ವಿಮಾನ ಅಪಘಾತದಲ್ಲಿ ತಂದೆ-ತಾಯಿ ಹಾಗೂ ಸಹೋದರಿಯನ್ನ ಕಳೆದುಕೊಂಡ ಹೆಣ್ಣು ಮಗುವೊಂದು ನನಗೆ ಅಪ್ಪ-ಅಮ್ಮ ಬೇಕೆಂದು ರೋದಿಸುತ್ತಿರೋ ವಿದ್ರಾವಕ ಘಟನೆ ಅಮೆರಿಕದಲ್ಲಿ ನಡೆದಿದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋಗ್ತಾರೆಂದು ಮಗು ಫೋನ್ ಮಾಡ್ತಿದೆ.
ಕ್ರಿಶ್ಚಿಯನ್ ಕ್ಯಾತ್ (42), ಪತ್ನಿ ಮಿಸ್ಟಿ (43) ಮತ್ತು ಮಗಳು ಲಿಲ್ಲಿ (12) ವಿಮಾನ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಮೂಲತಹ ಆಸ್ಟ್ರೇಲಿಯಾದವರಾದ ಕ್ರಿಶ್ಚಿಯನ್ ಕ್ಯಾತ್ ಉದ್ಯಮಿ ಆಗಿದ್ದರು. ಹೀಗಾಗಿ ಕಳೆದ 4 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ತಮ್ಮ ವ್ಯವಹಾರ ಮುಗಿದ ತಕ್ಷಣ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಬೇಕು ಎಂಬ ನಿರ್ಧಾರದಲ್ಲಿದ್ದರು.
ವಿಧಿಯಾಟನೇ ಬೇರೆಯಾಗಿತ್ತು. ಪ್ಲೋರಿಡಾದ ಪೀಟಸ್ಬರ್ಗ್ನಲ್ಲಿ ಡಿಸೆಂಬರ್ 3ರಂದು ವಿಮಾನವನ್ನ ಬಾಡಿಗೆ ಪಡೆದು ಕ್ರಿಶ್ಚಿಯನ್ ಕ್ಯಾತ್ ಪತ್ನಿ ಮಿಸ್ಟಿ ಮತ್ತು ಮಗಳು ಲಿಲ್ಲಿ ಸೇರಿ ಡಿನ್ನರ್ ಮಾಡಲೆಂದು ಪೀಟಸ್ಬರ್ಗ್ನ ವೆನಿಸ್ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಲಗಿದ್ದ ಇನ್ನೊಬ್ಬ ಮಗಳು ಹರ್ಪರ್ಳನ್ನ ಬಿಟ್ಟು ಮೂವರು ಹೋಗಿದ್ದರು.
ಅಲ್ಲಿ ಡಿನ್ನರ್ ಸವಿದು ವಾಪಸ್ ಮನೆಗೆ ಬರುವಾಗ ವಿಮಾನ ಕ್ರ್ಯಾಶ್ ಆಗಿ ಸಮುದ್ರದಲ್ಲಿ ಬಿದ್ದಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಸಮುದ್ರದ ನೀರಿನಲ್ಲಿ ಪತ್ನಿ ಮಿಸ್ಟಿ ಹಾಗೂ ಮಗಳು ಲಿಲ್ಲಿಯ ಮೃತದೇಹ ಸಿಕ್ಕಿವೆ. ಆದ್ರೆ, ಕ್ರಿಶ್ಚಿಯನ್ ಕ್ಯಾತ್ ಮೃತದೇಹ ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗ್ತಿದೆ.
ಇತ್ತ 10 ವರ್ಷದ ಹರ್ಪರ್ ನಿದ್ದೆಯಿಂದ ಎದ್ದುಳುತ್ತಿದ್ದಂತೆ ತಂದೆ-ತಾಯಿ ಬೇಕೆಂದು ರೋದಿಸಲು ಶುರುಮಾಡಿದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಅಪ್ಪ-ಅಮ್ಮನ ನಂಬರ್ಗೆ ಫೋನ್ ಮಾಡಿ ರೋಧಿಸುತ್ತಿದೆ. ನಮ್ಮ ಅಪ್ಪ-ಅಮ್ಮ ಬಂದು ನನ್ನನ್ನು ಕರೆದುಕೊಂಡು ಹೋಗ್ತಾರೆ ಎನ್ನುತ್ತಿದೆ. ಮೊಮ್ಮಗಳ ಸಂಕಷ್ಟವನ್ನ ನೋಡುತ್ತಿರುವ ಆಕೆಯ ಅಜ್ಜ ಚಿಂತೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post