ಬಾಂಗ್ಲಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದ ಟೀಂ ಇಂಡಿಯಾಗೆ ಇಂದು ಮತ್ತೊಂದು ಸವಾಲ್ ಎದುರಾಗಲಿದೆ. ಟಿ-20 ಸರಣಿಯನ್ನ ಗೆಲ್ಲಲೇಬೇಕಾದರೆ, ರೋಹಿತ್ ಪಡೆಗೆ ಇಂದು ಮಾಡು ಇಲ್ಲ ಮಡಿ ಹೋರಾಟದ ಅನಿವಾರ್ಯತೆ ಇದೆ.
ಇಂದು ಬೆಳಗ್ಗೆ ಢಾಕಾದಲ್ಲಿರುವ ಬಾಂಗ್ಲಾ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಆರಂಭವಾಗಲಿದೆ. ಭಾರತ 2015ರಲ್ಲಿ ಪ್ರವಾಸ ಕೈಗೊಂಡಾಗ, ಬಾಂಗ್ಲಾ ತಂಡವು ಏಕದಿನ ಸರಣಿಯನ್ನ 2-1 ಅಂತರದಿಂದ ಗೆದ್ದುಕೊಂಡಿತ್ತು. ಹೀಗಾಗಿ ಮತ್ತೊಮ್ಮೆ ಏಕದಿನ ಸರಣಿಯನ್ನ ತನ್ನದಾಗಿಸಿಕೊಳ್ಳಲು ಬಾಂಗ್ಲಾ ಪಡೆ ಇದೆ. ಹೀಗಾಗಿ ಬಾಂಗ್ಲಾ ಹುಲಿಗಳಿಗೆ ನೀರು ಕುಡಿಸಲು ಟೀಂ ಇಂಡಿಯಾ ಭರ್ಜರಿ ಕಸರತ್ತು ನಡೆಸಲೇಬೇಕಾಗಿದೆ.
ಮೊನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡವು ನಾಲ್ವರು ಆಲ್ರೌಂಡರ್ಗಳೊಂದಿಗೆ ಕಣಕ್ಕೆ ಇಳಿದಿತ್ತು.
ಬ್ಯಾಟಿಂಗ್ನಲ್ಲಿ ನೀರಸ ಪ್ರದರ್ಶನ ತೋರಿಸಿದ್ದ ಈ ಆಟಗಾರರು, ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶ ನೀಡಿದ್ದಾರೆ. ಆದರೆ ಮೊದಲ ಪಂದ್ಯ ಸೋತ ಹಿನ್ನೆಲೆಯಲ್ಲಿ ಇಂದು ನಡೆಯುವ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದಷ್ಟು ಬದಲಾವಣೆಗಳು ಅನಿವಾರ್ಯವಾಗಿದೆ. ಕೆಲವು ವರದಿಗಳ ಪ್ರಕಾರ, ಶಿಖರ್ ಧವನ್ ಅವರನ್ನ ಇಂದು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post