ದೇಶದಲ್ಲಿ ಬಿಎಫ್7 ನಾಲ್ಕಕ್ಕೆ ಏರಿಕೆಯಾಗಿ ಆತಂಕ ಮೂಡಿಸಿದ್ದ ಮಹಾಮಾರಿ, ಮತ್ತಿಬ್ಬರ ದೇಹಹೊಕ್ಕು ತನ್ನ ಸಂಖ್ಯಾಬಲವನ್ನ 6ಕ್ಕೆ ಹೆಚ್ಚಿಸಿಕೊಂಡಿದೆ. ಅತ್ತ ಚೀನಾದಲ್ಲಿ ಸೋಂಕಿಗೆ ಬಲಿಯಾದವರ ಅಂತ್ಯ ಸಂಸ್ಕಾರ ನಡೆಸಲು ಜಾಗವಿಲ್ಲದಂತಾಗಿದೆ.
ನೆರೆಯ ಚೀನಾದಲ್ಲಿ ಸಾವಿನ ಬಿರುಗಾಳಿಯನ್ನೇ ಎಬ್ಬಿಸಿರೋ ಮಹಾಮಾರಿ, ದೇಶದಲ್ಲೂ ಸದ್ದಿಲ್ಲದೇ ಸುಳಿ ಗಾಳಿಯನ್ನ ಹಬ್ಬಿಸಿದೆ. ಮೊನ್ನೆ ಆಗ್ರಾದ ವ್ಯಕ್ತಿಯ ದೇಹಹೊಕ್ಕು ತನ್ನ ಪ್ರಾಬಲ್ಯವನ್ನ ನಾಲ್ಕಕ್ಕೆ ಏರಿಸಿಕೊಂಡಿದ್ದ ಕ್ರೂರಿ, ನಿನ್ನೆ ಮತ್ತಿಬ್ಬರನ್ನ ಆವರಿಸಿಕೊಂಡಿದೆ. ಅಬ್ರಾಡ್ನಿಂದ ಪಶ್ಚಿಮ ಬಂಗಾಳದ ಕೊಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಮಿಕ್ರಾನ್ ಬಿಎಫ್.7 ವೈರಸ್ ಪತ್ತೆಯಾಗಿದೆ. ಸೋಂಕಿತರನ್ನ ಬೆಲಿಯಘಟ ಐಡಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ದೇಶದ ನಾಲ್ಕು ರಾಜ್ಯಗಳಿಗೆ ಮಹಾಮಾರಿ ಎಂಟ್ರಿ
ವಿಶ್ವಕ್ಕೆ ಡ್ರ್ಯಾಗನ್ ರಾಷ್ಟ್ರದಿಂದ ಬಳುವಳಿಯಾಗಿ ಸಿಕ್ಕಿರುವ ಕ್ರೂರಿ ಕೊರೊನಾ, ಸದ್ಯ 10 ರಾಷ್ಟ್ರಗಳಲ್ಲಿ ಬಿಎಫ್.7 ರೂಪವನ್ನ ತಾಳಿ ಮತ್ತೆ ಆರ್ಭಟಿಸುತ್ತಿದೆ. 10 ರಾಷ್ಟ್ರಗಳ ಪೈಕಿ ಭಾರತದ ಮೇಲೂ ಕೊರೊನಾ ಕರಿನೆರಳು ಬಿದ್ದಿದ್ದು ಈಗಾಗಲೇ ಭಾರತದ ನಾಲ್ಕು ರಾಜ್ಯಗಳಲ್ಲಿ ಮಹಾಮಾರಿ ಪತ್ತೆಯಾಗಿದೆ. ಕಳೆದ 5 ದಿನಗಳ ಹಿಂದೆ ಗುಜರಾತ್‌ನಲ್ಲಿ ಇಬ್ಬರು ಹಾಗೂ ಒಡಿಶಾದ ಓರ್ವರಲ್ಲಿ ಬಿಎಫ್.7 ವೈರಸ್ ಪತ್ತೆಯಾಗಿತ್ತು. ಮೊನ್ನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಚೀನಾದಿಂದ ಬಂದ ವ್ಯಕ್ತಿಗೆ ವೈರಸ್ ತಗುಲಿತ್ತು. ನಿನ್ನೆ ಪಶ್ಚಿಮ ಬಂಗಾಳದ ಕೊಲ್ಕಾತ್ತಾದಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ದೇಶದ 4 ರಾಜ್ಯಗಳಲ್ಲಿ ಮಹಾಮಾರಿ ಅದಾಗಲೇ ತನ್ನ ಪ್ರಾಬಲ್ಯವನ್ನ ಮೆರೆಯಲು ಮುಂದಾಗಿದೆ.
ಡ್ರ್ಯಾಗನ್ ರಾಷ್ಟ್ರದಲ್ಲಿ ಲಕ್ಷ ಲಕ್ಷ ಸೋಂಕಿತರು ಪತ್ತೆ
ನೆರೆಯ ರಾಷ್ಟ್ರದಲ್ಲಿ ಸಾವಿನ ಬಿರುಗಾಳಿ ಎಬ್ಬಿರಿಸಿರೋ ಮಹಾಮಾರಿ, ಬಿಎಫ್.7 ರೂಪಾಂತರಿ ಹೆಸರಿನಲ್ಲಿ ಜನರ ಜೀವ ಹಿಂಡಿ ಹಿಪ್ಪೆ ಮಾಡ್ತಿದೆ. ಚೀನಾದದಲ್ಲಿ ಪ್ರತೀ ದಿನ ಸೋಂಕಿಗೆ ತುತ್ತಾಗಿ 66,000 ಜನರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ದೇಶದ ಪ್ರಮುಖ ಕೈಗಾರಿಕಾ ನಗರವಾದ ಜೆಜಿಯಾಂಗ್ನಲ್ಲಿ ಪ್ರತಿನಿತ್ಯ 10 ಲಕ್ಷ ಜನರಲ್ಲಿ ವೈರಸ್ ಪತ್ತೆಯಾಗ್ತಿದೆ. ಅಲ್ಲದೆ ಡಾಂಗುವಾನ್ ನಗರದಲ್ಲಿ ಮೂರು ಲಕ್ಷ, ಕ್ವಿನ್ಡ್ಗೋ ನಗರದಲ್ಲಿ 5 ಲಕ್ಷ ಸೋಂಕಿತರು ಪ್ರತಿನಿತ್ಯ ಪತ್ತೆಯಾಗ್ತಿದ್ದಾರೆ. ಡ್ರ್ಯಾಗನ್ ರಾಷ್ಟ್ರದಲ್ಲಿ ಅಬ್ಬರಿಸಿ ಬೊಬ್ಬಿರಿತ್ತಿರೋ ಕ್ರೂರಿ ಜನರನ್ನ ಸಾವಿನ ದವಡೆಗೆ ನೂಕುತ್ತಿದೆ.
ಚೀನಾದಲ್ಲಿ ಐಸಿಯುಗಳು ಫುಲ್, ಹಾದಿ-ಬೀದಿಯಲ್ಲೂ ಶವಗಳು
ಇದೊಂದು ದೃಶ್ಯ ಚೀನಾ ಜನರ ಪರಿಸ್ಥಿಯನ್ನ ಸಾರಿ ಸಾರಿ ಹೇಳ್ತಿದೆ. ಪ್ರತಿನಿತ್ಯ ಸಹಸ್ರಾರು ಜನರನ್ನ ಸಾವಿನ ಮನೆ ಸೇರಿಸುತ್ತಿರೋ ಬಿಎಫ್.7 ವೈರಸ್, ಜನರನ್ನ ಹಾದಿ-ಬೀದಿಯ ಹೆಣವಾಗುವಂತೆ ಮಾಡ್ತಿದೆ. ಸೋಂಕಿಗೆ ತುತ್ತಾಗಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಜಾಗವಿಲ್ಲದಂತಾಗಿದೆ. ಶವಾಗಾರದ ಮುಂದೆ ಮೃತದೇಹಗಳನ್ನ ರಸ್ತೆಯ ಮೇಲೆ ಇಟ್ಟುಕೊಂಡು ರಾತ್ರಿ ಹಗಲು ಕಾಯುವಂತಹ ಪರಿಸ್ಥಿತಿ ಚೀನಿಯರಿಗೆ ಬಂದೊದಗಿದೆ. ಇದು ಶವಾಗಾರದ ಕತೆಯಾದ್ರೆ ಸೋಂಕಿಗೆ ತುತ್ತಾಗಿ ವಿಲವಿಲ ಅಂತ ಒದ್ದಾಡ್ತಿರುವವರನ್ನ ರಕ್ಷಿಸಲು ಆರೋಗ್ಯ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳ ಐಸಿಯೂಗಳು ಫುಲ್ ಆಗಿದ್ದು ಸೋಂಕಿತರಿಗೆ ಆಸ್ಪತ್ರೆಯ ಟೆರಸ್, ಕಾರಿಡರ್ನಲ್ಲಿ ಚಿಕಿತ್ಸೆ ನೀಡುವಂತಾಗಿದೆ.
ಇದನ್ನು ಓದಿ: ಲಂಕಾ ಸೀರೀಸ್ಗೆ ಮುನ್ನವೇ ಟೀಂ ಇಂಡಿಯಾಗೆ ಡಬಲ್ ಶಾಕ್..!
ಕೋವಿಡ್ ಕುರಿತು ಮೊದಲ ಬಾರಿಗೆ ಮೌನ ಮುರಿದ ಜಿನ್‌ಪಿಂಗ್
ಚೀನಾದಲ್ಲಿ ಕೋವಿಡ್ ಆರ್ಭಟ ನಡುವೆ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಕೊರೊನಾ ರೂಪಾಂತರಿ ಚೀನಾಗೆ ಹೊಸ ಸವಾಲನ್ನ ತಂದೊಡ್ಡಿದೆ. ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಕೋವಿಡ್ ನಿಯಂತ್ರಣಕ್ಕಾಗಿ ದೇಶೀಯವಾಗಿ ಆರೋಗ್ಯ ಅಭಿಯಾನ ಆರಂಭಿಸಬೇಕು. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು. ಜೀವವನ್ನು ಉಳಿಸಲು ಬೇಕಾದ ಅಗತ್ಯ ಕ್ರಮ ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಿ ಎಂದು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ಜನಕ ಚೀನಾ ಪಾಲಿಗೆ ಮಾರಣಾಂತಿಕ ವೈರಸ್ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತಾಗಿದೆ. ಇಡೀ ಜಗತ್ತಿಗೇ ವೈರಸ್ ಹಬ್ಬಿಸಿ ವಿಕೃತಿ ಮೆರೆದಿದ್ದ ಡ್ರ್ಯಾಗನ್ ರಾಷ್ಟ್ರ, ಇದೀಗ ಕರ್ಮ ಉಣ್ಣುತ್ತಿದೆ. ಅತಿವೇಗವಾಗಿ ಹರಡುವ ಬಿಎಫ್.7 ರೂಪಾಂತರಿ ಈಗಾಗಲೇ ಚೀನಾ ಗಡಿ ದಾಟಿ ಜಗತ್ತಿನ ರಾಷ್ಟ್ರಗಳಲ್ಲಿ ಸೋಂಕಿನ ಆಟ ಶುರು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post