ತಮಿಳುನಾಡು, ಆಂಧ್ರದ ಕರಾವಳಿಯನ್ನ ಅಪ್ಪಳಿಸಿದ್ದ ಮಾಂಡೌಸ್ ರಣಚಂಡಿ ಚಂಡಮಾರುತ, ಸದ್ಯ ಉತ್ತರದತ್ತ ದಾಳಿ ಇಟ್ಟಿದೆ. ಆದ್ರೆ ಸೈಕ್ಲೋನ್ ಹೊಡೆತ, ಈ 2 ರಾಜ್ಯಗಳಲ್ಲಿ ಅಪಾರ ಪ್ರಮಾಣದ ಹಾನಿವುಂಟಾಗಿದೆ. ಜನ, ಜಾನುವಾರುಗಳು ಸಾವಿನ ಸಂಖ್ಯೆ ಹೆಚ್ಚಿದೆ. ಇಷ್ಟಾದರೂ ಇನ್ನು ಎರಡ್ಮೂರು ದಿನಗಳ ಕಾಲ ಮಾಂಡೌಸ್ ಚಂಡಿ, ಮಳೆಯ ರೂಪದಲ್ಲಿ ಆರ್ಭಟಿಸಲಿದೆ. ಹವಾಮಾನ ಇಲಾಖೆ ಪ್ರಕಾರ ಡಿಸೆಂಬರ್ 15ವರೆಗೂ ಮಳೆರಾಯನ ಕಾಟ ಇರಲಿದೆ.
ರಣಚಂಡಿ ಚಂಡಮಾರುತದ ಹೊಡೆತ ಅದೆಷ್ಟರ ಮಟ್ಟಿಗೆ ಅದೆ ಅನ್ನೋದಕ್ಕೆ ಈ ದೃಶ್ಯಗಳೇ ಸಾರಿ ಸಾರಿ ಹೇಳ್ತಿವೆ. ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ತೀರದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ್ದಲ್ಲದೇ ಅಮಾಯಕ ಜೀವಗಳನ್ನ ಹೀರಿ ಬಿಟ್ಟಿದೆ ಮಾಂಡೌಸ್ ಚಂಡಿ.
ಮಾಂಡೌಸ್ ಅಪ್ಪಿಳಿಸಿ ಹೋದ್ರೂ ಕಡಿಮೆಯಾಗಿಲ್ಲ ಎಫೆಕ್ಟ್!
ಮಾಂಡೌಸ್ ಮಾಡಿದ ಅನಾಹುತಗಳು ತಮಿಳುನಾಡನ್ನ ತತ್ತರಿಸಿ ಹೋಗುವಂತೆ ಮಾಡಿದೆ.. ಜನ, ಜಾನುವಾರಗಳ ಜೀವಕ್ಕೂ ಕುತ್ತು ಬಂದಿದೆ. ಈಗಾಗಲೇ ರಣಚಂಡಿಯ ರೌದ್ರಾವತಾರಕ್ಕೆ ತಮಿಳುನಾಡಿನಲ್ಲಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಸಂಕಷ್ಟದಲ್ಲಿದ್ದವರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದರ ಮಧ್ಯೆ, ಮಳೆ ಒಂದ್ಕಡೆಯಾದ್ರೆ, ಮೈಕೊರೆಯುವ ಚಳಿ ಜನರನ್ನ ನರಳಾಡುವಂತೆ ಮಾಡುತ್ತಿದೆ. ತಮಿಳುನಾಡು ತೀರಕ್ಕೆ ಅಪ್ಪಳಿಸಿದ್ದ ಮಾಂಡೌಸ್ ಸೈಕ್ಲೋನ್, ಆಂಧ್ರದ ಮೂಲಕ ಓಡಿಶಾ ಮತ್ತು ಬಂಗಾಳದತ್ತ ದಾಳಿ ಇಟ್ಟಿದೆ. ಸದ್ಯ ತಮಿಳುನಾಡಿನಲ್ಲಿ ಚಂಡಮಾರುತ ಅಬ್ಬರ ಕಡಿಮೆಯಾದ್ರೂ ಮಾಡಿದ ಅವಾಂತರಗಳು. ತಮಿಳಿಗರನ್ನ ಕಂಗೆಡಿಸಿದೆ.
ಮಾಂಡೌಸ್ ಎಫೆಕ್ಟ್ ಮತ್ತು ಧಾರಾಕಾರ ಮಳೆಗೆ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಜಾನುವಾರುಗಳು ಮಳೆಗೆ ಕೊಚ್ಚಿಕೊಂಡು ಹೋಗಿವೆ. 151 ಮನೆಗಳಿಗೆ ಹಾನಿಯಾಗಿವೆ. ಚೆನ್ನೈ ನಗರವೊಂದರಲ್ಲೇ 500ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಯ ರಸ್ತೆಗಳು ಜಲಾವೃತವಾಗಿ ಸವಾರರು ಪರದಾಡುವಂತಾಗಿದೆ. ಸದ್ಯ ಮಾಂಡೌಸ್ ಚಂಡ ಮಾರುತದ ಅಬ್ಬರ ಕಡಿಮೆಯಾದರೂ ತಮಿಳುನಾಡಲ್ಲಿ ಇನ್ನೂ 2-3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಆಂಧ್ರದಲ್ಲಿ ಓರ್ವ ಸಾವು.. 5 ಸಾವಿರ ಹೆಕ್ಟರ್ ಬೆಳೆ ನಾಶ
ತಮಿಳುನಾಡಿನಂತೆ ಆಂಧ್ರದ ನೆಲದಲ್ಲೂ ಮಾಂಡೌಸ್ ಚಂಡಿಯ ಅಬ್ಬರ ಹೆಚ್ಚಾಗಿದೆ.. ದಕ್ಷಿಣ ಆಂಧ್ರದಲ್ಲಿ ಓರ್ವ ವ್ಯಕ್ತಿ ಪ್ರಾಣ ಬಿಟ್ಟಿದ್ದಾನೆ. ಸಾವಿರಕ್ಕೂ ಹೆಚ್ಚು ಜನರನ್ನ ಕರಾವಳಿ ತೀರದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಕೇವಲ ಮೂರ್ನಾಲ್ಕು ದಿನಗಳಲ್ಲೇ ಸುಮಾರು 5 ಸಾವಿರ ಹೆಕ್ಟರ್ ಪ್ರದೇಶದ ಬೆಳೆ ಮಳೆಯಿಂದ ಹಾನಿಯಾಗಿದೆ. ಇನ್ನು ನೆಲ್ಲೂರು ಮತ್ತು ತಿರುಪತಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ಕಾಂಡಲೆರು, ಮನೇರು, ಸ್ವರ್ಣಮುಖಿ ಸೇರಿ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಆಂಧ್ರದಲ್ಲೂ ಸೈಕ್ಲೋನ್ ಅಬ್ಬರ ಕಡಿಮೆಯಾದರೂ, ಇಂದು ಕೂಡ ಭಾರೀ ಮಳೆಯಾಗಿದೆ. ಜೊತೆಗೆ ನಾಳೆ ಮತ್ತು ನಾಡಿದ್ದು, ಮಳೆಯಾಗೋ ಸಾಧ್ಯತೆ ಇದೆ ಅಂತ ರಾಜ್ಯ ಹವಾಮಾನ ಇಲಾಖೆ ವಾರ್ನಿಂಗ್ ನೀಡಿದೆ. ಹೀಗಾಗಿ ಆಂಧ್ರದ ಉತ್ತರ ಮತ್ತು ರಾಯಲ್ ಸೀಮೆಯಲ್ಲಿ ಎಚ್ಚರವಾಗಿರುವ ತಿಳಿಸಲಾಗಿದೆ. ಉಳಿದಂತೆ ಮಾಂಡೌಸ್ ಪ್ರಭಾವ ಕರ್ನಾಟಕದ ಮೇಲೂ ಬಿದ್ದಿದೆ. ಒಟ್ಟಾರೆ, ಚುಮುಚುಮು ಚಳಿಯ ನಡುವೆ, ಮಾಂಡೌಸ್ ಮಾಡಿದ ಹಾನಿ, ದಕ್ಷಿಣ ರಾಜ್ಯಗಳನ್ನ ನಡುಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post