ಮೊದಲ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋಲುವ ಮೂಲಕ ಏಕದಿನ ಸರಣಿಯನ್ನು ಬಾಂಗ್ಲಾದೇಶಕ್ಕೆ ಬಿಟ್ಟ ಟೀಂ ಇಂಡಿಯಾ ನಾಳೆ ಕೊನೇ ಔಪಚಾರಿಕ ಪಂದ್ಯವನ್ನು ಆಡಲಿದೆ. ಈಗಾಗಲೇ ಕಳೆದ ಪಂದ್ಯದಲ್ಲಿ ಹೆಬ್ಬೆರಳಿಗೆ ಎಂಜುರಿ ಮಾಡಿಕೊಂಡಿರೋ ಕ್ಯಾಪ್ಟನ್ ರೋಹಿತ್ ಶರ್ಮಾ, ಕುಲ್ದೀಪ್, ದೀಪಕ್ ಚಹರ್ ನಾಳೆ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಮಾಹಿತಿ ನೀಡಿದ್ದಾರೆ.
ಇನ್ನು, ನಾಳೆ ಔಪಚಾರಿಕ ಪಂದ್ಯದಲ್ಲಿ ಟೀಂ ಇಂಡಿಯಾದ ಈ ಇಬ್ಬರು ಯಂಗ್ಸ್ಟರ್ಸ್ಗೆ ಅವಕಾಶ ನೀಡಿ ಎಂದು ಭಾರತದ ಮಾಜಿ ಕ್ರಿಕೆಟರ್ ಅಜಯ್ ಜಡೇಜಾ ಒತ್ತಾಯಿಸಿದ್ದಾರೆ. ನಾಳೆ ಕೊನೇ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಸೋತಿರೋ ಟೀಂ ಇಂಡಿಯಾಗೆ ಇದು ಅಂಥಹ ಮಹತ್ವದ ಪಂದ್ಯವೇನಲ್ಲ ಎಂದರು.
ರೋಹಿತ್ ಶರ್ಮಾ, ದೀಪಕ್ ಚಹರ್ ಸೇರಿದಂತೆ ನಾಳೆ ಹಲವರು ಆಡೋದು ಡೌಟ್. ಹೀಗಾಗಿ ಬೆಂಚ್ ಕಾಯ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟೀದಾರ್, ರಾಹುಲ್ ತ್ರಿಪಾಠಿಗೆ ನಾಳಿನ ಪಂದ್ಯದಲ್ಲಿ ಅವಕಾಶ ಕೊಡಿ. ಇವರು ಈ ಪಂದ್ಯದಲ್ಲಿ ಆಡಲಿಲ್ಲ ಎಂದರೆ ಮುಂದಿನ ಪ್ರವಾಸಕ್ಕೆ ಆಯ್ಕೆಯಾಗೋದೆ ಇಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post