ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ಗೇಲ್ ಐಪಿಎಲ್‌ನಲ್ಲಿ ತನ್ನ ನೆಚ್ಚಿನ ತಂಡ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. IPLನಲ್ಲಿ ಹೆಚ್ಚು ಕಾಲ ಪ್ರತಿನಿಧಿಸಿದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರೇ ನನ್ನ ಫೇವರಿಟ್ ಎಂದು ಹೇಳಿದ್ದಾರೆ.
2011ರ ಆವೃತ್ತಿಯಿಂದ RCB ತಂಡದ ಭಾಗಿವಾಗಿದ್ದ ಗೇಲ್, ಆರ್‌ಸಿಬಿ ತಂಡವೇ ನನಗೆ ನಂಬರ್ 1 ತಂಡ ಎಂದಿದ್ದಾರೆ. ಬೆಂಗಳೂರು ಮೂಲದ ಫ್ರಾಂಚೈಸಿ, ತನ್ನ ಹೃದಯಕ್ಕೆ ಯಾವಾಗಲೂ ಹತ್ತಿರ ಎಂದಿದ್ದಾರೆ ಎಂದಿದ್ದಾರೆ.
ಒಂದಲ್ಲ, ಎರಡಲ್ಲ, ಬರೋಬ್ಬರಿ 7 ಸೀಸನ್ಗಳಲ್ಲಿ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಭಾಗವಾಗಿದ್ದರು. ಸುಮಾರು ಏಳು ವರ್ಷಗಳು ಆರ್‌ಸಿಬಿ ತಂಡದಲ್ಲಿ ಆಡಿದ್ದ ಗೇಲ್ ಇದಾದ ಬಳಿಕ ಎರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಹಾಗೆಯೇ ಆರ್‌ಸಿಬಿ ಪರ ಹಲವು ದಾಖಲೆಗಳನ್ನು ಬರೆದಿದ್ದಾರೆ. 142 ಐಪಿಎಲ್ ಪಂದ್ಯಗಳಲ್ಲಿ 4965 ರನ್ ಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post