ಪರ್ಸ್ನಲ್ಲಿ ಕಡಿಮೆ ದುಡ್ಡಿದ್ರೂ ಆರ್ಸಿಬಿ ಲೆಕ್ಕಾಚಾರ ಜೋರಾಗಿಯೇ ಇತ್ತು. ಮೈಂಡ್ನಲ್ಲಿ ಕೆಲ ಪ್ಲೇಯರ್ಗಳನ್ನ ಟಾರ್ಗೆಟ್ ಮಾಡ್ಬೇಕು ಅಂತ ಫಿಕ್ಸ್ ಆಗಿತ್ತು. ಹೀಗಾಗಿ ಸ್ಯಾಮ್ ಕರನ್, ಕ್ಯಾಮರೂನ್ ಗ್ರೀನ್, ಬೆನ್ ಸ್ಟೋಕ್ಸ್.. ಹೀಗೆ ಕೆಲವ್ರು ಸಿಕ್ತಾರೇನೋ ಅಂತ, ಕಲ್ಲು ಹಾಕಿತು. ಆದ್ರೆ ಅದು ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಗೆ ಆರ್ಸಿಬಿ, ತಾಳ್ಮೆಯಿಂದಲೇ ಆಕ್ಷನ್ನಲ್ಲಿ ಕೆಲ ಪ್ಲೇಯರ್ಗಳನ್ನ ಖರೀದಿದೆ.
ವಿಲ್ ಜಾಕ್ಸ್: 3 ಕೋಟಿ 20 ಲಕ್ಷ
ಕಡಿಮೆ ದುಡ್ಡಲ್ಲೂ ಆರ್ಸಿಬಿ, ಉತ್ತಮ ಪಿಕ್ ಮಾಡಿದೆ. ಅಳೆದು ತೂಗಿ ಬಿಡ್ ಮಾಡಿದ ಬೆಂಗಳೂರು, ಹೊಡಿಬಡಿ ಆಟಗಾರನಿಗೇ ಗಾಳ ಹಾಕಿದೆ. ದುಬೈನಲ್ಲಿ ನಡೆದ T10 ಪಂದ್ಯವೊಂದ್ರಲ್ಲಿ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್, 25 ಎಸೆತಗಳಿಗೆ ಶತಕ ಚಚ್ಚಿ ವಿಶ್ವದ ಗಮನ ಸೆಳೆದಿದ್ದ. ಜೊತೆಗೆ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಧೂಳೆಬ್ಬಿಸಿರುವ ಈ ಯಂಗ್ ಕ್ರಿಕೆಟರ್, ರೆಡ್ ಆರ್ಮಿಗೆ ಸೇರಿದ್ದು ತಂಡದ ಬಲ ಹೆಚ್ಚಿಸಿದೆ. ಈ ಸ್ಫೋಟಕ ಬ್ಯಾಟ್ಸ್ಮನ್, ಫಿನಿಷರ್ ದಿನೇಶ್ ಕಾರ್ತಿಕ್ಗೆ ಒಳ್ಳೆ ಜೋಡಿ ಕೂಡ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೋಕಲ್ ಟ್ಯಾಲೆಂಟ್ ಅನ್ನ ಮಿಸ್ ಮಾಡಿಕೊಂಡಿದೆ. ನಮ್ಮ ರಾಜ್ಯದ ಕೆಲ ಆಟಗಾರರನ್ನ ಆರ್ಸಿಬಿ, ಬಿಡ್ ಮಾಡಿ ಖರೀದಿಸಬಹುದಿತ್ತು. ಆದ್ರೆ ಆರ್ಸಿಬಿ, ಆ ಸಾಹಸಕ್ಕೆ ಕೈ ಹಾಕಲಿಲ್ಲ. ಜೊತೆಗೆ ಸ್ಟಾರ್ ಆಟಗಾರರ ಖರೀದಿಯಲ್ಲೂ, ರಿಸ್ಕ್ ಕೂಡ ತೆಗೆದುಕೊಳ್ಳಲಿಲ್ಲ. ಆದ್ರೆ ಅಭಿಮಾನಿಗಳಿಗೆ ಕಾಡ್ತಿರೋ ಒಂದೇ ಒಂದು ಪ್ರಶ್ನೆ, ಈ ಸಲ ಆರ್ಸಿಬಿ ಕಪ್ ಗೆಲ್ಲುತ್ತಾ ಅನ್ನೋದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post