ರಾತ್ರಿ ಕುಡಿದು ಮೈಮರೆತು ಮಲಗಿದ್ದವನು. ಬೆಳಗ್ಗೆ ಎದ್ದಿದ್ದೇ ಕಿಲಾಡಿ ಜೋಡಿಯ ಬ್ಲ್ಯಾಕ್ಮೇಲ್ ವಾಯ್ಸ್ ಕೇಳಿದ ಮೇಲೆ. ಅದೊಂದು ವಿಡಿಯೋ ತೋರಿಸಿ, ಬೆಳ್ಳಂ ಬೆಳಗ್ಗೆನೇ ಲಕ್ಷ ಲಕ್ಷ ದುಡ್ಡಿಗಾಗಿ ಇಬ್ಬರು ಖತರ್ನಾಕ್ಗಳು ಬೇಡಿಕೆ ಇಟ್ಟಿದ್ರು. ಬಟ್ ಈಗ ವೈಯಾರಿ ಲಾಕ್ ಆಗ್ತಿದ್ದಂಗೆ, ಆಕೆ ಹೆಣೆದಿದ್ದ ಜೇನಿನ ಬಲೆಯ ಸ್ಫೋಟಕ ವಿಚಾರಗಳು ತೆರೆದುಕೊಳ್ತಿವೆ. ಅಷ್ಟೇ ಅಲ್ಲ, ಆ ಐನಾತಿ ಜೋಡಿಯ ಲೂಟಿ ಆಟ ಇದೇ ಫಸ್ಟ್ ಏನಲ್ಲ.
2019ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಮುನ್ನಲೆಗೆ ಬಂದ ನಮ್ರ ಖಾದಿರ್, ನೋಡ ನೋಡ್ತಿದ್ದಂಗೆ ದೆಹಲಿಯಲ್ಲಿ ಸಖತ್ ಫೇಮಸ್ ಆಗಿದ್ಲು. ರೀಲ್ಸ್ ಮೂಲಕ ಪಡ್ಡೆ ಹೈಕ್ಳ ಕನಸು ಕದ್ದು ಬಿಟ್ಟಿದ್ಲು. ಹೆಸರು, ಹಣ ಸಕ್ಸಸ್ ಎಲ್ಲವೂ ಇವಳನ್ನ ಒಟ್ಟೊಟ್ಟಿಗೆ ಹಿಂಬಾಲಿಸೋಕೆ ಶುರುವಾಗಿತ್ತು. ಒಂದು ಕಡೆ ಶೈನ್ ಆಗ್ತಿದ್ದಂಗೆ ಈಕೆಯ ಸುತ್ತಾ ಕುರುಡು ಕಾಂಚಾಣ ಕೂಡ ಕುಣಿಯೋಕೆ ಆರಂಭ ಮಾಡಿತ್ತು. ಜಾಹೀರಾತು ಜಗತ್ತು ಕೂಡ ಈಕೆಯನ್ನ ಕೈ ಬೀಸಿ ವೆಲ್ಕಮ್ ಮಾಡಿತ್ತು. ಆದ್ರೆ ದುಡ್ಡಿನ ದಾಹ ಇದ್ಯಲ್ವಾ..? ಅದು ಈಕೆಯನ್ನ ಮತ್ತಷ್ಟು ಕೆಟ್ಟ ಕೆಲಸಗಳನ್ನ ಮಾಡಿಸ್ತು ಅಂದ್ರೆ ತಪ್ಪಾಗಲ್ಲ ಬಿಡಿ. ಯಾಕಂದ್ರೆ 2019-20 ರ ಸಮಯದಲ್ಲಿ ಟಿಕ್ ಟಾಕ್ ಮೂಲಕವೇ ಸದ್ದು ಮಾಡಿದ್ದ ಈಕೆಯತ್ತ ದೊಡ್ಡ ದೊಡ್ಡ ಸ್ಟಾರ್ಗಳ ನೋಟ ಕೂಡ ಬೀರಿತ್ತು. ಇದನ್ನೇ ಬಂಡವಾಳನ್ನವಾಗಿ ಮಾಡ್ಕೊಂಡ ನಮ್ರ ಮಾಡಿದ್ದು ಮಾತ್ರ ಯಾರು ಕನಸು ಮನಸಲ್ಲೂ ಊಹಿಸಲು ಅಸಾಧ್ಯವಾದಂತಹ ಕೃತ್ಯಗಳನ್ನ.
ಉದ್ಯಮಿ ಕಂಟ್ರೋಲ್ ತಪ್ಪುವ ಮಟ್ಟಿಗೆ ಕುಡ್ಸಿದ ಐನಾತಿಗಳು
ಮೊನ್ನೆ ಜಾಹೀರಾತಿಗೆಂದು ಬಂದಿದ್ದ ಉದ್ಯಮಿಯನ್ನ ಕೂಡ ಇದೇ ರೀತಿಯಲ್ಲಿ ಬಲೆಗೆ ಬೀಳಿಸಿದ್ದಾಳೆ. ತನ್ನ ಬಳಿ ಬಂದವನ ಹಣವಂತ ಅನ್ನೋದು ಗೊತ್ತಾಗ್ತಿದ್ದಂಗೆ, ಸುಖದ ಮಾತುಗಳನ್ನಾಡಿ ನರಕ ದರ್ಶನ ಮಾಡ್ಸಿದ್ದಾಳೆ. ಹೇಗಾದ್ರೂ ಮಾಡಿ ಖೆಡ್ಡಾಗೆ ಕೆಡವಲೇಬೇಕೆಂದು, ನಮ್ರ ಹಾಗೂ ಈಕೆಯ ಗಂಡ ಸೇರಿ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ತಮ್ಮ ಪ್ಲಾನ್ನಂತೆಯೇ ಉದ್ಯಮಿಯನ್ನ ಹೋಟೆಲ್ಗೆ ಕರೆಸಿಕೊಂಡಿದ್ದಾರೆ. ಆಮೇಲೇ ಉದ್ಯಮಿ ಕಂಟ್ರೋಲ್ ತಪ್ಪುವ ಮಟ್ಟಿಗೆ ಕುಡ್ಸಿದ್ದಾರೆ. ಮುಂದೆ ಪ್ಲಾನ್ನಂತೆಯೇ ಹೋಟೆಲ್ನ ರೂಂಗೆ ಕರೆದೊಯ್ದಿದ್ದಾರೆ. ಆದ್ರೆ ಅದಾಗ್ಲೆ ಕುಡಿದು ಚಿತ್ ಆಗಿದ್ದ ಬಿಸಿನೆಸ್ಮೆನ್ ಪಕ್ಕದಲ್ಲಿಯೇ ಈತನಿಗೆ ಗೊತ್ತಿಲ್ಲದಂತೆ ನಮ್ರ ಮಲಗಿದ್ಲಂತೆ. ಮುಂದೆ ನಮ್ರ ಹಾಗೂ ಬಿಸಿನೆಸ್ ಮೆನ್ ಇಬ್ಬರೂ ತುಂಬಾ ಕ್ಲೋಸ್ ಆಗಿರುವಂತೆ ವಿಡಿಯೋ ಚಿತ್ರಿಸಿದ್ದಾರೆ ಅನ್ನೋದು ಉದ್ಯಮಿ ಮಾಡ್ತಿರುವ ಆರೋಪ. ಮುಂದೆ ಇದೇ ವಿಡಿಯೋವನ್ನ ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಶುರು ಮಾಡಿದ್ರಂತೆ.
₹80 ಲಕ್ಷ ಕೊಡುವಂತೆ ನಾರಿಯಿಂದ ಬ್ಲ್ಯಾಕ್ಮೇಲ್
ನಮ್ರ ಜೊತೆ ಉದ್ಯಮಿ ಕ್ಲೋಸ್ ಆಗಿರುವಂತೆ ಚಿತ್ರಿಸಿದ ವಿಡಿಯೋವನ್ನ ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಶುರು ಮಾಡಿದ್ದಾಳೆ. ಆರಂಭದಲ್ಲಿ 10, ಆಮೇಲೆ 20, ಆಮೇಲೆ 40 ಲಕ್ಷ , ಹೀಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ರೆ ಈ ವಿಡಿಯೋವನ್ನ ವೈರಲ್ ಮಾಡೋದಾಗಿ ಈ ಖತರ್ನಾಕ್ ಜೋಡಿ ಬೆದರಿಕೆ ಹಾಕಿದೆ. ಎಷ್ಟಾದ್ರೂ ಬಿಸಿನೆಸ್ ಮೆನ್ ಅಲ್ವಾ..? ವಿಡಿಯೋ ಹೊರಗಡೆ ಲೀಕ್ ಆದ್ರೆ, ನನ್ ಮರ್ಯಾದೆ ಮಾತ್ರವಲ್ಲ ಬಿಸಿನೆಸ್ ಕೂಡ ಮಕಾಡೆ ಮಲಗುತ್ತೆ ಎಂದು ಭಯಗೊಂಡ ಉದ್ಯಮಿ, ಆರಂಭದಲ್ಲಿ ಇವರು ಕೇಳಿದಷ್ಟು ಹಣವನ್ನ ಹೋಗಿ ಇವರ ಪಾದಕ್ಕೆ ಸುರಿದಿದ್ದಾರೆ. ಆದ್ರೆ ಈ ಖತರ್ನಾಕ್ ದಂಪತಿಗೆ ದುಡ್ಡಿನ ಮೇಲೆ ಮತ್ತಷ್ಟು ದಾಹ ಹುಟ್ಟಿದೆ. ಮತ್ತೆ ಮತ್ತೆ ಬ್ಲ್ಯಾಕ್ಮೇಲ್ ಮುಂದುವರೆಸಿದ್ದಾರೆ.
ವಿಚಾರ ಹೊರಗಡೆ ಬಂದ್ರೆ ರೇಪ್ ಕೇಸ್ ಹಾಕೋ ಬೆದರಿಕೆ
ಆರಂಭದಲ್ಲಿ ಬ್ಲ್ಯಾಕ್ಮೇಲ್ ಮಾಡಿ ದುಡ್ಡು ಪಡೆದುಕೊಂಡ ಈ ದಂಪತಿ, ವಿಚಾರವನ್ನ ಹೊರಗಡೆ ಹೇಳದಂತೆ ಮತ್ತೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಈ ವಿಚಾರವನ್ನ ಹೊರಗಡೆ ಹೇಳಿದ್ರೆ ನಿನ್ ಮೇಲೆ ರೇಪ್ ಕೇಸ್ ಹಾಕೋದಾಗಿ ವಾರ್ನಿಂಗ್ ಮಾಡಿದ್ದಾರೆ. ರೇಪ್ ಕೇಸ್ ದಾಖಲಾದ್ರೆ ಇದ್ದ ಬದ್ದ ಮರ್ಯಾದೆ ಹೋಗುತ್ತೆ ಎಂದು ಅಂಜಿದ ಉದ್ಯಮಿ, ಆರಂಭದಲ್ಲಿ ಸುಮ್ಮನಾಗಿದ್ದ. ಬಟ್ ದುಡ್ಡಿಗಾಗಿ ಧಮ್ಕಿ ಹೆಚ್ಚಾಗ್ತಿದ್ದಂಗೆ ಕಾನೂನು ಸಮರ ಶುರು ಮಾಡಿದ್ದ.
ದುಡ್ಡು ಕೊಡದಿದ್ರೆ ವಿಡಿಯೋ ವೈರಲ್ ಮಾಡೋ ಧಮ್ಕಿ!
ಈ ಜೋಡಿ ದುಡ್ಡಿಗಾಗಿ ಮತ್ತೆ ಮತ್ತೆ ಬೇಡಿಕೆ ಇಟ್ಟಿದೆ. 80 ಲಕ್ಷ ಕೊಡುವಂತೆ ಧಮ್ಕಿ ಹಾಕಿದೆ. ದುಡ್ಡು ಕೊಡದಿದ್ರೆ ಈ ವಿಡಿಯೋವನ್ನ ನಿನ್ನ ಕುಟುಂಬಸ್ಥರಿಗೂ ಶೇರ್ ಮಾಡ್ತೀವಿ ಎಂದು ಬೆದರಿಕೆ ಹಾಕಿದೆ. ಇದರಿಂದ ಹೆದರಿದ ಉದ್ಯಮಿ ಬೇರೆ ದಾರಿ ಕಾಣದೆ ಕಡೆಗೆ ಠಾಣೆಯ ಮೆಟ್ಟಿಲು ಹತ್ತಿದ್ದಾರೆ. ಪೊಲೀಸರ ಎದುರು ಬ್ಲ್ಯಾಕ್ಮೇಲ್ ಪುರಾಣವನ್ನ ಬಿಚ್ಚಿಟ್ಟಿದ್ದಾನೆ. ಮತ್ತೊಂದು ವಿಚಾರ ಅಂದ್ರೆ. ಇದು ನಮ್ರ ಒಬ್ಬಳೇ ಮಾಡಿರುವ ಕೃತ್ಯವಲ್ಲ. ಇದರ ಹಿಂದೆ ಈಕೆಯ ಗಂಡ ಕೂಡ ಇದ್ದ ಅನ್ನೋದೆ ಇಲ್ಲಿ ಇಂಟ್ರೆಸ್ಟಿಂಗ್. ಮಡದಿ ದಾರಿ ತಪ್ಪಿದಾಗ ಸರಿದಾರಿಗೆ ತರಬೇಕಿದ್ದ ಗಂಡನೇ ಇಲ್ಲ ಮಾಡ್ಬಾರ್ದಾ ಕೆಲಸಕ್ಕೆ ಸಪೋರ್ಟ್ ಮಾಡಿದ್ದ. ಮುಂದೆ ಇಬ್ಬರು ಸೇರಿ ಈ ಸೇರಿ ಈ ಕೃತ್ಯ ಮಾಡಿದ್ದಾರೆ. ಇದರಿಂದ ಈ ಖ್ಯಾತ ಯ್ಯೂಟೂಬರ್ ನಮ್ರ ಹಾಗೂ ಈಕೆಯ ಗಂಡನ ವಿರುದ್ಧ ದೂರು ದಾಖಲು ಮಾಡಿದ ಪೊಲೀಸರು ಇದೀಗ ನಮ್ರಳನ್ನ ಲಾಕ್ ಮಾಡಿದ್ದಾರೆ.
ಎ2 ಆರೋಪಿ ವಿರಾಟ್ಗೆ ಮುಂದುವರಿದ ಹುಡುಕಾಟ
ನಮ್ರ ಲಾಕ್ ಆಗಿದ್ದಂಗೆ ಪ್ರಕರಣದ ಮತ್ತೊಬ್ಬ ಆರೋಪಿ ಅಂದ್ರೆ ಈಕೆಯ ಗಂಡ ತಲೆಮರೆಸಿಕೊಂಡಿದ್ದು, ಪೊಲೀಸರು ವಿರಾಟ್ ಬೇನಿವಾಲ್ ಗಾಗಿ ಬಲೆ ಬೀಸಿದ್ದಾರೆ. ಇವನ ಹೆಜ್ಜೆ ಗುರುತುಗಳನ್ನ ಬೆನ್ನಟ್ಟಿ ಸ್ಪೆಷಲ್ ಟೀಂ ಹೊರಟು ಬಿಟ್ಟಿದೆ. ಆದ್ರೆ ಸದ್ಯ ಗುರುಗ್ರಾಮ್ ಪೊಲೀಸರ ಕಸ್ಟಡಿಯಲ್ಲಿರುವ ನಮ್ರ ವಿಚಾರಣೆಯ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಹೊರ ಬಂದಿವೆ.
ಕಿಲಾಡಿ ಜೋಡಿ ಬಳಿ ಇದ್ಯಾ ಇನ್ನೂ ಹಲವರ ವಿಡಿಯೋ?
ನಮ್ರ ಖಾದಿರ್ನ ವಿಚಾರಣೆಯ ವೇಳೇ ಸ್ಫೋಟಕ ವಿಚಾರಗಳು ಹೊರ ಬರೋಕೆ ಶುರುವಾಗಿದೆ. ಈ ಕಿಲಾಡಿ ಜೋಡಿ ಇಂತಹ ಕೃತ್ಯ ಎಸಗ್ತಿರೋದು ಇದೇ ಮೊದಲಲ್ಲ. ಟ್ರ್ರ್ಯಾಪ್ ಮಾಡಿ ದುಡ್ಡು ದೋಚೋದನ್ನ ಇವರು ಒಂದು ಕಾಯಕವನ್ನಾಗಿ ಮಾಡಿದ್ರು ಅನ್ನೋ ವಿಚಾರ ಕೂಡ ರಿವೀಲ್ ಆಗಿದೆ. ಅಲ್ಲದೇ ಈಕೆಯ ಮೊಬೈಲ್ ಚೆಕ್ ಮಾಡ್ದಾಗ ಮತ್ತಷ್ಟು ಸ್ಫೋಟಕ ವಿಚಾರಗಳು ಹೊರ ಬಂದಿವೆಯಂತೆ. ಇವಳ ಮೊಬೈಲ್ನಲ್ಲಿ ಇನ್ನು ಹಲವರ ವಿಡಿಯೋ ಇತ್ತಂತೆ. ಬಿಸಿನೆಸ್ಮೆನ್ಗಳನ್ನೇ ಟಾರ್ಗೆಟ್ ಮಾಡಿ ಗಾಳ ಹಾಕ್ತಿದ್ದ ಈ ವೈಯಾರಿ ಅಂಥವರನ್ನ ಹನಿ ಟ್ರ್ಯಾಪ್ ಮಾಡಿರುವ ವಿಚಾರ ಬಯಲಾಗಿದೆ. ಸತಿಪತಿಗಳು ಸೇರಿ ಹತ್ತಕ್ಕೂ ಹೆಚ್ಚು ಉದ್ಯಮಿಗಳನ್ನ ಇದೆ ರೀತಿಯಲ್ಲಿ ಜೇನಿನ ಬಲೆಯಲ್ಲಿ ಸಿಲುಕಿಸಿವರು ಅಂಶ ಕೂಡ ಹೊರ ಬಿದ್ದಿದೆ.
ಬ್ಲ್ಯಾಕ್ನಲ್ಲಿ ಲಕ್ಷ ಲಕ್ಷ ಹಣ ದೋಚಿ, ಮಳ್ಳಿಯಂತೆ ಇರ್ತಿದ್ದಳು
ಹೀಗೆ ದೊಡ್ಡ ದೊಡ್ಡ ಮಿಕಗಳನ್ನೇ ಬಲೆಗೆ ಬೀಳಿಸಿ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಹನಿಟ್ರ್ಯಾಪ್ ನಾರಿ ಕಡೆಗೂ ಲಾಕ್ ಆಗಿದ್ದಾಳೆ. ಹೀಗೆ ಇತ್ತ ಕತ್ತಲೆಯ ಕೋಣೆಯಲ್ಲಿ ಕೂತು ದುಡ್ಡು ಮಾಡ್ತಿದ್ದಾಕೆ, ಅತ್ತ ಯ್ಯೂಟೂಬ್ನಲ್ಲಿ ಫ್ಯಾಮಿಲಿ ರಿಲೇಟೆಡ್ ವಿಡಿಯೋ ಹರಿ ಬಿಡ್ತಿದ್ಲು . ಬ್ಲ್ಯಾಕ್ನಲ್ಲಿ ಲಕ್ಷ ಲಕ್ಷ ಹಣವನ್ನ ದೋಚಿ, ಜನರ ಮುಂದೆ ಮಳ್ಳಿಯಂತೆ ಬಂದು ಸೋಶಿಯಲ್ ಮೀಡಿಯಾದಲ್ಲಿ ಫೋಸ್ ಕೊಡ್ತಿದ್ಲು. ಆದ್ರೆ ಸತ್ಯ ಯಾವ್ತಿದ್ರೂ ಹೊರಬರಲೇ ಬೇಕಲ್ವಾ..? ಮುಖವಾಡದ ಬದುಕು ಹೆಚ್ಚು ದಿನ ಅನ್ನೋ ಹಾಗೆ, ಇದೀಗ ಬಿಂಕದ ಸಿಂಗಾರಿಯ ಅಸಲಿ ಮುಖವಾಡ ಹೊರ ಬಂದಿದೆ. ಇವಳ ನಿಜ ಬಣ್ಣವನ್ನ ನೋಡಿದ ಫ್ಯಾನ್ಸ್ ಪಾಳಯ, ಇವ್ಳೇನಾ ಅವಳು ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ದುಡ್ಡೊಂದು ಏನೆಲ್ಲಾ ನೀಚ ಕೆಲಸ ಮಾಡುತ್ತೆ ಅನ್ನೋದಕ್ಕೆ ಈ ಯ್ಯೂಟೂಬರ್ ಬೆಸ್ಟ್ ಎಕ್ಸಾಂಪಲ್. ಯಾಕಂದ್ರೆ ಸೋಶಿಯಲ್ ಮೀಡಿಯಾದ ಮೂಲಕ ತನ್ನದೇ ಆದ ಅಭಿಮಾನಿಗಳ ಬಳಗವನ್ನ ಹೊಂದಿದ್ದ ನಮ್ರ ವಿಡಿಯೋ ಲಕ್ಷಾಂತರ ವೀವ್ಸ್ ಪಡೆದುಕೊಳ್ತಿತ್ತು. ಈಕೆಯ ರೀಲ್ಸ್ಗಳಿಗೆ, ವಿಡಿಯೋಗಳಿಗಾಗಿ ಜನರು ಕಾದು ಕುಳಿತಿದ್ರು. ತಮ್ಮ ಯ್ಯೂಟ್ಯೂಬ್ ಚಾನೆಲ್ ಮೂಲಕವೇ ಲಕ್ಷ ಲಕ್ಷ ಪಡೆಯುತ್ತಿದ್ದಾಕೆಗೆ ಅಧಿಕ ಹಣದ ದಾಹ ಹುಟ್ಟಿದೆ. ದುಡ್ಡಿನ ದಾಹ ಹೆಚ್ಚುತ್ತಿದ್ದಂಗೆ ಅಡ್ಡ ದಾರಿ ಹಿಡಿದ ನಮ್ರ ಇದೀಗ ಜೈಲು ಪಾಲಾಗಿದ್ದಾಳೆ.
ನಮ್ರ ಮೊಬೈಲ್ನಲ್ಲಿ ಹಲವು ಉದ್ಯಮಿಗಳ ಅಶ್ಲೀಲ ವಿಡಿಯೋ ಇತ್ತು ಅನ್ನೋ ವಿಚಾರ ಕೂಡ ತನಿಖೆಯ ವೇಳೆ ರಿವೀಲ್ ಆಗಿದೆ. ಇದರಿಂದ ಕೆಲ ಉದ್ಯಮಿಗಳಿಗೆ ಮರ್ಯಾದೆಯ ಭಯ ಹುಟ್ಟಿಕೊಂಡಿದ್ದು, ಅಂದು ಸುಖದ ದರ್ಶನ ಪಡೆದವರು, ಇದೀಗ ಬೆವರಲು ಶುರು ಮಾಡಿದ್ದಾರೆ. ವಿಚಾರಣೆಯ ಬಳಿಕ ಈ ಬಿಂಕದ ಸಿಂಗಾರಿಯ ಮತ್ತಷ್ಟು ಜೇನಿನ ಬಲೆಯ ಮ್ಯಾಟರ್ ಹೊರ ಬರುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post