ಚೀನಾದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವಾಗಲೇ ಮಹಾಮಾರಿಯ ಆತಂಕ ದೇಶದಲ್ಲಿ ಹೆಚ್ಚಾಗ್ತಿದೆ. ದಿನೇ ದಿನೇ ಕೇಸ್ಗಳ ಸಂಖ್ಯೆ ಪ್ಲಸ್ ಆಗ್ತಿದ್ದು ಸರ್ಕಾರ ಹಾಗೂ ಜನರ ನಿದ್ದೆಗೆಡಿಸಿದೆ. ಈ ನಡುವೆಯೇ ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪ್ರಯಾಣಿಕನೊಬ್ಬನಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಜನರ ಜೀವವನ್ನು ಬಲಿ ತೆಗೆದುಕೊಳ್ಳಲು ಯಮರಾಜನ ಬಂಟನಂತೆ ಚೀನಾದಲ್ಲಿ ಕೊರೊನಾ ಮಹಾಮಾರಿ ರಣಕೇಕೆ ಹಾಕ್ತಿದೆ. ಹೀಗಾಗಿ ಸರ್ಕಾರ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಆದ್ರೆ ಇಷ್ಟೆಲ್ಲ ಸರಹದ್ದುಗಳನ್ನ ದಾಟಿ ವೈರಸ್ ರಾಜ್ಯಕ್ಕೆ ಲಗ್ಗೆ ಇಟ್ಟೇ ಬಿಟ್ಟಿದೆ.
ಚೀನಾದಿಂದ ಬೆಂಗಳೂರಿಗೆ ಬಂದವನಿಗೆ ಕೊರೊನಾ
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸರ್ಕಾರ ತೀವ್ರ ನಿಗಾ ಇರಿಸಿದ್ರೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾರಿಯ ಎಂಟ್ರಿ ಆಗಿದೆ. ಚೀನಾದಿಂದ ಬೆಂಗಳೂರಿಗೆ ಬಂದ 35 ವರ್ಷದ ವ್ಯಕ್ತಿಗೆ ಟೆಸ್ಟ್ ವೇಳೆ ಕೋವಿಡ್ ಪಾಸಿಟಿವ್ ಬಂದಿದೆ. ಚೀನಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಆಗಮನದ ಚೆಕ್ಕಿಂಗ್ ವೇಳೆ ವ್ಯಕ್ತಿಯಲ್ಲಿ ರೋಗದ ಗುಣಲಕ್ಷಣ ಪತ್ತೆಯಾಗಿದೆ. ಕೂಡಲೇ ಆತನನ್ನ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಿ ಸೋಂಕಿತ ವ್ಯಕ್ತಿಯ ಸ್ಯಾಂಪಲ್ಸ್ ಕೂಡ ಜಿನೋಮಿಕ್ ಸೀಕ್ವೆನ್ಸಿಂಗ್ಗೆ ರವಾನೆಯಾಗಿದೆ.
ಕಳೆದ ಮೂರು ದಿನಗಳಲ್ಲಿ ವಿದೇಶದಿಂದ 9 ಮಂದಿ ಬಂದಿದ್ದು ಈ ಪೈಕಿ ಐವರನ್ನ ಹೋಮ್ ಕ್ವಾರಂಟೀನ್ ಮಾಡಲಾಗಿದೆ. ಉಳಿದಂತೆ 4 ಮಂದಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಚೀನಾದಿಂದ ಬಂದ ಪ್ರಯಾಣಿಕನ ಮೇಲೆ ನಿಗಾ ಇಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್, ಬೆಂಗಳೂರಿನಲ್ಲಿ ಒಂದು BF.7 ಕೇಸ್ ಕೂಡ ಅಧಿಕೃತವಾಗಿಲ್ಲ. ಚೀನಾದಿಂದ ಬಂದ ವ್ಯಕ್ತಿಯನ್ನ ಟೆಸ್ಟ್ಗೆ ಒಳಪಡಿಸಲಾಗಿದೆ ಅಂತ ಹೇಳಿದ್ದಾರೆ.
24 ದಿನಗಳಲ್ಲಿ ವಿದೇಶದಿಂದ ಬೆಂಗಳೂರಿಗೆ 2,867 ಜನರ ಆಗಮನ
ಇನ್ನು ಕಳೆದ 24 ದಿನಗಳಲ್ಲಿ ವಿದೇಶದಿಂದ ಬೆಂಗಳೂರಿಗೆ 2,867 ಜನರು ಆಗಮಿಸಿದ್ದು ಹೀಗೆ ಬಂದವರ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಇವರ ಪೈಕಿ 12 ಜನ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು 12 ಸೋಂಕಿತರ ಸ್ಯಾಂಪಲ್ನ್ನ ಜಿನೋಮಿಕ್ ಸೀಕ್ವೆನ್ಸ್ಗೆ ರವಾನಿಸಲಾಗಿದೆ. ಹೀಗಾಗಿ ಏರ್ಪೋರ್ಟ್ನಲ್ಲಿ ಎಲ್ಲರ ತಪಾಸಣೆ ಮಾಡಲಾಗ್ತಿದೆ. ಒಟ್ಟಾರೆ ರಾಜ್ಯದಲ್ಲಿ ಕೊರೊನಾ ಹೆಚ್ಚಾಗ್ತಿದ್ದಂತೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಅದರಲ್ಲೂ ಬೆಂಗಳೂರಿಗೆ ವಿದೇಶದಿಂದ ಅತೀ ಹೆಚ್ಚಿನ ಜನರು ಆಗಮಿಸುವುದರಿಂದ ಬೆಂಗಳೂರಿನ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post