ಬೆಂಗಳೂರು: ನಟ ಅನಿರುದ್ಧ್ ಅವರನ್ನ ಕನ್ನಡ ಕಿರುತೆರೆಯಿಂದ ಬ್ಯಾನ್ ಮಾಡಿರುವ ವಿಚಾರ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಇಂದು ಮಧ್ಯಾನ ಫಿಲ್ಮ್ ಛೇಂಬರ್ನಲ್ಲಿ ಮಹತ್ವದ ಸಭೆ ನಡೆಯಲಿದೆ.
ಫಿಲ್ಮ್ ಛೇಂಬರ್ ಅಧ್ಯಕ್ಷ ಭಾಮ ಹರೀಶ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಟ ಅನಿರುದ್ಧ್ ಹಾಗೂ ಕಿರುತೆರೆ ನಿರ್ಮಾಪಕ ಸಂಘ ಭಾಗಿಯಾಗಲಿದೆ. ಸಭೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಯಾಕಂದ್ರೆ ಬ್ಯಾನ್ ನಡುವೆಯೂ ಅನಿರುದ್ಧ್ ಸೀರಿಯಲ್ ಮಾಡ್ತಿದ್ದಾರೆ.
ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರ ‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ ನಟಿಸುತ್ತಿದ್ದು, ಈ ಬಗ್ಗೆ ಖುದ್ದು ಅನಿರುದ್ಧ್ ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಅನಿರುದ್ಧ್ ಜೊತೆ ಧಾರಾವಾಹಿ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಕಿರುತೆರೆ ನಿರ್ಮಾಪಕರ ಸಂಘ, ಎಸ್.ನಾರಾಯಣ್ ಅವರನ್ನ ಭೇಟಿ ಮಾಡಿದೆ.
ಅನಿರುದ್ದ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಿದ್ದೀವಿ. ಅನಿರುದ್ಧ್ ಜೊತೆ ಧಾರವಾಹಿ ಮಾಡಬೇಡಿ ಎಂದು ಮನವಿ ನಿರ್ಮಾಪಕ ಸಂಘ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಇದರ ನಡುವೆ ಇಂದು ಮಧ್ಯಾಹ್ನ ಫಿಲ್ಮ್ ಛೇಂಬರ್ನಲ್ಲಿ ಮಹತ್ವದ ಸಭೆ ನಿಗಧಿಯಾಗಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಅನಿರುದ್ಧ್; ಕಿರುತೆರೆ ಲೋಕಕ್ಕೆ ಮತ್ತೆ ಕಂಬ್ಯಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post