T20 ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ರನ್ಮಷಿನ್ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ ರನ್ಗಳಿಸಲು ಪರದಾಡ್ತಿರೋದ್ಯಾಕೆ..? ಇದ್ದಕ್ಕಿದ್ದಂತೆ ಕೊಹ್ಲಿ ಫಾರ್ಮ್ ಕಳೆದುಕೊಳ್ಳಲು ಕಾರಣವಾದ್ರೂ ಏನು..? ಈ ಎಲ್ಲಾ ಪ್ರಶ್ನೆಗಳು ಈಗ, ಎಲ್ಲರನ್ನೂ ಕಾಡ್ತಿದೆ. ಅದಕ್ಕೆ ಉತ್ತರ ನಾವೇಳ್ತೀವಿ ಈ ಸ್ಟೋರಿ ನೋಡಿ.
ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋಲು ಕಂಡಿದೆ. ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋತ ಭಾರತದ 2ನೇ ಕ್ಯಾಪ್ಟನ್ ಅನ್ನೋ ಕೆಟ್ಟ ದಾಖಲೆ, ರೋಹಿತ್ ಶರ್ಮಾ ಹೆಗಲೇರಿದೆ. ಮತ್ತೊಂದೆಡೆ ಈ ಸೋಲು, ಭಾರತೀಯ ಕ್ರಿಕೆಟ್ ಫ್ಯಾನ್ಸ್ಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕ್ಯಾಪ್ಟನ್ ರೋಹಿತ್, ಕೋಚ್ ರಾಹುಲ್ ದ್ರಾವಿಡ್ ವಿರುದ್ಧ, ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಬಾಂಗ್ಲಾ ವಿರುದ್ಧ ಸರಣಿ ಗೆಲ್ಲೋಕೆ ಆಗದೇ ಇರೋರು, ವಿಶ್ವಕಪ್ ಗೆಲ್ತಾರಾ ಅಂತ, ಪ್ರಶ್ನಿಸ್ತಿದ್ದಾರೆ.
ಮಾಜಿ ಆಟಗಾರರು ಈ ಸರಣಿ ಸೋಲಿಗೆ, BCCIನೇ ಕಾರಣ.! T20 ವಿಶ್ವಕಪ್ ನಂತರ ಸೀನಿಯರ್ ಆಟಗಾರರಿಗೆ ರೆಸ್ಟ್ ನೀಡಿದ್ದೇಕೆ.? ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸೆಕೆಂಡ್ ಸ್ಟ್ರಿಂಗ್ ತಂಡವನ್ನ ಆಡಿಸಿದ್ದೇಕೆ..? ಫಾರ್ಮ್ನಲ್ಲಿದ್ದ ಆಟಗಾರರಿಗೆ ವಿಶ್ರಾಂತಿ ನೀಡೋ ಅವಶ್ಯಕತೆ ಏನಿತ್ತು..? ಅನ್ನೋ ಪ್ರಶ್ನೆ ಎತ್ತಿದ್ದಾರೆ.
T20 ವಿಶ್ವಕಪ್ನಲ್ಲಿ ಅಬ್ಬರ, ಏಕದಿನ ಕ್ರಿಕೆಟ್ನಲ್ಲಿ ಪರದಾಟ.!
ರನ್ಗಳಿಸಲು ರನ್ಮಷಿನ್ ಪರದಾಡ್ತಿರೋದ್ಯಾಕೆ.?
ಏಷ್ಯಾಕಪ್ ಹಾಗೂ T20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಅದ್ಭುತ ಪ್ರದರ್ಶನ ನೀಡಿದ್ರು. ಔಟ್ ಆಫ್ ಫಾರ್ಮ್ನಲ್ಲಿದ್ದ ಕೊಹ್ಲಿ, ಏಷ್ಯಾಕಪ್ನಲ್ಲಿ ಜಬರ್ದಸ್ತ್ ಕಮ್ಬ್ಯಾಕ್ ಮಾಡಿದ್ರು. ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ರು. T20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಆಡದೇ ಇದ್ದಿದ್ರೆ, ಟೀಮ್ ಇಂಡಿಯಾ ಸೆಮಿಫೈನಲ್ಗೂ ರೀಚ್ ಆಗ್ತಿರಲಿಲ್ಲ..!
ಏಷ್ಯಾಕಪ್ ಟೂರ್ನಿಯಲ್ಲಿ ಕೊಹ್ಲಿ.!
ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 5 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ರು. 147.59ರ ಸ್ಟ್ರೈಕ್ರೇಟ್ನಲ್ಲಿ 276 ರನ್ ಸಿಡಿಸಿದ್ರು. ಇದ್ರಲ್ಲಿ 2 ಅರ್ಧಶತಕ ಹಾಗೂ 1 ಶತಕ ಸೇರಿತ್ತು. ಟೂರ್ನಿಯಲ್ಲಿ ಅತಿಹೆಚ್ಚು ರನ್ಳಿಸಿದವ್ರರ ಪಟ್ಟಿಯಲ್ಲಿ ಕೊಹ್ಲಿ, ಎರಡನೇ ಸ್ಥಾನದಲ್ಲಿದ್ರು.
T20 ವಿಶ್ವಕಪ್ ಸಮರದಲ್ಲೂ ವಿರಾಟ್ ಕೊಹ್ಲಿ ಆರ್ಭಟಿಸಿದ್ರು. ಟೂರ್ನಿಯಲ್ಲಿ ಹೈಯೆಸ್ಟ್ ರನ್ಗಳಿಸಿದ ನಂಬರ್.1 ಬ್ಯಾಟ್ಸ್ಮನ್ ಅನ್ನೋ ದಾಖಲೆ, ಬರೆದಿದ್ರು. ಕೇವಲ 6 ಇನ್ನಿಂಗ್ಸ್ಗಳಿಂದ 296 ರನ್ ಕಲೆ ಹಾಕಿದ್ರು. 4 ಬಾರಿ ಅರ್ಧಶತಕದ ಗಡಿ ದಾಟಿದ್ರು. ಕೊಹ್ಲಿ ಬ್ಯಾಟಿಂಗ್ ಸರಾಸರಿ ಆಲ್ಮೋಸ್ಟ್ 99..
ಬಾಂಗ್ಲಾ ವಿರುದ್ಧ ಕೊಹ್ಲಿ ಫ್ಲಾಪ್ ಶೋ.!
T20 ಫಾರ್ಮೆಟ್ನಲ್ಲಿ ಅಬ್ಬರಿಸಿದ್ದ ಕೊಹ್ಲಿ, ಈಗ ಏಕದಿನ ಕ್ರಿಕೆಟ್ನಲ್ಲಿ ರನ್ಗಳಿಸೋಕೆ ಪರದಾಡ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡೂ ಏಕದಿನ ಪಂದ್ಯಗಳಿಂದ ಕೊಹ್ಲಿ ಗಳಿಸಿರೋದು, ಜಸ್ಟ್ 14 ರನ್.
ನ್ಯೂಜಿಲೆಂಡ್ ಪ್ರವಾಸದಿಂದ ಕೊಹ್ಲಿಗೆ ರೆಸ್ಟ್ ನೀಡಿದ್ದೇಕೆ..?
ಅನಗತ್ಯ ರೆಸ್ಟ್ನಿಂದ ಕೊಹ್ಲಿ ಫಾರ್ಮ್ಗೆ ಬಿತ್ತಾ ಬ್ರೇಕ್..?
ಕೊಹ್ಲಿಯ ಈ ಫೇಲ್ಯೂರ್ಗೆ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರೆಸ್ಟ್ ನೀಡಿದ್ದೇ ಕಾರಣ.! ಭರ್ಜರಿ ಫಾರ್ಮ್ನಲ್ಲಿದ್ದ ಕೊಹ್ಲಿಗೆ, ರೆಸ್ಟ್ ನೀಡಿ ಅವರ ಆಟಕ್ಕೆ ಬ್ರೇಕ್ ಹಾಕಲಾಯ್ತು ಅನ್ನೋ ಮಾತುಗಳು, ಕೇಳಿಬರ್ತಿವೆ.
ಕೊಹ್ಲಿಗೆ ರೆಸ್ಟ್ ನೀಡಿದ್ದು ಯಾಕೆ.?
‘T20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ರು. ಆದ್ರೆ ನ್ಯೂಜಿಲೆಂಡ್ ಪ್ರವಾಸದಿಂದ ಅವರಿಗೆ, ರೆಸ್ಟ್ ನೀಡಲಾಯ್ತು. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಕೂಡ ನ್ಯೂಜಿಲೆಂಡ್ಗೆ ತೆರಳಲಿಲ್ಲ. ಆದ್ರೆ ಈ ಮೂವರು ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ, ಕಮ್ಬ್ಯಾಕ್ ಮಾಡಿದ್ರು. ಇವರಿಗೆ ಫಾರ್ಮ್ ಕಂಡುಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ಶ್ರೇಯಸ್ ಅಯ್ಯರ್ರೊಬ್ಬರೇ ರೆಗ್ಯುಲರ್ ಆಗಿ ಏಕದಿನ ಪಂದ್ಯಗಳನ್ನಾಡ್ತಿದ್ದಾರೆ. ಅವರೊಬ್ಬರೇ ಸ್ಥಿರ ಪ್ರದರ್ಶನ ನೀಡ್ತಿದ್ದಾರೆ’
-ಸಬಾ ಕರೀಂ, ಆಯ್ಕೆ ಸಮಿತಿ ಮಾಜಿ ಸದಸ್ಯ
ನ್ಯೂಜಿಲೆಂಡ್ ಪ್ರವಾಸ ಮಾತ್ರ ಅಲ್ಲ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಪ್ರವಾಸದಿಂದಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ರೆಸ್ಟ್ ನೀಡಲಾಗಿತ್ತು. ಇದರಿಂದ ಈ ಇಬ್ಬರು ಸ್ಟಾರ್ ಪ್ಲೇಯರ್ಸ್, ಈ ವರ್ಷ ಆಡಿದ್ದು ಬೆರಳೆಣಿಕೆಯ ಪಂದ್ಯಗಳನ್ನ ಮಾತ್ರ. ಒಟ್ಟಿನಲ್ಲಿ BCCI, ಆಯ್ಕೆ ಸಮಿತಿಯ ಹಲವು ತಪ್ಪುಗಳು, ಎಡವಟ್ಟುಗಳೇ, ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲಿಗೆ ಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ಮೇಲಾದ್ರೂ ಇವ್ರು ತಪ್ಪುಗಳಿಂದ ಪಾಠ ಕಲಿಬೇಕು. ಇಲ್ಲವಾದಲ್ಲಿ 2023ರಲ್ಲೂ ಸೋಲುಗಳು ತಪ್ಪಿದ್ದಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post