೋಕದ ಮಾಡ್ರನ್ ಡೇ ಲೆಜೆಂಡ್ ಎಂತಾ ಸವಾಲಿದ್ರೂ ಮುನ್ನುಗ್ಗಿ ಹೋರಾಡಬಲ್ಲ ಟ್ರೂ ವಾರಿಯರ್. ಇದರಲ್ಲಿ ಡೌಟೇ ಬೇಡ. ಒಂಡೇ ಫಾರ್ಮೆಟ್ನಲ್ಲಿ ಕಳೆದೊಂದು ವರ್ಷದಿಂದ ಕೊಹ್ಲಿ ಫುಲ್ ಢಲ್. ಈ ವರ್ಷ ಆಡಿದ 9 ಪಂದ್ಯದ ಸರಾಸರಿ, ಕೇವಲ 20.44. ಹೀಗಿದ್ದ ಮೇಲೂ ಕೊಹ್ಲಿಯನ್ನೇ ನೆಚ್ಚಿಕೊಂಡಿರೋಕಾಗುತ್ತಾ.?
ಪಂತ್ ಪರಾಕ್ರಮ ನಡೀತಿಲ್ಲ, ಆದ್ರೂ ಯಾಕಷ್ಟು ವಿಶ್ವಾಸ..?
ಈ ವರ್ಷ ಇಂಗ್ಲೆಂಡ್ ವಿರುದ್ಧ ಒಂದು ಸೆಂಚೂರಿ ಸಿಡಿಸಿದ್ದು ಬಿಟ್ರೆ, ಪಂತ್ ಟಿ20 ಹಾಗೂ ಏಕದಿನ ಎರಡರಲ್ಲೂ ಅಟ್ಟರ್ಪ್ಲಾಫ್. ಪಂತ್ ಪರಾಕ್ರಮ ಮೆರೀತಾರೆ ಅಂತಾ ಎಲ್ರೂ ನಂಬಿದ್ರು. ಆದ್ರೆ, ಬೌಲರ್ಗಳಿಗೆ ರಿಷಭ್ ಸುಲಭದ ತುತ್ತಾಗ್ತಿದ್ದಾರೆ. ಡೆಲ್ಲಿ ಡ್ಯಾಶರ್ ಬ್ಯಾಟಿಂಗ್ನಲ್ಲಿ ಧಮ್ಮೇ ಇಲ್ಲ. ಅಂದ್ರೂ, ಮ್ಯಾನೇಜ್ಮೆಂಟ್ಗೆ ಯಾಕಿಷ್ಟು ವಿಶ್ವಾಸ ಅನ್ನೋದೇ ಅರ್ಥ ಆಗ್ತಿಲ್ಲ. ಪಂತ್ ರಿಪ್ಲೇಸ್ಮೆಂಟ್ಗೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ಗಿಂತ ಬೆಸ್ಟ್ ಪ್ಲೇಯರ್ ಬೇಕಾ.?
ಚಮಕ್ ಕೊಡೋ ಬಿಷ್ನೋಯ್ಗೆ ಬಿಸ್ಕೇಟ್ ಹಾಕಿದ್ಯಾಕೆ..?
ರಿಸ್ಟ್ ಸ್ಪಿನ್ನರ್ ರವಿ ಬಿಷ್ನೋಯ್ ಎದುರಾಳಿ ಬ್ಯಾಟರ್ಗಳಿಗೆ ಸಖತ್ ಆಗಿ ಚಮಕ್ ಕೊಡ್ತಾರೆ. ಬೌಲಿಂಗ್ ಜೊತೆ ಫೀಲ್ಡಿಂಗ್ನಲ್ಲೂ ಬಿಷ್ನೋಯ್ ಸಾಲಿಡ್ ಪರ್ಫಾಮರ್. ಆದ್ರೆ, ಚಾನ್ಸ್ ಅನ್ನೋದೇ ಮರೀಚಿಕೆ.
ಬೂಮ್ರಾ, ಶಮಿ, ಭುವಿಯನ್ನ ಮರೆತುಬಿಡಿ..!
ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಬೇಕು ಅಂದ್ರೆ, ಹಳೆ ಫಾರ್ಮುಲಾಗೆ ಮೊದಲು ಗುಡ್ ಬೈ ಹೇಳ್ಬೇಕು. ಬೌಲಿಂಗ್ ಯುನಿಟ್ಗೂ ಸರ್ಜರಿ ಮಾಡಲೇಬೇಕು. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ಗಿಂತಲೂ ಬೆಸ್ಟ್ ಬೌಲರ್ಸ್ ಭಾರತದಲ್ಲಿದ್ದಾರೆ ಅನ್ನೋದನ್ನ, ಮೊದ್ಲು ಅರ್ಥ ಮಾಡಿಕೊಳ್ಳಬೇಕು.
dependency is most foolish thing to do ಅನ್ನೋ ಮಾತಿದೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕೂಡ, ಈ ಮಾತನ್ನ ಅರ್ಥ ಮಾಡಿಕೊಳ್ಳಬೇಕಿದೆ. ಸ್ಟಾರ್ಗಳು, ಅನುಭವಿಗಳು ಅನ್ನೋ ಟ್ಯಾಗ್ಲೈನ್ಗೆ ಕಟ್ಟಿ ಬೀಳದೇ ಟ್ಯಾಲೆಂಟ್ ಹಾಗೂ ಪರ್ಫಾಮೆನ್ಸ್ಗೆ ಮೊದಲು ಮಣೆ ಹಾಕ್ಬೇಕು.. ಹಾಗಾದ್ರೆ ಮಾತ್ರ, ಮುಖಭಂಗದಿಂದ ಪಾರಾಗೋಕೆ ಸಾಧ್ಯ. ವಿಶ್ವಕಪ್ ಗೆಲ್ಲೋಕೂ ಸಾಧ್ಯ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]ve.com
Discussion about this post