ಮಳೆಗಾಲದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆರಾಯ ಚಳಿಗಾಲದಲ್ಲೂ ತನ್ನ ವೀರಾವೇಷ ಮೆರೆಯೋಕೆ ಮುಂದಾಗಿದ್ದಾನೆ. ಬಂಗಾಳಕೊಲ್ಲಿಯಲ್ಲಿ ಎದ್ದಿರೋ ಚಂಡಮಾರುತ ಇಂದು ಮಧ್ಯರಾತ್ರಿ ತಮಿಳುನಾಡು ಜನರ ನಿದ್ದೆಗೆಡಿಸುವ ಸೂಚನೆ ನೀಡಿದೆ.
ಕಳೆದ ತಿಂಗಳಷ್ಟೇ ನೆರೆಯ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆರಾಯ ಮತ್ತೆ ತನ್ನ ರೌದ್ರವತಾರ ತೋರೋಕೆ ಮುಂದಾಗಿದ್ದಾನೆ. ವರುಣಾರ್ಭಟಕ್ಕೆ ಕಂಗೆಟ್ಟು, ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದ ತಮಿಳುನಾಡು ಜನ ಹೊಸ ಬದುಕು ಕಟ್ಟಿಕೊಳ್ಳುವ ಹೊತ್ತಲ್ಲೇ ಮತ್ತೆ ಬಂಗಾಳಕೊಲ್ಲಿಯಲ್ಲಿ ಎದ್ದಿರೋ ಮಾಂಡೌಸ್ ಚಂಡಮಾರುತ ತಮಿಳಿಗರ ಬದುಕಿನ ಭರವಸೆಗೆ ತಣ್ಣೀರೆರಚಿದೆ.
ಮಧ್ಯರಾತ್ರಿ ‘ಮಾಂಡೌಸ್’ ಅಬ್ಬರ!
ತಮಿಳುನಾಡಿನ ಕಾರೈಕಲ್ನಿಂದ ಪೂರ್ವ ಅಗ್ನೇಯ ಭಾಗದ 270 ಕಿ.ಮೀ ದೂರದಲ್ಲಿನ ಬಂಗಾಳಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ರೂಪಗೊಂಡಿದೆ. ಇಂದು ಮಧ್ಯರಾತ್ರಿ ಚಂಡಮಾರುತ ತಮಿಳುನಾಡಿನ ಉತ್ತರ ಭಾಗ, ಪುದುಚೇರಿ ಮತ್ತು ಆಂಧ್ರಪ್ರದೇಶದ ಶ್ರೀಹರಿ ಕೋಟಾದ ಸಮುದ್ರ ತೀರದ ಪ್ರದೇಶದಲ್ಲಿ ಹಾದು ಹೋಗಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ವೇಳೆ 65 ರಿಂದ 76 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಅಂತ ಎಚ್ಚರಿಕೆಯನ್ನ ಸಹ ನೀಡಲಾಗಿದೆ. ಮುಂಜಾಗೃತ ಕ್ರಮವಾಗಿ ತಮಿಳು ನಾಡಿನ ಹಲವು ಭಾಗಗಳಲ್ಲಿ ಎನ್ಡಿಆರ್ಎಫ್ ತಂಡಗಳನ್ನ ನಿಯೋಜಿಸಲಾಗಿದೆ.
ಹವಾಮಾನ ಇಲಾಖೆ ಚಂಡಮಾರುತದ ಬಗ್ಗೆ ಸೂಚನೆ ನೀಡ್ತಿದ್ದಂತೆ ಎಚ್ಚೆತ್ತಿರೋ ತಮಿಳುನಾಡು ಸರ್ಕಾರ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರೋದ್ರಿಂದ ರಾಜ್ಯದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂಜಾಗೃತ ಕ್ರಮವಾಗಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಸಹ ಘೋಷಿಸಲಾಗಿದೆ.
ರಾಜ್ಯಕ್ಕೂ ಸೈಕ್ಲೋನ್ ಎಫೆಕ್ಟ್.. ಮಳೆ,ಮೋಡದ ಕವಿದ ವಾತಾವರಣ
ಮಾಂಡೌಸ್ ಚಂಡಮಾರುತದ ಎಫೆಕ್ಟ್ ರಾಜ್ಯದ ಮೇಲೂ ಪರಿಣಾಮ ಬೀರಿದ್ದು ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸುತ್ತ ಮುತ್ತ ಮೋಡಕವಿದ ವಾತವರಣ ನಿರ್ಮಾಣವಾಗಿದೆ.. ಇಂದು ಸಂಜೆ ವೇಳೆ ಹಲವು ಕಡೆ ತುಂತುರು ಮಳೆ ಸಹ ಆಗಿದ್ದು, ನಗರದಾದ್ಯಂತ ಹಗಲು ಸಹ ಚುಮು ಚುಮು ಚಳಿ ಮನೆಮಾಡಿದೆ. ಈ ಬಾರಿಯ ಅಕಾಲಿಕ ಮಳೆ ಜನರ ಜೀವನದಲ್ಲಿ ಕಣ್ಣಾಮುಚ್ಚಾಲೆ ಅಟವಾಡ್ತಿದ್ದು, ಬೆಳೆದ ಫಸಲು ಕೈಸೆರೋ ಹೊತ್ತಲ್ಲೇ ಸೈಕ್ಲೋನ್ ಸುಳಿ ಎದ್ದಿರೋದು ಜನರ ನಿದ್ದೆಗೆಡಿಸಿದೆ. ಮಳೆಗಾಲದ ಮಳೆ ಆರ್ಭಟಕ್ಕೆ ಕೊಚ್ಚಿಹೋಗಿ ಅಲ್ಪ-ಸ್ವಲ್ಪ ಉಳಿದಿದ್ದ ಬೆಳೆಯನ್ನ ಜನರು ಜೋಪಾನ ಮಾಡೋ ಹೊತ್ತಲ್ಲೆ ಮತ್ತೆ ಎದ್ದಿರೋ ಚಂಡಮಾರುತ ಕೈಗೆ ಬಂದ ತುತ್ತನ್ನ ಬಾಯಿಗೆ ಬರದಂತೆ ಮಾಡಿದೆ.
🔥Pottu Polandhufying in Perambur💥 Just wokeup due to sound of Rain (not thunder)😍 that much heavy it is 🌧️ #ChennaiRains @praddy06 @ChennaiRains @saran_2016 @jhrishi2 @chennaiweather @Chennai_Rains @RainStorm_TN @chennai_updates @chennaisweather pic.twitter.com/NDOOy1q4n1
— ⚡Suraj Rain lover ⛈️ (@Suraj1970956) December 8, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post