ಇಂದು ನಡೆಯುತ್ತಿರೋ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಬ್ಬರು ವಿದೇಶಿ ಸ್ಟಾರ್ ಪ್ಲೇಯರ್ಸ್ ಜತೆಗೆ ಲೋಕಲ್ ಟ್ಯಾಲೆಂಟ್ಸ್ಗೆ ಹೆಚ್ಚು ಒತ್ತು ನೀಡಿದೆ. ಹೀಗಾಗಿ ಬರೋಬ್ಬರಿ ಐವರು ಅನ್ಕ್ಯಾಪ್ಡ್ ಪ್ಲೇಯರ್ಸ್ ಅನ್ನು ಪರ್ಚೇಸ್ ಮಾಡಿದೆ.
ಭಾರತದ ಹೊಸ ಪ್ರತಿಭೆಗಳಾದ ರಾಜನ್ ಕುಮಾರ್ 70 ಲಕ್ಷ, ಅವಿನಾಶ್ ಸಿಂಗ್ 60 ಲಕ್ಷ, ಮನೋಜ್ ಭಂಡಾಗೆ 20 ಲಕ್ಷ, ಹಿಮಾನ್ಶು ಶರ್ಮಾ 20 ಲಕ್ಷ ಮತ್ತು ಸೋನು ಯಾದವ್ ಎಂಬುವರಿಗೆ 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಇನ್ನು, ಆರ್ಸಿಬಿ 1.90 ಕೋಟಿಗೆ ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟಾಪ್ಲೆ ಖರೀದಿಸಿದೆ. ಜತೆಗೆ 6 ಬಾಲ್ಗೆ 6 ಸಿಕ್ಸರ್ ಚಚ್ಚಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್‌ಗೆ 3.20 ಕೋಟಿಗೆ ಖರೀದಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post