ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್9 ಗೆದ್ದ ಸ್ಪರ್ಧಿಗೆ ಭಾರೀ ಪ್ರಮಾಣದ ಮೊತ್ತದ ಹಣವನ್ನೇ ನೀಡಲಾಗುತ್ತಿದೆ. ಕರುರಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ವೇದಿಕೆಯ ಮೇಲೆ ಹೇಳಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲೇ ಬಿಗ್ಬಾಸ್ ಸೀಸನ್ 9ವಿನ್ನರ್ ಯಾರು ಆಗುತ್ತಾರೆ ಎಂಬುವುದಕ್ಕೆ ತೆರೆ ಬಿಳಲಿದೆ. ವಿನ್ನರ್ ಪಟ್ಟವನ್ನು ಯಾರು ಗೆಲ್ಲುತ್ತಾರೆ ಎಂದು ಬಿಗ್ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಇದೀಗ ಬಿಗ್ಬಾಸ್ ಸೀಸನ್ 9ರಲ್ಲಿ ನಾಲ್ಕು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ. ಈ ನಾಲ್ವರಲ್ಲಿ ಯಾರಿಗೆ ‘ಬಿಗ್ ಬಾಸ್’ ಪಟ್ಟ ಯಾರಿಗೆ ಅನ್ನೋದು ತಿಳಿಯಲಿದೆ. ಜೊತೆಗೆ ಬಿಗ್ಬಾಸ್ ಗೆದ್ದವರಿಗೆ 60 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಜೊತೆಗೆ ಕೆಲ ಆಕರ್ಷಕ ಉಡುಗೊರೆಯನ್ನೂ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post