ಗಾಂಧಿನಗರ: ಗುಜರಾತ್ನಲ್ಲಿ ಬಿಜೆಪಿ ಎಲ್ಲಾ ದಾಖಲೆಗಳನ್ನೂ ಪುಡಿಗಟ್ಟಿದೆ. ಮೋದಿ ತವರಲ್ಲಿ ಬಿಜೆಪಿ ಮೇಲೆ ಜನ ಇಟ್ಟಿರೋ ವಿಶ್ವಾಸ ಕೇಸರಿ ಪಡೆಯನ್ನು ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದೆ. ವರ್ಷದ ಹಿಂದೆಯಷ್ಟೇ ಸಿಎಂ ಗಾದಿಗೇರಿದ್ದ ಭೂಪೇಂದ್ರ ಪಟೇಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಗುಜರಾತ್ ಗದ್ದುಗೆಯನ್ನು ಬಿಜೆಪಿ ಮತ್ತೆ ಗೆದ್ದು ಬೀಗಿದೆ.
ಆಡಳಿತ ವಿರೋಧಿ ಅಲೆಯ ನಡುವೆಯೂ ದಾಖಲೆಯ ಸ್ಥಾನಗಳನ್ನು ಪಡೆದು ಯಾವ ಪಕ್ಷಕ್ಕೂ ಸರಿಸಾಟಿ ಇಲ್ಲದಂತೆ ಬಂಡೆಯಂತೆ ನಿಂತಿದೆ. ನಿನ್ನೆಯ ಚುನಾವಣೆ ಫಲಿತಾಂಶ ಗುಜರಾತ್ ಮಾತ್ರವಲ್ಲ, ಇಡೀ ದೇಶದ ಕಮಲ ಪಾಳಯಕ್ಕೆ ಮತ್ತಷ್ಟು ಹುರುಪು ನೀಡಿದೆ. ಕೇವಲ ಒಂದು ವರ್ಷ ಗುಜರಾತ್ನಲ್ಲಿ ಆಡಳಿತ ನಡೆಸಿದ ಭೂಪೇಂದ್ರ ಪಟೇಲ್ ಮತ್ತೆ ಗಾಂಧಿ ನಾಡಿನ ಗಾದಿಯತ್ತ ಹೆಜ್ಜೆ ಇಟ್ಟಿದ್ದಾರೆ.
ಗುಜರಾತ್ನಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಪಾಟಿದಾರ್ ನಾಯಕ!
ಡಿಸೆಂಬರ್ 12ರಂದು ಭೂಪೇಂದ್ರ ಪಟೇಲ್ ಸಿಎಂ ಆಗಿ ಪ್ರಮಾಣವಚನ
2021ರ ಸೆಪ್ಟೆಂಬರ್ 13 ಗುಜರಾತ್ನಲ್ಲಿ ವಿಜಯ್ ರೂಪಾನಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ರೂಪಾನಿಯಿಂದ ತೆರವಾದ ಸಿಎಂ ಗಾದಿಯನ್ನು ಅಲಂಕರಿಸಿದವ್ರೇ ಭೂಪೇಂದ್ರ ಪಟೇಲ್. ಸಿಎಂ ಪಟ್ಟಕ್ಕೇರಿದ ಒಂದೇ ವರ್ಷದಲ್ಲಿ ಅಂದ್ರೆ ಮೊನ್ನೆ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶ ಭೂಪೇಂದ್ರ ಪಟೇಲ್ ವರ್ಚಸ್ಸನ್ನು ಇಮ್ಮಡಿಗೊಳಿಸಿದೆ. ಅಭಿವೃದ್ಧಿ, ಸಾಲು ಸಾಲು ದುರಂತ, ಆಡಳಿತ ವೈಫಲ್ಯದ ನಡುವೆಯೂ ಗುಜರಾತ್ ಮತದಾರರು ಭೂಪೇಂದ್ರ ಪಟೇಲ್ ಆಡಳಿತವನ್ನು ಮತ್ತೆ ಬಯಸಿದ್ದಾರೆ.
ನಿನ್ನೆ ಚುನಾವಣೆ ಫಲಿತಾಂಶ ಹೊರಬೀಳ್ತಿದ್ದಂತೆ ಸಿಎಂ ಪದಗ್ರಹಣ ಕಾರ್ಯಕ್ರದ ಮುಹೂರ್ತ ಕೂಡಾ ಫಿಕ್ಸ್ ಮಾಡಿಲಾಗಿದೆ. ಡಿಸೆಂಬರ್ 12ರಂದು ಗುಜರಾತ್ ಸಿಎಂ ಪ್ರಮಾಣವಚನ ಕಾರ್ಯಕ್ರಮ ಫಿಕ್ಸ್ ಮಾಡಲಾಗಿದೆ. ಗುಜರಾತ್ ರಾಜಭವನದಲ್ಲಿ ಸಿಎಂ ಪ್ರಮಾಣವಚನ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಭೂಪೇಂದ್ರ ಪಟೇಲ್ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ಬಿಜೆಪಿಯ ಹಲವು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಪದಗ್ರಹಣದಲ್ಲಿ ಭಾಗಿಯಾಗಲಿದ್ದಾರೆ ಸಿಎಂ ಬೊಮ್ಮಾಯಿ
ಇನ್ನು ಡಿಸೆಂಬರ್ 12ರಂದು ನಡೆಯಲಿರೋ ಗುಜರಾತ್ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಭಾಗಿಯಾಗಲಿದ್ದಾರೆ. ಸೋಮವಾರ ಬೆಂಗಳೂರಿನಿಂದ ಗುಜರಾತ್‌ಗೆ ಪ್ರಯಾಣ ಬೆಳೆಸಲಿರೋ ಸಿಎಂ, ಪ್ರಮಾಣವಚನ ಮುಗಿಸಿ ವಾಪಸ್ ಆಗಲಿದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ 182 ಕ್ಷೇತ್ರಗಳ ಪೈಕಿ ಬರೋಬ್ಬರಿ 156 ಸೀಟ್ಗಳನ್ನು ಗೆದ್ದ ಬಿಜೆಪಿ, ದಾಖಲೆ ನಿರ್ಮಿಸಿದೆ. ಸತತ 7ನೇ ಬಾರಿಗೂ ಗುಜರಾತಿಗಳ ವಿಶ್ವಾಸವ ಗಳಿಸಿ, ಮತ್ತಷ್ಟು ಗಟ್ಟಿಯಾಗ್ತಿರೋ ಬಿಜೆಪಿಯ ಮತ್ತೊಂದು ಸರ್ಕಾರ ರಚನೆಗೆ ಕೌಂಟ್ಡೌನ್ ಶುರುವಾಗಿದೆ.
विरमगाम विधानसभा क्षेत्र में चुनावी पद यात्रा कर जनसभाओं को संबोधित किया। pic.twitter.com/CXkYz0uxlr
— Hardik Patel (@HardikPatel_) December 3, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post