ಹುಟ್ಟು ಅನ್ನೋದು ವರ. ಹುಟ್ಟಿದ ಮೇಲೆ ಸಾವು ಖಚಿತ. ಆದ್ರೂ ಹುಟ್ಟಿದ ಪ್ರತಿ ಮನುಷ್ಯನಿಗೂ ಸಾವಿನ ಭಯ ಕಾಡುತ್ತೆ. ಹುಟ್ಟಿ, ಸಾಯೋ ಮೊದಲು ಏನಾದ್ರೂ ಸಾಧಿಸು ಅನ್ನೋ ಕಿವಿ ಮಾತನ್ನು ದೊಡ್ಡವರು ಹೇಳಿದ್ದಾರೆ. ಆದರೆ ಹೀಗೆ ಸಾಧಿಸಿದವರಿಗೆ, ಜಗತ್ತನ್ನೇ ತಮ್ಮ ಬೆರಳ ತುದಿಯಲ್ಲಿ ಆಡಿಸೋ ಶ್ರೀಮಂತರಿಗೂ ಈ ಸಾವಿನ ಭಯ ಮಾತ್ರ ಬಿಟ್ಟಿಲ್ಲ. ಅಂತಹ ಒಬ್ಬ ಶ್ರೀಮಂತ ವ್ಯಕ್ತಿಗೆ ಈಗ ಸಾವಿನ ಭಯ ಕಾಡ್ತಿದೆ.
ಜಗತ್ತಿನ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಇನ್ಫಾರ್ಮೇಷನ್ ನೀಡಿದ್ದೇವು. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಸಿಬ್ಬಂದಿಯ ಊಟಕ್ಕೂ ಕೊಕ್ಕೆ ಹಾಕೋ ಪರಿಸ್ಥಿತಿಗೆ ಹೋಗಿದ್ದಾರಾ ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವು. ಎಲಾನ್ ಮಸ್ಕ್ಗೆ ಈ ವರ್ಷ ಲಾಸ್ ಮೇಲೆ ಲಾಸ್ ಆಗ್ತಿದೆ. ಅದರಲ್ಲೂ ಪ್ರತಿ ದಿನವೂ 2500 ಕೋಟಿ ರೂಪಾಯಿಯಷ್ಟು ಹಣವನ್ನ ಅವ್ರು ಕಳೆದುಕೊಳ್ತಿದ್ದಾರೆ. ಸದ್ಯ ಅದೇ ಎಲಾನ್ ಮಸ್ಕ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರಿಗೆ ಕಾಡ್ತಿರುವ ಸಾವಿನ ಭಯ. ಇದನ್ನ ನಾವು ಹೇಳ್ತಿರೋದಲ್ಲ, ಖುದ್ದು ಎಲಾನ್ ಮಸ್ಕ್ ಹೇಳಿದ್ದಾರೆ.
ಬ್ಯುಸಿನೆಸ್ನಲ್ಲಿ ಲಾಸ್ ಆಗೋದು ಲಾಭ ತಗೊಳ್ಳೋದು ಇದೆಲ್ಲವೂ ಎಲಾನ್ ಮಸ್ಕ್ನಂತಹ ದಿಗ್ಗಜ ಉದ್ಯಮಿಗಳಿಗೆ ಕಾಮನ್ ವಿಷಯ. ಆದ್ರೆ ಜಗತ್ತಿನ ನಂಬರ್ 1 ಶ್ರೀಮಂತನಿಗೆ ಜೀವ ಭಯ ಕಾಡ್ತಿರೋದಕ್ಕೆ ಕಾರಣವೇ ಬೇರೆ ಇದೆ. ಅದ್ರಲ್ಲೂ ತಮಗೆ ಏನಾದ್ರೂ ಕೆಟ್ಟದಾಗಬಹುದು ಅನ್ನೋ ಆತಂಕ ಎಲಾನ್ ಮಸ್ಕ್ರನ್ನ ಕಾಡ್ತಾ ಇರುತ್ತಂತೆ. ಇದರಲ್ಲಿ ಅತೀ ಹೆಚ್ಚಾಗಿ ಭಯಪಡಿಸೋದು ಯಾರಾದ್ರೂ ತಮ್ಮನ್ನ ಗುಂಡಿಕ್ಕಿ ಕೊಲ್ಲಬಹುದು ಅನ್ನೋ ಭೀತಿ. ಇದನ್ನ ಎಲಾನ್ ಮಸ್ಕ್ ಖುದ್ದು ಹೇಳಿದ್ದಾರೆ. ಟ್ವಿಟರ್ ಸ್ಪೇಸಸ್ನ ಆಡಿಯೋ ಚಾಟ್ನಲ್ಲಿ ಮಾತಾಡುವಾಗ ತಮನ್ನ ಯಾರಾದ್ರೂ ಗುಂಡಿಟ್ಟು ಕೊಲ್ಲುವ ಸಾಧ್ಯತೆ ದಟ್ಟವಾಗಿದೆ ಅಂತ ಮಸ್ಕ್ ಹೇಳಿದ್ದಾರೆ.
ಇದನ್ನು ಓದಿ: ಈ ವರ್ಷ ಮಸ್ಕ್ಗೆ 8 ಲಕ್ಷ ಕೋಟಿ ರೂಪಾಯಿ ನಷ್ಟ.. ನೌಕರರ ಊಟಕ್ಕೂ ಕೊಕ್ಕೆ ಹಾಕ್ತಾರ ಶ್ರೀಮಂತ ವ್ಯಕ್ತಿ..?
ನನಗೆ ಏನಾದ್ರೂ ಕೆಟ್ಟದಾಗಬಹುದು ಅನ್ನೋ ಆತಂಕವಿದೆ. ಅದ್ರಲ್ಲೂ ಗುಂಡಿಟ್ಟು ಕೊಲ್ಲಬಹುದು ಎಂಬ ಭಯವೂ ಇದೆ. ಹಾಗಾಗಿ ನಾನು ತೆರೆದ ವಾಹಗಳಲ್ಲಿ ಎಲ್ಲೂ ಕಾಣಿಸಿಕೊಳ್ಳಲ್ಲ. ಬಹಿರಂಗವಾಗಿ ಸಭೆ, ಸಮಾರಂಭಗಳಲ್ಲಿ ಭಾಗಿಯಾಗುವುದಿಲ್ಲ. ಯಾರನ್ನಾದ್ರೂ ಕೊಲ್ಲಬೇಕು ಅಂದ್ರೆ ಅದೇನೂ ಕಷ್ಟವೂ ಅಲ್ಲ. ನನ್ನ ವಿಚಾರದಲ್ಲಿ ಯಾರೂ ಹಾಗೆ ಮಾಡದಿರಲೆಂದು ಪ್ರಾರ್ಥಿಸುತ್ತೇನೆ ಅಂತ ಎಲಾನ್ ಮಸ್ಕ್ ಟ್ವಿಟರ್ ಸ್ಪೇಸ್ ಆಡಿಯೋ ಚಾಟ್ನಲ್ಲಿ ಮಸ್ಕ್ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಮಸ್ಕ್ ಇನ್ನೊಂದಷ್ಟು ವಿಚಾರಗಳನ್ನೂ ಇದೇ ವೇಳೆ ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ಟ್ವಿಟರ್ನ ಇತ್ತೀಚಿಗಷ್ಟೇ ಖರೀದಿಸಿರುವ ಎಲಾನ್ ಮಸ್ಕ್ ವಾಕ್ ಸ್ವಾತಂತ್ರ್ಯದ ಬಗ್ಗೆಯೂ ತಮ್ಮ ಅನಿಸಿಕೆಗಳನ್ನ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಮಸ್ಕ್ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ರೂ, ಇಷ್ಟು ಓಪನ್ ಆಗಿ ತಮ್ಮ ಆಲೋಚನೆಗಳನ್ನ ಎಲಾನ್ ಮಸ್ಕ್ ಹೇಳಿಕೊಂಡಿದ್ದು ಇದೇ ಮೊದಲು ಅನಿಸುತ್ತೆ. ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾ, ಟ್ವಿಟರ್ ಬಗ್ಗೆ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಮಸ್ಕ್. ನಮಗೆ ತುಳಿತಕ್ಕೆ ಒಳಗಾಗದಂತಹ ಭವಿಷ್ಯದ ಅವಶ್ಯಕತೆ ಇದೆ. ನಮ್ಮ ಮಾತುಗಳನ್ನ ಯಾರೂ ಹತ್ತಿಕ್ಕಲಾರದ ವಾತಾವರಣ ಇರಬೇಕು. ಯಾವುದೇ ಭಯ, ಭೀತಿ ಇಲ್ಲದೆ ನಮ್ಮ ಅನಿಸಿಕೆ ಹೇಳುವಂತಿರಬೇಕು. ನಮ್ಮ ಹೇಳಿಕೆಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಪರಿಸ್ಥಿತಿ ಇರಬಾರದು ಅಂತಲೂ ಮಸ್ಕ್ ಹೇಳಿದ್ದಾರೆ.
ಎಲಾನ್ ಮಸ್ಕ್ಗೆ ಜೀವ ಭಯ ಕಾಡ್ತಿರೋದು ಯಾಕೆ ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ಅವ್ರು ಜಗತ್ತಿನ ನಂಬರ್ ಶ್ರೀಮಂತ, ಉದ್ಯಮಿ, ಇದೆಲ್ಲಕ್ಕಿಂತಲೂ ಎಲಾನ್ ಮಸ್ಕ್ ಇತ್ತೀಚಿನ ದಿನಗಳಲ್ಲಿ ತಮಗೆ ತೋಚಿದ್ದನ್ನು ನೇರಾ ನೇರ ಹೇಳ್ತಲೇ ಬಂದಿದ್ದಾರೆ. ಅದ್ರಲ್ಲೂ ಟ್ವಿಟರ್ನ ತಮ್ಮ ತೆಕ್ಕೆಗೆ ತೆಗೆದುಕೊಂಡು ಬಂದ ಮೇಲೆ ಫ್ರೀ ಸ್ಪೀಚ್ ಬಗ್ಗೆ ತಮ್ಮ ನಿಲುವನ್ನ ಬಹಿರಂಗವಾಗಿ ಮತ್ತಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ವ್ಯಕ್ತಪಡಿಸುತ್ತಲೂ ಇದ್ದಾರೆ.
ವಿಶೇಷ ವರದಿ: ನವೀನ್ ಕುಮಾರ್ ಕುಲಕರ್ಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post