ಬಿಗ್ ಬಾಸ್ ಸೀಸನ್ 09ರ ಗ್ರ್ಯಾಂಡ್ ಫಿನಾಲೆಯಿಂದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಔಟ್ ಆಗಿದ್ದಾರೆ. ಬಿಗ್ ಬಾಸ್ಗೆ ನವೀನರಾಗಿ ಎಂಟ್ರಿ ಕೊಟ್ಟಿದ್ದ ರೂಪೇಶ್ ರಾಜಣ್ಣ ಇದೀಗ ಬಿಗ್ ಮನೆಯಿಂದ ಔಟ್ ಆಗಿದ್ದಾರೆ. ರೂಪೇಶ್ ರಾಜಣ್ಣ ಆಗಾಗ ಬಿಗ್ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳ ಜೊತೆ ಜಗಳ ಮಾಡುತ್ತಾ ಇದ್ದರು.
ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ಹಾಗೂ ಉಳಿದ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದರು. ಇನ್ನು ಬಿಗ್ಬಾಸ್ ಎರಡನೇ ವಾರಕ್ಕೆ ಮನೆಯಿಂದ ಹೊರ ಬರುತ್ತೇನೆ ಅಂದುಕೊಂಡಿದ್ದ ರೂಪೇಶ್ ರಾಜಣ್ಣ ಟಾಪ್ 5ನೇ ಸ್ಥಾನದಲ್ಲಿ ಇದ್ದರು.
ಈ ಬಾರಿ ರೂಪೇಶ್ ರಾಜಣ್ಣ ಅವರೇ ಗೆಲ್ಲುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ರೂಪೇಶ್ ರಾಜಣ್ಣ ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಕಳೆದ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಔಟ್ ಆಗಿದ್ದರು. ಈಗ ಬಿಗ್ ಮನೆಯಿಂದ ರೂಪೇಶ್ ರಾಜಣ್ಣ ಔಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post