ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸುತ್ತೀರಾ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಿಮ್ಮ ನಾಯಕರೊಬ್ಬರಿಂದ ಘೋಷಣೆ ಮಾಡಿಸಿದ್ದೀರಿ. ನಿಜವಾಗಿಯೂ ಸ್ಪರ್ಧೆ ಮಾಡುತ್ತೀರಾ? ಸ್ಪರ್ಧೆ ಮಾಡುವುದಕ್ಕೆ ಭಯವಿಲ್ಲ ತಾನೇ? ಈ ಬಾರಿಯಾದ್ರೂ 2ನೇ ಕ್ಷೇತ್ರಕ್ಕೆ ಓಡಿ ಹೋಗುವುದಿಲ್ಲ ತಾನೇ? ಎಂದು ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿಗೆ ಪ್ರಶ್ನೆ ಮಾಡಿದ್ದಾರೆ.
ನೀವು ಮತ್ತು ನಿಮ್ಮ ಮಮ್ಮಿ ಜೀ ಅವರು ಸ್ತ್ರೀ ವಿರೋಧಿಯ ಹೊಸ ಭಾಷಣಕಾರರನ್ನ ಪ್ರಚಾರಕ್ಕಾಗಿ ತರಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಅಜಯ್ ರೈಯವರು, ಸ್ಮೃತಿ ಇರಾನಿಯ ಬಗ್ಗೆ ಎಲೆಕ್ಷನ್ನ ಪ್ರಚಾರದಲ್ಲಿ ವೈಯಾರ ತೊರಿಸಿ ಪ್ರಚಾರ ಮಾಡಿ ನೀವು ಗೆಲುವು ಪಡೆದಿದ್ದೀರಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವಿಟ್ ಅನ್ನು ಖಂಡಿಸಿ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
सुना है @RahulGandhi जी आपने अपने किसी प्रांतीय नेता से अभद्र तरीके से 2024 में अमेठी से लड़ने की घोषणा करवाई है।
तो क्या आपका अमेठी से लड़ना पक्का समझूँ? दूसरी सीट पर तो नहीं भागेंगे? डरेंगे तो नहीं???
PS: You & Mummy ji need to get your mysoginistic goons a new speechwriter.
— Smriti Z Irani (@smritiirani) December 19, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post