ಇದ್ದದ್ದೇ 8.75 ಕೋಟಿ. ಇದು ಆರ್ಸಿಬಿ ಪರ್ಸ್ನಲ್ಲಿದ್ದ ಮೊತ್ತ. ಎಲ್ಲಾ ಫ್ರಾಂಚೈಸಿಗಳು, ದೊಡ್ಡ ದೊಡ್ಡ ಆಟಗಾರರನ್ನೇ ಬುಟ್ಟಿಗೆ ಹಾಕಿಕೊಳ್ತಿದ್ರೆ ಆರ್ಸಿಬಿ ಮಾತ್ರ ಕಣ್ಣುಕಣ್ಣು ಬಿಟ್ಟ ನೋಡ್ತಿತ್ತು. ಇದ್ರ ನಡುವೆಯೂ ನಮ್ಮ ಬೆಂಗಳೂರು, ಕೆಲ ಅರ್ಥವಿಲ್ಲದ ಆಟಗಾರರನ್ನ ಪಿಕ್ ಮಾಡಿ, ಅಚ್ಚರಿ ಮೂಡಿಸಿದೆ.
ಪರ್ಸ್ನಲ್ಲಿ ಕಡಿಮೆ ದುಡ್ಡಿದ್ರೂ ಆರ್ಸಿಬಿ ಲೆಕ್ಕಾಚಾರ ಜೋರಾಗೇ ಇತ್ತು. ಮೈಂಡ್ನಲ್ಲಿ ಕೆಲ ಪ್ಲೇಯರ್ಗಳನ್ನ ಟಾರ್ಗೆಟ್ ಮಾಡ್ಬೇಕು ಎಂದು ಫಿಕ್ಸ್ ಆಗಿತ್ತು. ಹೀಗಾಗಿ ಸ್ಯಾಮ್ ಕರನ್, ಕ್ಯಾಮರೂನ್ ಗ್ರೀನ್, ಬೆನ್ ಸ್ಟೋಕ್ಸ್.. ಹೀಗೆ ಕೆಲವ್ರು ಸಿಕ್ತಾರೇನೋ ಅಂತ ಕಲ್ಲು ಹಾಕಿತು. ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಗೆ ಆರ್ಸಿಬಿ ತಾಳ್ಮೆಯಿಂದಲೇ ಆಕ್ಷನ್ನಲ್ಲಿ ಕೆಲ ಪ್ಲೇಯರ್ಗಳನ್ನ ಖರೀದಿಸ್ತು.
ವಿಲ್ ಜಾಕ್ಸ್: 3 ಕೋಟಿ 20 ಲಕ್ಷ
ಕಡಿಮೆ ದುಡ್ಡಲ್ಲೂ ಆರ್ಸಿಬಿ, ಉತ್ತಮ ಪಿಕ್ ಮಾಡಿದೆ. ಅಳೆದು ತೂಗಿ ಬಿಡ್ ಮಾಡಿದ ಬೆಂಗಳೂರು, ಹೊಡಿಬಡಿ ಆಟಗಾರನಿಗೇ ಗಾಳ ಹಾಕಿದೆ. ದುಬೈನಲ್ಲಿ ನಡೆದ T10 ಪಂದ್ಯವೊಂದ್ರಲ್ಲಿ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್, 25 ಎಸೆತಗಳಿಗೆ ಶತಕ ಚಚ್ಚಿ ವಿಶ್ವದ ಗಮನ ಸೆಳೆದಿದ್ದ. ಜೊತೆಗೆ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಧೂಳೆಬ್ಬಿಸಿರುವ ಈ ಯಂಗ್ ಕ್ರಿಕೆಟರ್, ರೆಡ್ ಆರ್ಮಿಗೆ ಸೇರಿದ್ದು ತಂಡದ ಬಲ ಹೆಚ್ಚಿಸಿದೆ. ಈ ಸ್ಫೋಟಕ ಬ್ಯಾಟ್ಸ್ಮನ್, ಫಿನಿಷರ್ ದಿನೇಶ್ ಕಾರ್ತಿಕ್ಗೆ ಒಳ್ಳೆ ಜೋಡಿ ಕೂಡ ಆಗಿದ್ದಾರೆ.
𝗦𝘁𝗿𝗼𝗻𝗴 𝗰𝗼𝗿𝗲 𝗮𝗻𝗱 𝘁𝗵𝗲𝗻 𝘀𝗼𝗺𝗲 𝗺𝗼𝗿𝗲. 💪
Pretty much sums up our Class of 2023. We’re summer ready! Aren’t we, 12th Man Army? 😍#PlayBold #WeAreChallengers #IPL2023 #ClassOf2023 pic.twitter.com/JhPKnldrP6
— Royal Challengers Bangalore (@RCBTweets) December 24, 2022
ರಿಸಿ ಟಾಪ್ಲೆ: 1 ಕೋಟಿ 90 ಲಕ್ಷ
ರಿಸಿ ಟಾಪ್ಲೆ, ಇಂಗ್ಲೆಂಡ್ ತಂಡದ ಲೆಫ್ಟ್ ಆರ್ಮ್ ಪೇಸರ್. 6.7 ಅಡಿ ಇರುವ ಈ ಆಜಾನುಬಾಹು ಮೇಲೆ ಆರ್ಸಿಬಿ, 1 ಕೋಟಿ 90 ಲಕ್ಷ ಬಂಡವಾಳ ಹೂಡಿದೆ. 75 ಲಕ್ಷ ಬೇಸ್ಪ್ರೈಸ್ ಹೊಂದಿದ್ದ ಟಾಪ್ಲೆ, ಹೇಜಲ್ವುಡ್ಗೆ ಬೆಸ್ಟ್ ಬ್ಯಾಕಪ್ ಆಗಿದ್ದಾರೆ. ಎರಡೂ ರೀತಿಯಲ್ಲಿ ಚೆಂಡನ್ನ ಸ್ವಿಂಗ್ ಮಾಡುವ ಟೋಪ್ಲಿಗಾಗಿ ಬಿಡ್ಡಿಂಗ್ನಲ್ಲಿ ಮುಂಬೈ, ಚೆನ್ನೈ, ಆರ್ಸಿಬಿ ಟೀಮ್ಗಳು, ತೀವ್ರ ಪೈಪೋಟಿ ನಡೆಸಿದ್ವು. ಕೊನೆಗೆ ಟಾಪ್ಲೆ ಆರ್ಸಿಬಿ ಪಾಲಾದ್ರು. ವಿಲ್ ಜಾಕ್, ರಿಸಿ ಟೋಪ್ಲೆ, ಅಷ್ಟೇ ಅಲ್ಲ. ಇನ್ನೂ ಕೆಲ ಯಂಗ್ ಕ್ರಿಕೆಟ್ಗಳೂ ಆರ್ಸಿಬಿಗೆ ತಮಡ ಸೇರಿದ್ದಾರೆ.
RCB ತಂಡವನ್ನ ಸೇರಿದವರು..!
- ರಾಜನ್ ಕುಮಾರ್ 70 ಲಕ್ಷ
- ಅವಿನಾಶ್ ಸಿಂಗ್ 60 ಲಕ್ಷ
- ಮನೋಜ್ ಬಂಡಗೆ 20 ಲಕ್ಷ
- ಹಿಮಾಂಶು ಶರ್ಮಾ 20 ಲಕ್ಷ
- ಸೋನು ಯಾದವ್ 20 ಲಕ್ಷ
- ಆರ್ಸಿಬಿ ಸ್ಕೌಟ್ಸ್ ಲೆಕ್ಕಚಾರವೇ ಅರ್ಥವಾಗ್ಲಿಲ್ಲ..!
ಆರ್ಸಿಬಿ ಲೆಕ್ಕಾಚಾರ, ಎಲ್ಲರನ್ನೂ ಗೊಂದಲಕ್ಕೆ ಸಿಲುಕಿಸಿದೆ. ಯುವ ಆಟಗಾರರ ದಂಡನ್ನೇ ಖರೀದಿಸಿರುವ ಆರ್ಸಿಬಿಗೆ, ಆ ಕ್ರಿಕೆಟಿಗರು ಯಾರು..? ಅವ್ರ ಹಿನ್ನಲೆ ಏನು ಅಂತ ಗೊತ್ತಿದಿಯೋ ಇಲ್ವೋ ಗೊತ್ತಿಲ್ಲ. ಆದ್ರೆ ಯುವಕರನ್ನ ಗುಡ್ಡೆ ಹಾಕಿಕೊಂಡಿರೋ ಆರ್ಸಿಬಿ, ಖಂಡಿತ ಗ್ಯಾಂಬ್ಲಿಗ್ ಮಾಡಿರೋದಂತೂ ಸುಳ್ಳಲ್ಲ.
RCB ಬೆಸ್ಟ್ ಪಿಕ್ ಯಾವ್ದು..? ಟೀಮ್ ಬ್ಯಾಲೆನ್ಸ್ ಹೇಗಿದೆ?
ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತಿರೋ ಇಂಗ್ಲೆಂಡ್‌ನ ವಿಲ್ ಜಾಕ್ಸ್, RCBಯ ಬೆಸ್ಟ್ ಪಿಕ್. ಅಗ್ರೆಸ್ಸಿವ್ ಬ್ಯಾಟ್ಸ್ಮನ್ ಜೊತೆಗೆ ಮ್ಯಾಚ್ ಫಿನಿಷರ್ ಆಗಿರುವ ಜಾಕ್ಸ್, ಆರ್ಸಿಬಿಗೆ ಬಲ ತುಂಬಲಿದ್ದಾರೆ. ಆದ್ರೆ ಆರ್ಸಿಬಿ ಟೀಮ್ ಬ್ಯಾಲೆನ್ಸ್ ನೋಡ್ತಾ ಇದ್ರೆ, ಕಳೆದ ಬಾರಿಗೂ, ಈ ಬಾರಿಗೂ ಯಾವುದೇ ವ್ಯತ್ಯಾಸ ಕಾಣ್ತಿಲ್ಲ.
Joining RCB’s #ClassOf2023:
Name: Will Jacks
Price: 320LWelcome to the RCB family! ❤️#PlayBold #WeAreChallengers #IPL2023 #IPL2023Auction pic.twitter.com/gsqumWPITW
— Royal Challengers Bangalore (@RCBTweets) December 23, 2022
ಹರಾಜಿನಲ್ಲಿ ಆರ್ಸಿಬಿ ಸ್ಟ್ರಾಟಜಿನೇ, ಅರ್ಥವಾಗ್ಲಿಲ್ಲ.!
ಒಟ್ನಲ್ಲಿ..ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲೋಕಲ್ ಟ್ಯಾಲೆಂಟ್ ಅನ್ನ ಮಿಸ್ ಮಾಡಿಕೊಂಡಿದೆ. ನಮ್ಮ ರಾಜ್ಯದ ಕೆಲ ಆಟಗಾರರನ್ನ ಆರ್ಸಿಬಿ, ಬಿಡ್ ಮಾಡಿ ಖರೀದಿಸಬಹುದಿತ್ತು. ಆದ್ರೆ ಆರ್ಸಿಬಿ, ಆ ಸಾಹಸಕ್ಕೆ ಕೈ ಹಾಕಲಿಲ್ಲ. ಜೊತೆಗೆ ಸ್ಟಾರ್ ಆಟಗಾರರ ಖರೀದಿಯಲ್ಲೂ, ರಿಸ್ಕ್ ಕೂಡ ತೆಗೆದುಕೊಳ್ಳಲಿಲ್ಲ. ಏನೇ ಇರಲಿ..! ಆಕ್ಷನ್ ಏನೋ ಮುಗಿತು. ಆದ್ರೆ ಅಭಿಮಾನಿಗಳಿಗೆ ಕಾಡ್ತಿರೋ ಒಂದೇ ಒಂದು ಪ್ರಶ್ನೆ, ಈ ಸಲ ಆರ್ಸಿಬಿ ಕಪ್ ಗೆಲ್ಲುತ್ತಾ ಅನ್ನೋದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post