ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 1ರಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಆರ್ಯವರ್ಧನ್ ಗೂರುಜಿ ಕೊನೆಯ ವಾರ ಮಿಡ್ ವೀಕ್ ಎಲಿಮಿನೇಷನ್ನಿಂದ ಹೊರ ಬಂದಿದ್ದರು. ನಂಗೆ ಚಂದ್ರ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಅವನೇ ನನಗೆ ದಾರಿ ಅಂತಾ ಹೇಳುತ್ತಿದ್ದ ಆರ್ಯವರ್ಧನ್ ಗೂರೂಜಿ ಅದೇ ಚಂದ್ರನ ಬೆಳಕಿನಲ್ಲಿ ಬಿಗ್ಬಾಸ್ ಮನೆಯಿಂದ ಕಾಣದಂತೆ ಮಾಯವಾದರು. ಇದು ಅವರ ಕೆಟ್ಟಗಳಿಗೆ ನೋ ಅಥವಾ ಅಮವಾಸ್ಯೆಯ ಎಫೆಕ್ಟ್ ಗೊತ್ತಿಲ್ಲ. ಆರ್ಯವರ್ಧನ್ ಗುರೂಜಿ ಅವರ ಲೆಕ್ಕದಲ್ಲಿ ಇದು ಪಕ್ಕಾ ಗ್ರಹಗತಿಗಳ ಗ್ರಹಚಾರ.
ಟಾಪ್ ಫೈನಲ್ಲಿ ನಾನು ಇದ್ದೇ ಇರ್ತಿನಿ ಅಂತಾ ಹೇಳಿದ್ರು ಆ ಕನಸು ನನಸು ಕೂಡ ಆಯ್ತು. ನಂಬರ್ ಒನ್ ಮಾತು. ಮಾತು ಮಾತಲ್ಲೇ ಇರಬೇಕು ಅನ್ನೋದು ಆರ್ಯವರ್ಧನ್ ಅವರ ಕೈ ಕೊಟ್ಟಿರಬಹುದು. ಅವರು ಆಡೋ ಮಾತುಗಳು ನಡೆದುಕೊಳ್ಳುವ ರೀತಿ ಒಂದಕ್ಕೊಂದು ಸಂಬಂಧ ಇಲ್ಲ ಆನ್ನೋ ಆರೋಪ ಕೇಳಿ ಬಂದಿತ್ತು. ಬಿಗ್ಬಾಸ್ ನೀಡಿದ್ದ ಟಾಸ್ಕ್ನಲ್ಲಿ ಎಫರ್ಟ್ ಹಾಕುತ್ತಿದ್ದರು. ತುಂಬಾ ಚನ್ನಾಗಿ ಆಟ ಕೂಡ ಆಡುತ್ತಿದ್ದರು. ಆದರೆ ಕ್ಲಾರಿಟಿ ಇರುತ್ತಿರಲಿಲ್ಲ. ನಾನ್ ಏನೇ ಮಾಡಿದ್ರು ಜನ ಸ್ವೀಕರಿಸುತ್ತಾರೆ ಅನ್ನೋ ಮನೋಭಾವನೆ ಮೈನಸ್ ಆಗಿರಬಹುದು.
ವಾರದ ಪಂಚಾಯ್ತಿಯಲ್ಲಿ ಕಿಚ್ಚನ ಜೊತೆ ನಡಿತಾಯಿದ್ದ ಮಾತುಕತೆ. ಅವರ ರಿಯಾಕ್ಷನ್ಗಳು ತಪ್ಪು ಕಲ್ಪನೆಗೆ ಎಡೆ ಮಾಡಿ ಕೊಟ್ಟಿದೆ. ಸ್ಪಷ್ಟನೆ ಇಲ್ಲದ ಸ್ಟೆಟ್ಮೆಂಟ್ಗಳು. ಗ್ರೂಪ್ ವಿಚಾರ ಮಾತನಾಡುತ್ತಾ ತಾವೇ ಒಂದು ಗ್ರೂಪ್ನಲ್ಲಿ ಕಳೆದು ಹೋಗಿದ್ದು. ಒಟಿಟಿಗೆ ಸೀಸನ್ಗೆ ಹೋಲಿಸಿದರೆ ಹೆಚ್ಚು ಸ್ಪರ್ಧಿಗಳ ಜೊತೆ ಬೇರಿಯದೆ ಇರೋದು. ಆ ಬಾಂಡಿಂಗ್ ಇಲ್ಲಿ ಕಾಣಿಸಲಿಲ್ಲ. ಜೊತೆಗೆ ಕುಚುಕು ಕುಚುಕು ಅಂತಾ ಇದ್ದ ರೂಪೇಶ್ ರಾಜಣ್ಣ ಅವರೊಂದಿಗಿನ ವೈಮನಸ್ಸು ಕಾರಣವಾಗಿರಬಹುದು.
ಇಷ್ಟು ದಿನಗಳ ಒಂದೇ ರೀತಿಯ ಆರ್ಯವರ್ಧನ್ ಕಾಣಿಸಿದ್ದು. ಇನ್ನಷ್ಟು ವಿಭಿನ್ನವಾಗಿ ಇರಬಹುದಿತ್ತು. ಕ್ಯಾಮರಾಗೆ ಫೋಕಸ್ ಮಾಡುತ್ತಾ ಉಳಿದ ಸ್ಪರ್ಧಿಗಳನ್ನ ಮರೆತಿದ್ದು. ಮೈನಸ್ ಆಗಿರಬಹುದು. ಆರ್ಯವರ್ಧನ್ ಅವರ ಆಟ ಗೊತ್ತೋ ಗೊತ್ತಿಲ್ಲದೇನೋ ವೀಕ್ಷಕರಿಗೆ ಮನರಂಜನೆ ನೀಡಿದ್ದು ಅಂತೂ ಸುಳ್ಳಲ್ಲ. ಅವರ ಎಫರ್ಟ್ ಅವರನ್ನ ಇಷ್ಟು ದಿನಗಳ ಕಾಲ ಉಳಿಸಿದೆ. ಟಾಪ್ ಫೈವರೆಗೂ ಬಂದಿದ್ದು ದೊಡ್ಡ ಸಾಧನೆಯೇ ಸರಿ. ಕೊನೆಗೂ ಕಿಚ್ಚನ ಚಪ್ಪಾಳೆ ಕೂಡ ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post