ಬಿಗ್ ಬಾಸ್ ಮನೆಯ ಆಟ ಕೊನೆಯ ಹಂತದಲ್ಲಿದೆ. ಫಿನಾಲೆಗೆ ಕ್ಷಣಗಣನೆ ಬಾಕಿ ಇದೆ . ಇದೀಗ ಬಿಗ್ಬಾಸ್ ಮನೆಯಲ್ಲಿ 6 ಜನ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಕಳೆದ ವಾರ ಡಬಲ್ ಎಲಿಮಿನೇಷನ್ ಆಗಿತ್ತು. ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರ ಬಂದಿದ್ದರು.
ಸಾಂಡಲ್ವುಡ್ನಲ್ಲಿ ಸಾಕಷ್ಟು ಪಾತ್ರಗಳ ಮೂಲಕ ಬೆಳ್ಳಿ ಪರದೆಯಲ್ಲಿ ರಂಜಿಸಿದ್ದ ಅರುಣ್ ಸಾಗರ್, ಬಿಗ್ ಬಾಸ್ ಸೀಸನ್ 1ರ ರನ್ನರ್ ಅಪ್ ಆಗಿದ್ದರು. ಬಳಿಕ ಸೀಸನ್ 9ರಲ್ಲೂ ವಿಕ್ಷಕರನ್ನು ರಂಜಿಸಿ ಸೈ ಎನಿಸಿಕೊಂಡಿದ್ದರು. ಟಾಸ್ಕ್, ಮನರಂಜನೆ, ಮಾತುಕತೆ ಎಲ್ಲದರಲ್ಲೂ ಮುಂದೆ ಇದ್ದರು. ಆದರೆ 14 ವಾರಕ್ಕೆ ಅರುಣ್ ಸಾಗರ್ ಆಟ ಅಂತ್ಯವಾಗಿದೆ. ಅಮೂಲ್ಯ ಜೊತೆ ಎರಡನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದರು. ಜೊತೆಗೆ ಎರಡೆರಡು ಬಾರಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಇನ್ನು, ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಅರುಣ್ ಸಾಗರ್ ನ್ಯೂಸ್ ಫಸ್ಟ್ನೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಬಂದು ಒಳ್ಳೆಯ ಅನುಭವ. ನಾನು ಬಿಗ್ಬಾಸ್ ನೀಡುವ 50 ಲಕ್ಷ ಹಣವನ್ನ ಹೊರಗೆ ಬೇಕಾದ್ರೆ ದುಡೀತಿನಿ. ಆದರೆ ಆ ಮನೆಯಲ್ಲಿ ನಾನು ಗೆದ್ದಿದ್ದೇನೆ. ಅದು ಹೇಗೆ ಎಂದರೆ ನನ್ನದೇ ಪರಿಧಿಯಲ್ಲಿ ಗೆದ್ದಿದ್ದೇನೆ. ನನ್ನದೇ ಆದಂತಹ ವಿಕ್ನೇಸ್ನಿಂದ ಗೆದ್ದಿದ್ದೇನೆ. ಪ್ರಯತ್ನಗಳನ್ನು ಮಾಡಿದ್ದೇನೆ. ಸಾಧ್ಯಗಳನ್ನು ಹುಡುಕಿದ್ದೇನೆ. ಪ್ರಯೋಗಗಳನ್ನು ಮಾಡಿದ್ದೇನೆ. ಇದೇ ನಮ್ಮ ಗೆಲುವಾಗಬೇಕು. 50 ಲಕ್ಷ ಬೇಕೇ ಬೇಕು. ಆದರೆ ಅದರ ಜೊತೆಗೆ ಈ ರೀತಿಯ ಗೆಲವು ಆಗದಿದ್ದರೆ, ಅದು ಗೆಲುವೆ ಅಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post