ವಿವಾಹ ಬಂಧನಕ್ಕೆ ಕಾಲಿಡಲು ಸಜ್ಜಾಗಿದ್ದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರಿಗೆ ಕೈ ಹಿಡಿಯಬೇಕಿದ್ದ ನಟ ವಿದ್ಯಾಭರಣ್ ವಿವಾದವೊಂದರಲ್ಲಿ ಸಿಲುಕಿದ್ದರು. ಕೆಲ ದಿನಗಳ ಹಿಂದಷ್ಟೇ ಸೋಷಿಯಲ್ ಮಿಡಿಯಾದಲ್ಲಿ ಆಡಿಯೋ ಫುಲ್ ವೈರಲ್ ಆಗಿತ್ತು. ವಿದ್ಯಾಭರಣ್ ಇಬ್ಬರು ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ದಾರೆ ಎನ್ನುವ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. ಇದಾದ ಬಳಿಕ ನಟಿ ವೈಷ್ಣವಿ ಮದುವೆ ಮುರಿದುಕೊಂಡಿದ್ದೇವೆ ಎಂದು ಮಾಹಿತಿಯನ್ನು ಸಹ ನೀಡಿದ್ದರು.
ಇದನ್ನು ಓದಿ:‘ಹಿಂಗ್ ಆಗುತ್ತೆ ಅಂತಾ ಗೊತ್ತಿರ್ಲಿಲ್ಲ’ -ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ತಂದೆ ಅಳಲು..
ಇನ್ನು ಇದೇ ವಿಚಾರವಾಗಿ ನಟಿ ವೈಷ್ಣವಿ ಗೌಡ ಮದುವೆ ಬಗ್ಗೆ ಮೊದಲ ಬಾರಿಗೆ ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮದುವೆಯಾಗುವುದು ನನ್ನ ದೊಡ್ಡ ಕನಸು. ಆ ಕನಸನ್ನ ನನಸು ಮಾಡೇ ಮಾಡ್ತೀನಿ. ಮದುವೆ ವಿವಾದ ಮುಗಿದು ಹೋಗಿದೆ. ಒಂದಷ್ಟು ವಿಚಾರವನ್ನ ನಿಮಗೆ ಹೇಳಬೇಕು ಎಂದು ಈ ವಿಡಿಯೋವನ್ನು ಮಾಡಿದ್ದೇನೆ. ನಿಮ್ಮೆಲ್ಲರ ಈ ಪ್ರೀತಿಗೆ ನಾನು ಚಿರಋಣಿ. ಜೀವನಕ್ಕೆ ಗೊತ್ತಿದೆ, ನಮ್ಮನ್ನ ಸರಿ ದಾರಿಯಲ್ಲೇ ಕರೆದುಕೊಂಡು ಹೋಗುತ್ತೆ. ನನ್ನ ಜತೆ ಇದ್ದ ಎಲ್ಲರಿಗೂ ಧನ್ಯವಾದ. ನನ್ನ ಸಿರಿಯಲ್ ಇನ್ನು ಕೆಲವೇ ದಿನಗಳಲ್ಲಿ ಬರುತ್ತೆ. ನನ್ನ ಕೆಲಸದ ಮೂಲಕ ನಿಮ್ಮನ್ನ ಮನರಂಜಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಟಿ ವೈಷ್ಣವಿ ಗೌಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post