ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟಲು ಮುಗಿ ಬೀಳುತ್ತಿವೆ. ಹೀಗಾಗಿ ಒಳ್ಳೇ ಆಟಗಾರರನ್ನು ಕಡಿಮೆ ದುಡ್ಡಿಗೆ ಖರೀದಿಸಲು ಪ್ಲಾನ್ ಮಾಡುತ್ತಿವೆ. ಅದರಲ್ಲೂ ಪ್ರತಿಭಾನ್ವಿತ ಆಟಗಾರರ ಬಿಡ್ಡಿಂಗ್ಗಾಗಿ ಎಷ್ಟು ಕೋಟಿ ಬೇಕಾದರೂ ಸುರಿಯುತ್ತವೆ. ಆದರೀ, ಆರ್ಸಿಬಿ ಮಾತ್ರ ಕಡಿಮೆ ದುಡ್ಡಿಗೆ ಸ್ಮಾರ್ಟ್ ಪಿಕ್ ಮಾಡುತ್ತಿವೆ.
ಆರ್ಸಿಬಿ ಮೂವರು ಪ್ರಮುಖ ಆಟಗಾರರಿಗೆ ಮಣೆ ಹಾಕಿದೆ. 1.90 ಕೋಟಿಗೆ ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟಾಪ್ಲೆ ಖರೀದಿಸಿದ್ರೆ, ಕೇವಲ 20 ಲಕ್ಷ ಮೂಲ ಬೆಲೆಗೆ ಅನ್ ಕ್ಯಾಪ್ ಪ್ಲೇಯರ್ ಹಿಮಾಂಶು ಶರ್ಮಾಗೆ ಮಣೆ ಹಾಕಿದೆ. ಇದಾದ ಬೆನ್ನಲ್ಲೇ 6 ಬಾಲ್ಗೆ 6 ಸಿಕ್ಸರ್ ಚಚ್ಚಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್‌ಗೆ 3.20 ಕೋಟಿಗೆ ಖರೀದಿ ಮಾಡಿದೆ.
ಮೂರು ವರ್ಷಗಳ ಹಿಂದೆ ದುಬೈನಲ್ಲಿ ನಡೆದಿದ್ದ ಟಿ10 ಟೂರ್ನಿಯಲ್ಲಿ ಲಂಕಾಷೈರ್ ತಂಡದ ವಿರುದ್ಧ ಸರ್ರೆ ತಂಡದ ಪರ ಬ್ಯಾಟಿಂಗ್ ಮಾಡಿದ್ದ ವಿಲ್ ಜ್ಯಾಕ್ಸ್ ಕೇವಲ 25 ಎಸೆತಗಳಿಗೆ ಶತಕ ಚಚ್ಚಿದ್ದರು. ಅದರಲ್ಲೂ ಓವರ್‌ನಲ್ಲಿ ಆರು ಸಿಕ್ಸ್ ಬಾರಿಸಿ ವಿಶ್ವದ ಗಮನ ಸೆಳೆದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post