ಜೈಪುರ: ‘ಭಾರತ್ ಜೋಡೋ ಯಾತ್ರೆ’ ವೇಳೆ ವೇದಿಕೆ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿ ಮೇಲೆ ರಾಹುಲ್ ಗಾಂಧಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಬಿಜೆಪಿ ಸಂಸದ ರಾಜವರ್ಧನ್ ಸಿಂಗ್ ರಾಥೋಡ್.. ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ಗೆ ಅಷ್ಟೇ ಜನರನ್ನ ಬಳಸಿಕೊಳ್ಳುತ್ತೆ. ಕಾಂಗ್ರೆಸ್ಗೆ ಜನರು ಬೇಕಾಗಿಲ್ಲ. ಭಾರತ್ ಜೋಡೋ ಯಾತ್ರೆ ಕೇವಲ ನಾಟಕವಷ್ಟೇ ಎಂದು ಹರಿಹಾಯ್ದಿದ್ದಾರೆ.
ಡಿಸೆಂಬರ್ 21 ರಂದು ರಾಜಸ್ಥಾನದ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅಭಿಮಾನಿಗಳ ಗುಂಪಿನ ಜೊತೆ ಪೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬರು ಮುಂದೆ ಬಂದು ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಾರೆ. ಆಗ ರಾಹುಲ್ ಗಾಂಧಿ ಆ ವ್ಯಕ್ತಿಯ ಕೈಯಲ್ಲಿನ ಫೋನ್ ಕಸಿಯುವಂತೆ ತಳ್ಳುತ್ತಾರೆ. ಮತ್ತೆ ಸೆಲ್ಫಿಗೆ ಯತ್ನಿಸಿದಾಗ ರಾಹುಲ್ ಮತ್ತೊಮ್ಮೆ ತಳ್ಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
'मोहब्बत की दुकान के फीके पकवान'
कांग्रेस के लिए जनता सिर्फ वोट बैंक है। तुष्टिकरण की राजनीति तो इनकी रग-रग में है। भारत जोड़ो यात्रा तो सिर्फ एक नाटक है। pic.twitter.com/HZ6yISYsnS
— RajyavardhanRathore (@Ra_THORe) December 21, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post