ನವದೆಹಲಿ: ದೇಶದಲ್ಲಿ ಸದ್ಯ 8 ರಾಜಕೀಯ ಪಕ್ಷಗಳು ಮಾತ್ರ ಇವೆ ಎನ್ನಲಾಗಿದೆ. ಬಿಜೆಪಿ, ಕಾಂಗ್ರೆಸ್, ನ್ಯಾಷನಲ್ ಪೀಪಲ್ಸ್ ಪಾರ್ಟಿ, ಟಿಎಂಸಿ, NCP, CPI, CPM, BSP ಮಾತ್ರ ರಾಷ್ಟ್ರೀಯ ಪಕ್ಷ ಎಂದು ಸ್ಥಾನ ಪಡೆದಿವೆ.
ಆದರೆ NCP, TMC, CPI, BSP ಕೂಡ ರಾಷ್ಟ್ರೀಯ ಪಕ್ಷದ ಮಾನದಂಡ ಪೂರೈಸುತ್ತಿಲ್ಲ. ಹೀಗಾಗಿ ಈ 4 ಪಕ್ಷಗಳಿಗೂ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ NCP, CPI, TMCಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ರದ್ದು ಬಗ್ಗೆ ಚುನಾವಣಾ ಆಯೋಗ ನೋಟೀಸ್ ನೀಡಿದೆ.
ಈಗ ಎಲೈಟ್ ಪಕ್ಷಗಳ ಸಾಲಿಗೆ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಕೂಡ ಸೇರ್ಪಡೆಯಾಗಿದೆ. ಗುಜರಾತ್ ಎಲೆಕ್ಷನ್ನಲ್ಲಿ ಶೇ.13 ರಷ್ಟು ಮತಗಳನ್ನು ಆಪ್ ಪಡೆದಿದ್ದು, 5 ಅಭ್ಯರ್ಥಿಗಳ ಮುನ್ನಡೆ ಸಾಧಿಸಿದ್ದಾರೆ. ಇದರಿಂದ ಆಪ್ಗೆ ಮೊದಲು ಗುಜರಾತಿನಲ್ಲಿ ಪ್ರಾದೇಶಿಕ ಪಕ್ಷದ ಸ್ಥಾನಮಾನ ಲಭ್ಯದ ಜೊತೆಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಎಂದು ಹೇಳಲಾಗ್ತಿದೆ.
ಆದರೆ ಎಸ್ಪಿ, ಜೆಡಿಯು, ಟಿಡಿಪಿ, ಟಿಆರ್ಎಸ್, ಆರ್ಜೆಡಿ ಪಕ್ಷಗಳು ರಾಷ್ಟ್ರೀಯ ಪಕ್ಷಗಳಲ್ಲ ಎಂದು ಪರಿಗಣಿಸಲಾಗಿದೆ. ಇವು ತವರು ರಾಜ್ಯದಿಂದ ಹೊರಗೆ ವಿಸ್ತರಣೆ ಆಗದ ಪ್ರಮುಖ ನಾಯಕರ ಪಕ್ಷಗಳಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post