ರಾಯಚೂರು: 5 ರೂಪಾಯಿ ಕುರುಕಲು ತಿಂಡಿ ಪ್ಯಾಕೆಟ್ಗಳನ್ನ ಖರೀದಿಸಿದವರಿಗೆ ಗರಿಗರಿ 500 ರೂಪಾಯಿ ನೋಟುಗಳು ಪತ್ತೆಯಾಗಿರುವ ಅಪರೂಪದ ಘಟನೆ ಲಿಂಗಸುಗೂರು ತಾಲೂಕಿನ ಹೂನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿಯವರೆಗೆ ಬರೊಬ್ಬರಿ 40 ಸಾವಿರ ರೂ.ವರೆಗೆ ಹಣ ತಿಂಡಿ ಪ್ಯಾಕೆಟ್ಗಳಲ್ಲಿ ಪತ್ತೆಯಾಗಿವೆ.
ಹೂನೂರು ಗ್ರಾಮದ ಅಂಗಡಿಯಲ್ಲಿ ಪಂಚಾಬಿ ತಡ್ಕಾ, ಹೈದ್ರಾಬಾದಿ ಕಾರ್ನ್ ಪಫ್ ಅಂತೆಲ್ಲಾ ಮುದ್ರಿಸಿರೋ 1, 2 , 5 ರೂಪಾಯಿ ತಿಂಡಿ ಪ್ಯಾಕೆಟ್ಗಳಲ್ಲಿ 500 ಮುಖ ಬೆಲೆಯ ನೋಟುಗಳು ಪತ್ತೆಯಾಗಿವೆ. ಮೊದಮೊದಲು ನೋಟುಗಳು ಅಸಲಿಯೇ, ನಕಲಿಯೇ ಎಂದು ಪರೀಕ್ಷಿಸಿದ್ದಾರೆ. ಬಳಿಕ ಅವು ಅಸಲಿ ನೋಟ್ ಎಂದು ಗೊತ್ತಾಗ್ತಿದ್ದಂತೆಯೇ ಖುಷಿಪಟ್ಟಿದ್ದಾರೆ.
ಒಂದೇ ಪಾಕೆಟ್ನಲ್ಲಿ 500 ರೂಪಾಯಿಯ ನಾಲ್ಕೈದು ನೋಟುಗಳು ಸಿಗುತ್ತಿವೆ. ಗ್ರಾಮದ ಕೆಲವ್ರಿಗೆ ಸಾವಿರಾರು ರೂಪಾಯಿ ಸಿಕ್ಕಿವೆ. ಹೀಗಾಗಿ ಕುರುಕಲು ಪ್ಯಾಕೆಟ್ ಖರೀದಿಗೆ ಗ್ರಾಮದ ಜನರು ಮುಗಿಬಿದ್ದಿದ್ದಾರೆ. ಅಂಗಡಿ ಮಾಲೀಕನಿಗೆ ತಿಂಡಿ ಪ್ಯಾಕೆಟ್ಗಳನ್ನ ಮತ್ತೆ ತರುವಂತೆ ಗ್ರಾಮಸ್ಥರು ಒತ್ತಾಯಿಸಿ ಕಿರಿಕಿರಿ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ತಿಂಡಿ ಪ್ಯಾಕೆಂಟ್ಗಳನ್ನ ವಿಜಯಪುರದಲ್ಲಿ ಉತ್ಪಾದನೆ ಮಾಡಲಾಗಿದೆ. ತಮ್ಮ ಕಂಪನಿ ಪ್ರಚಾರಕ್ಕಾಗಿ ಈ ರೀತಿ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post