ಬಿಗ್ಬಾಸ್ ಸೀಸನ್ 9 ಫಿನಾಲೆ ಇಂದು ಸಂಜೆಯಿಂದ ಶುರುವಾಗಲಿದೆ. ಈ ಸೀಸನ್ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲವು ಜೋರಾಗ್ತಿದೆ.. ವೀಕ್ಷಕರರು ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸಿ.. ಇವ್ರು ಅವ್ರು ವಿನ್ನರ್ ಆಗ್ಬೋದು ಅಂತೀದ್ದಾರೆ.. ಆದ್ರೆ ಪಕ್ಕಾ ವಿನ್ನರ್ ಯಾರಂತಾ ನಮ್ಗೆ ಫಿನಾಲೆಯಲ್ಲೇ ಗೊತ್ತಾಗೋದು!
ವೀಕ್ಷಕರು ಅಂದುಕೊಳ್ತಿರೋದು ಏನಂದ್ರೆ, ಈ ಬಾರಿಯ ಸೀಸನ್ನಲ್ಲಿ ಫೀಮೇಲ್ ವಿನ್ನರ್ ಆಗ್ಬೋದು ಅಂತಾ.. ಅವ್ರು ಅಂದುಕೊಳ್ತಿರೋದ್ರಲ್ಲಿ ಖಡಾ ಖಂಡಿತವಾಗಿ ತಪ್ಪಿಲ್ಲ.. ಯಾಕಂದ್ರೆ ಗ್ರ್ಯಾಂಡ್ ಫಿನಾಲೆ ತಲುಪಿರೋ ಇಬ್ಬರು ಹುಡಿಗಿಯರಲ್ಲೂ ಗೆಲ್ಲೋ ಎಲ್ಲಾ ಸಾಮರ್ಥ್ಯ ಇದೆ..
ದೀಪಿಕಾ ದಾಸ್.. ಬಾಸ್ ಲೇಡಿ ಅಂತಾ ಆಚೆ ಫೇಮಸ್.. ಟಾಸ್ಕಲ್ಲಿ ಫೈಯರ್ ಎಂಟರ್ಟೈನ್ಮೆಂಟಲ್ಲೂ ಫುಲ್ ಹವಾ!… ತನ್ನ ಒಂಟಿ ಆಟ ಆಡುವ ಮೂಲಕ.. ಅವರದ್ದೆ ಆದ ವ್ಯಕ್ತಿತ್ವದ ಕುರುಹನ್ನ ಬಿಟ್ಟಿದ್ದಾರೆ. ಜೊತೆಗೆ ಒಂದಷ್ಟು ಅಭಿಮಾನಿಗಳ ಪ್ರೀತಿ.. ಇಷ್ಟೆ ಅಲ್ವಾ ಬೇಕಿರೋದು ವಿನ್ನರ್ ಆಗೋಕೆ. ಇದೆಲ್ಲವೂ ದೀಪಿಕಾ ದಾಸ್ ಅವ್ರ ವಿಚಾರದಲ್ಲಿ ಸತ್ಯ.. ದೀಪಿಕಾ ಅವ್ರು ಆಟದಲ್ಲಿ ಬದಲಾವಣೆ ಮಾಡಿಕೊಳ್ತಾ, ತಮ್ಮನ್ನ ತಾವು ಬೆಟರ್ ಮಾಡಿಕೊಳ್ತಾ ಈ ಹಂತದವರೆಗೂ ಬಂದಿದ್ದಾರೆ.. ಆಚೆ ವೀಕ್ಷಕರು ಕೂಡ ಫೀಮೇಲ್ ವಿನ್ನರ್ ಯಾರಾದ್ರು ಬಂದ್ರೆ. ಅದು ದೀಪಿಕಾ ಅವ್ರೇ ಆಗಿರಬೇಕು ಅಂತಿದ್ದಾರೆ.. ಅಷ್ಟರಮಟ್ಟಕ್ಕೆ ಗಮನ ಸೆಳೆದಿದ್ದಾರೆ ದೀಪಿಕಾ ದಾಸ್. ಸೋ ಈ ಸೀಸನ್ ವಿನ್ನರ್ ಆಗುವ ಎಲ್ಲಾ ರೀತಿಯ ಅರ್ಹತೆಗಳ ದೀಪಿಕಾಗೆ ಇದೆ..
ದಿವ್ಯಾ ಉರುಡುಗ.. ಸೀಸನ್ 9ರಲ್ಲಿ ಇವರ ನಗುನೇ ಇವರಿಗೆ ಆಸ್ತಿಯಾಯ್ತು.. ಇವರ ನಗುವೇ.. ಇಡೀ ಮನೆಯನ್ನ ಲವಲವಿಕೆಯಿಂದ ಇಡುತ್ತಿತ್ತು ಅಂದರೆ ಸುಳ್ಳಾಗಲ್ಲ.. ಟಾಸ್ಕ್ನ ವಿಚಾರವಾಗಿ ಅಷ್ಟು ಗಮನ ಸೆಳೆದಿಲ್ಲ ಅಂದ್ರು ವ್ಯಕ್ತಿತ್ವದಲ್ಲಿ.. ಒಂದು ಕೈಮೇಲೆ ಇದ್ದರೂ ಎಲ್ಲೆಲ್ಲಿ ಸ್ಟ್ಯಾಂಡ್ ತಗೋಬೇಕು ಅಂದ್ರು ಅಲ್ಲೆಲ್ಲಾ ಸ್ಟ್ಯಾಂಡ್ ತಗೊಂಡ್ರು ದಿವ್ಯಾ ಅವ್ರು.. ಇನ್ನು ಗೆಳತನ, ರಿಲೇಶನ್ಶಿಪ್ಗೆ ತುಂಬಾ ವ್ಯಾಲ್ಯೂ ಕೊಡೋದು ವೀಕ್ಷಕರಿಗೆ ನೆಚ್ಚಿನ ಪಾಯಿಂಟ್.. ಫ್ಯಾನ್ಡಂ ಇಷ್ಟು ವೀಕ್ಷಕರನ್ನ ಸೆಳೆದುಕೊಳ್ಳೋದು ಅಷ್ಟು ಸುಲಭದ ಮಾತೇ ಅಲ್ಲ.. ಆದ್ರೆ ದಿವ್ಯಾ.. ಇದನ್ನ ಸಾಧ್ಯವಾಗಿಸಿದ್ದಾರೆ.. ದಿವ್ಯಾ ಅವ್ರ ಫ್ಯಾನ್ಡಂಗೆ ಒಂದು ಗ್ರೇಟ್ ಸೆಲ್ಯೂಟ್.. ಈ ಎಲ್ಲಾ ಅಂಶಗಳಿಂದ ದಿವ್ಯಾ ಉರುಡುಗ ಅವ್ರು ಕೂಡ ವಿನ್ನರ್ ಆಗ್ಬೋದು ಅಂತಿವೆ ಮೂಲಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post