ಹಿಮಾಚಲದಲ್ಲಿ ಕಮಲವನ್ನ ಕಿತ್ತೆಸೆದು ಮತ ಪ್ರಭುಗಳು ಕೈ ಹಿಡಿದ್ದಾರೆ. ಸೋಲಿನ ನಿರೀಕ್ಷೆಯಲ್ಲಿದ್ದ ಕೈ ರಣಕಲಿಗಳಿಗೆ ಅಧಿಕಾರದ ಲಡ್ಡು ಬಾಯಿಗೆ ಬಿದ್ದಿದೆ. ಆದ್ರೆ ಸಿಎಂ ಯಾರನ್ನ ಮಾಡಬೇಕು ಎಂಬುವುದು ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ಸವಾಲಾಗಿದೆ. ಪ್ರತಿಭಾ ಸಿಂಗ್ ಪರ ಕಾರ್ಯಕರ್ತರು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಿನಲ್ಲಿ ಕಮಲ ಬಾಡಿರೋದು ಕೇಸರಿ ಪಡೆಗೆ ಅರಗಿಸಿಕೊಳ್ಳಲು ಆಗ್ತಿಲ್ಲ.
ಸಾಲು ಸಾಲು ಯಡವಟ್ಟುಗಳು, ಪಕ್ಷದಲ್ಲಿ ಎದ್ದ ಬಂಡಾಯದ ಬೆಂಕಿಯನ್ನ ಆರಿಸದೇ ಇರೋದು ಮತ್ತು ಆಡಳಿತ ವಿರೋಧ ಅಲೆಗೆ ಬಿಜೆಪಿ ಸೋಲಲು ಕಾರಣವಾಗಬೇಕಾಯ್ತು. ಇದು ಕಾಂಗ್ರೆಸ್ ಗೆಲುವಿಗೆ ದಾರಿ ಮಾಡಿಕೊಟ್ಟಂತಾಗಿದೆ. ಸದ್ಯ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿರೋ ಕಾಂಗ್ರೆಸ್ ಮುಂದೆ ಬಹುದೊಡ್ಡ ಸವಾಲಿದೆ.
ಮುಖ್ಯಮಂತ್ರಿ ಸ್ಥಾನ ಒಂದು.. ಆಕಾಂಕ್ಷಿಗಳು ಹಲವರು!
ರಾಜ್ಯ ಕೈ ಅಧ್ಯಕ್ಷೆ ಸೇರಿ ಐವರು ಸಿಎಂ ಪಟ್ಟಕ್ಕಾಗಿ ಫೈಟ್
ಹಿಮಾಚಲದಲ್ಲಿ ಬಹುಮತ ಪಡೆದಿರೋ ಕಾಂಗ್ರೆಸ್ಗೆ ಮುಖ್ಯಮಂತ್ರಿ ಆಯ್ಕೆ ಅಗ್ನಿ ಪರೀಕ್ಷೆಯಂತಾಗಿದೆ. ಸಿಎಂ ಸ್ಥಾನಕ್ಕೆ ಐವರ ನಡುವೆ ಮಹಾ ಕಾದಾಟ ನಡೀತಿದೆ. ಮೀಟಿಂಗ್ ಮೇಲೆ ಮೀಟಿಂಗ್ ಮಾಡಲಾಗ್ತಿದೆ. ಖುದ್ದು ಹೈಕಮಾಂಡ್ ನಾಯಕರೇ, ಹಿಮಾಚಲದಲ್ಲಿ ಬೀಡುಬಿಟ್ಟಿದ್ದು, ಪಕ್ಷದ ಆಗು, ಹೋಗುಗಳ ಮೇಲೆ ನಿಗಾ ಇಟ್ಟಿದ್ದಾರೆ. ಇದರ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲೇ ಫೈಟ್ ಶುರುವಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಹಿರಿಯ ನಾಯಕಿ ಪ್ರತಿಭಾ ಸಿಂಗ್, ಸುಖ್ವಿಂದರ್ ಸಿಂಗ್ ಸುಖು, ಮುಖೇಶ್ ಅಗ್ನಿಹೋತ್ರಿ, ಠಾಕೂರ್ ಕೌಲ್ ಸಿಂಗ್ ಮತ್ತು ಆಶಾ ಕುಮಾರಿ ಸಿಎಂ ಆಕಾಂಕ್ಷಿಯಾಗಿದ್ದಾರೆ. ಈ ಸಂಬಂಧ ಇವತ್ತು ಮಹತ್ವದ ಸಭೆ ಮಾಡಲಾಯ್ತು.. ಹಿಮಾಚಲ ಕೈ ಉಸ್ತುವಾರಿ ರಾಜೀವ್ ಶುಕ್ಲಾ ನಿವಾಸದಲ್ಲಿ ಮೀಟಿಂಗ್ ನಡೀತು. ಈ ವೇಳೆ ಭೂಪೇಶ್ ಬಘೇಲ್, ಭೂಪೇಂದ್ರ ಹೂಡಾ ಸೇರಿ ರಾಜ್ಯ ನಾಯಕರು ಸಭೆಯಲ್ಲಿ ಭಾಗಿಯಾಗಿದ್ರು. ಇದಾದ ನಂತರ ಮತ್ತೊಂದು ಸಭೆ ಮಾಡಿ ಸಿಎಂ ಯಾರು ಅನ್ನೋದನ್ನ ಫೈನಲ್ ಮಾಡಲಾಗುತ್ತೆ. ಇದರ ಮಧ್ಯೆ, ರಾಜ್ಯ ಕಾಂಗ್ರೆಸ್ ನಾಯಕರು, ಹಿಮಾಚಲ ಪ್ರದೇಶದ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಪ್ರತಿಭಾ ಸಿಂಗ್ ಪರ ಕಾರ್ಯಕರ್ತರ ಶಕ್ತಿ ಪ್ರದರ್ಶನ!
ಇದರ ಮಧ್ಯೆ, ಹಿಮಾಚಲ ಮಾಜಿ ಸಿಎಂ ವೀರಭದ್ರಾ ಸಿಂಗ್ ಪುತ್ರಿ ಮತ್ತು ಹಿರಿಯ ನಾಯಕಿ ಪ್ರತಿಭಾ ಸಿಂಗ್ ಪರ ಬೆಂಬಲಿಗರು ಶಕ್ತಿ ಪ್ರದರ್ಶಿಸಿದ್ದಾರೆ.. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇರೋ ಓಬರಾಯ್ ಹೋಟೆಲ್ನಲ್ಲಿ ಪ್ರತಿಭಾ ಪರ ಘೋಷನೆ ಕೂಗಿದ್ದಾರೆ. ಪ್ರತಿಭಾರನ್ನ ಸಿಎಂ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.. ವಾಹನವನ್ನ ತಡೆದು ಘೋಷಣೆ ಕೂಗಿದ್ದಾರೆ.
ನಡ್ಡಾ ತವರೂರಿನಲ್ಲಿ ‘ಕಮಲ’ ಕಮರಿ ಹೋಗಿದ್ದೇಕೆ?
‘ಹಿಮಾಚಲ’ ಸೋಲಿಗೆ ಕಾರಣವಾದ್ರಾ ಜೆ.ಪಿ.ನಡ್ಡಾ?
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದ್ದೇ ತಡ, ಬಿಜೆಪಿ ಪಾಳೆಯದಲ್ಲಿ ಸೋಲಿನ ಕಾರಣಗಳು ಬೆಟ್ಟದಷ್ಟು ಬೆಳೆದುಕೊಳ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಿಮಾಚಲ ಸೋಲಿಗೆ ಕಾರಣವಾದ್ರೂ ಅನ್ನೋ ಚರ್ಚೆಗಳಾಗ್ತಿವೆ.. ಹೇಳಿ, ಕೇಳಿ ಹಿಮಾಚಲ ಪ್ರದೇಶ ನಡ್ಡಾರ ತವರು ರಾಜ್ಯ.. ಮೇಲಿಂದ ಸತತ 2ನೇ ಬಾರಿಗೆ ಯಾವುದೇ ಪಕ್ಷಕ್ಕೆ ಈವರೆಗೂ ಮತದಾರರು ಅಧಿಕಾರ ಕೊಟ್ಟಿಲ್ಲ. ಇಷ್ಟೆಲ್ಲಾ ಗೊತ್ತಿದ್ರೂ, ನಡ್ಡಾ ನಡೆ, ಹಿಮಾಚಲ ಬಿಜೆಪಿಯಲ್ಲಾ ಘಟನೆಗಳು, ಕಮಲ ನೆಲಕ್ಕಚ್ಚುವಂತೆ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಮೊದಲ ಕಾರಣವೇ ಪಕ್ಷದಲ್ಲಿ ಬದಲಾವಣೆ ಮಾಡದೇ ಇರೋದು. ಉತ್ತರಾಖಂಡ್, ಗುಜರಾತ್ನಲ್ಲಿ ಬಿಜೆಪಿ ಸಿಎಂ ಬದಲಾವಣೆ ಮಾಡಿತ್ತು. ಆದ್ರೆ ಇದೇ ತಂತ್ರ ಹಿಮಾಚಲ ಪ್ರದೇಶದಲ್ಲಿ ಅನುಸರಿಸಿಲ್ಲ. ಮುಖ್ಯಮಂತ್ರಿ ಬದಲಾವಣೆಗೆ ಜೆ.ಪಿ.ನಡ್ಡಾ ಒಪ್ಪಿಗೆ ನೀಡಿರಲಿಲ್ಲ.
ಇನ್ನು 2ನೇ ಕಾರಣ ಆಡಳಿತದ ಯಡವಟ್ಟು.. ನಿವೃತ್ತರ ಹಳೆಯ ಪಿಂಚಣಿ ಯೋಜನೆ ತರದೇ ಯಡವಟ್ಟು ಮಾಡಿಕೊಂಡಿತ್ತು. ಜೊತೆಗೆ ಹಿಮಾಚಲ ಸೇಬು ಬೆಳೆಗಾರರ ಸಮಸ್ಯೆಗೆ ಪರಿಹಾರ ನೀಡಲಿಲ್ಲ. 3ನೇ ಕಾರಣ ಬಂಡಾಯ ಸಂಕಟದಿಂದ ಪಾರು ಆಗಿಲ್ಲ.. ಅಂದ್ರೆ, 68 ಕ್ಷೇತ್ರಗಳ ಪೈಕಿ 21 ಕ್ಷೇತ್ರದಲ್ಲಿ BJP ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದಲೇ ಬಿಜೆಪಿಗೆ ಮತ ಪಡೆಯಲು ಮುಳುವಾಯ್ತು. 4ನೇ ಕಾರಣ ಅಂದ್ರೆ, ಅದು ಆಡಳಿತ ವಿರೋಧಿ. ಯಾಕಂದ್ರೆ, ಬಿಜೆಪಿ ಹಿನ್ನಡೆಗೆ ನಿರುದ್ಯೋಗ ಸಹ ಪ್ರಮುಖ ಅಂಶವಾಗಿತ್ತು. ಜೊತೆಗೆ ಹಿಮಾಚಲದಲ್ಲಿ ಅಗ್ನಿಪಥ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಯ್ತು. ಇದರ ಮಧ್ಯೆ. ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಹಿಮಾಚಲದ ಮಂದಿ ಕೈ ಹಿಡಿದಿದ್ದಾರೆ.
ಸಾಲು ಸಾಲು ಯಡವಟ್ಟುಗಳು, ಪಕ್ಷದಲ್ಲಿ ಎದ್ದ ಬಂಡಾಯದ ಬೆಂಕಿಯನ್ನ ಆರಿಸದೇ ಇರೋದು ಮತ್ತು ಆಡಳಿತ ವಿರೋಧ ಅಲೆಗೆ ಬಿಜೆಪಿ ಸೋಲಲು ಕಾರಣವಾಗಬೇಕಾಯ್ತು,. ಇದು ಕಾಂಗ್ರೆಸ್ ಗೆಲುವಿಗೆ ದಾರಿ ಮಾಡಿಕೊಟ್ಟಂತಾಗಿದೆ. ಒಟ್ಟಾರೆ, ಸೋಲಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಗೆ ಅಧಿಕಾರದ ಲಡ್ಡು ಬಾಯಿಗೆ ಬಿದ್ದಿದ್ದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post