‘T20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ರು. ಆದ್ರೆ ನ್ಯೂಜಿಲೆಂಡ್ ಪ್ರವಾಸದಿಂದ ಅವರಿಗೆ, ರೆಸ್ಟ್ ನೀಡಲಾಯ್ತು. ಇದರಿಂದ ಕೊಹ್ಲಿ ಫಾರ್ಮ್ ಕಳೆದುಕೊಂಡರು ಎಂದು ಟೀಂ ಇಂಡಿಯಾ ಸೆಲೆಕ್ಷನ್ ಕಮಿಟೀ ಮಾಜಿ ಸದಸ್ಯ ಸಬಾ ಕರೀಂ ಆರೋಪಿಸಿದ್ದಾರೆ.
ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಕೂಡ ನ್ಯೂಜಿಲೆಂಡ್ಗೆ ತೆರಳಲಿಲ್ಲ. ಆದ್ರೆ ಈ ಮೂವರು ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ, ಕಮ್ಬ್ಯಾಕ್ ಮಾಡಿದ್ರು. ಇವರಿಗೆ ಫಾರ್ಮ್ ಕಂಡುಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ಶ್ರೇಯಸ್ ಅಯ್ಯರ್ರೊಬ್ಬರೇ ರೆಗ್ಯುಲರ್ ಆಗಿ ಏಕದಿನ ಪಂದ್ಯಗಳನ್ನಾಡ್ತಿದ್ದಾರೆ. ಅವರೊಬ್ಬರೇ ಸ್ಥಿರ ಪ್ರದರ್ಶನ ನೀಡ್ತಿದ್ದಾರೆ ಎಂದಿದ್ದಾರೆ.
ನ್ಯೂಜಿಲೆಂಡ್ ಪ್ರವಾಸ ಮಾತ್ರ ಅಲ್ಲ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಪ್ರವಾಸದಿಂದಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ರೆಸ್ಟ್ ನೀಡಲಾಗಿತ್ತು. ಇದರಿಂದ ಈ ಇಬ್ಬರು ಸ್ಟಾರ್ ಪ್ಲೇಯರ್ಸ್, ಈ ವರ್ಷ ಆಡಿದ್ದು ಬೆರಳೆಣಿಕೆಯ ಪಂದ್ಯಗಳನ್ನ ಮಾತ್ರ. ಒಟ್ಟಿನಲ್ಲಿ BCCI, ಆಯ್ಕೆ ಸಮಿತಿಯ ಹಲವು ತಪ್ಪುಗಳು, ಎಡವಟ್ಟುಗಳೇ, ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲಿಗೆ ಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ಮೇಲಾದ್ರೂ ಇವ್ರು ತಪ್ಪುಗಳಿಂದ ಪಾಠ ಕಲಿಬೇಕು. ಇಲ್ಲವಾದಲ್ಲಿ 2023ರಲ್ಲೂ ಸೋಲುಗಳು ತಪ್ಪಿದ್ದಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post