newsfirstkannada.com

ಹೇಗಿತ್ತು 2 ದಿನಗಳ ಜಿ20 ಶೃಂಗಸಭೆ..? ಯಾವ್ಯಾವ ನಿರ್ಧಾರಗಳನ್ನು ಕೈಗೊಂಡ್ರು ಗೊತ್ತಾ..?

Share :

10-09-2023

  ರಾಜ್​ಘಾಟ್​ಗೆ ಭೇಟಿ ನೀಡಿದ ವಿದೇಶಿ ನಾಯಕರು

  ‘ಒಂದು ಭವಿಷ್ಯ’ ಬಗ್ಗೆ ಶೃಂಗದಲ್ಲಿ ಸುದೀರ್ಘ ಚರ್ಚೆ!

  2024 ಶೃಂಗಸಭೆಯ ಜವಾಬ್ದಾರಿ ಬ್ರೆಜಿಲ್ ಹೆಗಲಿಗೆ

100ನೇ ಜಿ20 ಶೃಂಗಸಭೆಯ ಮುಖ್ಯಸ್ಥಿಕೆ ಹೊತ್ತು ವಿಶ್ವ ನಾಯಕರನ್ನ ದೆಹಲಿಗೆ ಕರೆತಂದಿದ್ದ ಮೋದಿ, ದೇಶದಲ್ಲಿ ಮತ್ತೊಂದು ಮೈಲಿಗಲ್ಲನ್ನ ನಿರ್ಮಿಸಿದ್ದಾರೆ. ದೇಶದ ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನ ವಿದೇಶಿ ನಾಯಕರ ಮುಂದೆ ಬಿಚ್ಚಿಟ್ಟ ಭಾರತಕ್ಕೆ ಮೆಚ್ಚುಗೆಯ ಮಹಾಪೂರವೇ ಎರಡು ದಿನಗಳ ಸಂಭ್ರಮ. ಅತಿರಥರ-ಮಹಾರಥರ ಸಮಾಗಮಕ್ಕೆ ಸಾಕ್ಷಿಯಾಗಿದ್ದ ರಾಷ್ಟ್ರ ರಾಜಧಾನಿ ವಿದೇಶಿ ನಾಯಕರ ಹೆಜ್ಜೆ ಸಪ್ಪಳ್ಳದಿಂದ ಮತ್ತಷ್ಟು ಮೆರಗು ಪಡೆದಿತ್ತು. ನಿನ್ನೆ ಭಾರತ ಮಂಟಪಕ್ಕೆ ಸೀಮಿತವಾಗಿದ್ದ ಜಿ20 ನಾಯಕರ ಕಲರವ ಬೇರೆಡೆ ಕಳೆಗಟ್ಟಿತ್ತು. ದೆಹಲಿಯ ಪ್ರಮುಖ ಪ್ರದೇಶಕ್ಕೆ ಭೇಟಿ ನೀಡಿದ ನಾಯಕರು ಭಾರತದ ಇತಿಹಾಸದ ಪ್ರಮುಖ ಪುಟಗಳ ನೆನಪನ್ನ ತಿರುವಿ ಹಾಕಿದ್ರು.

ರಾಜ್​ಘಾಟ್​ಗೆ ನಾಯಕರ ಭೇಟಿ.. ಮಹಾತ್ಮನಿಗೆ ಪುಷ್ಪ ನಮನ!

ಜಿ20 ಶೃಂಗಸಭೆಯ 2ನೇ ದಿನವಾದ ಇಂದು ರಾಷ್ಟ್ರ ರಾಜಧಾನಿ ದೆಹಲಿ ಹಲವು ಅಚ್ಚರಿಗಳಿಗೆ ಸಾಕ್ಷಿಯಾಯ್ತು. ಮುಂಜಾನೆಯೇ ದೆಹಲಿಯ ರಾಜ್​ಘಾಟ್​ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿ ನೀಡಿದ ವಿದೇಶಿ ನಾಯಕರು ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ್ರು. ಈ ವೇಳೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಮಹತ್ಮಾ ಗಾಂಧೀಜಿ ಅವರ ವಿಚಾರ ಧಾರೆಗಳನ್ನ ಮೋದಿ ವಿದೇಶಿ ನಾಯಕರಿಗೆ ವಿವರಿಸಿದ್ರು. ಬಳಿಕ ರಾಜ್‌ಘಾಟ್‌ನಲ್ಲಿರುವ ನಾಯಕರ ಲಾಂಜ್‌ನಲ್ಲಿ ಶಾಂತಿ ಗೋಡೆ ಮೇಲೆ ವಿದೇಶಿ ನಾಯಕರು ತಮ್ಮ ಸಹಿ ಹಾಕಿದ್ರು.

ಶೃಂಗಸಭೆಗೆ ‘ಸವಿ ನೆನಪಿನ’ ಸಸಿ ನೆಟ್ಟ ನಾಯಕರು!

ರಾಜ್​ಘಾಟ್​ ಭೇಟಿ ಬಳಿಕ ಭಾರತ ಮಂಟಪಕ್ಕೆ ವಾಪಸ್ಸಾದ ನಾಯಕರು ಮಂಟಪದ ಮುಂಭಾಗ ಜಿ20 ಶೃಂಗಸಭೆಯ ನೆನಪಿಗಾಗಿ ಸಸಿಗಳನ್ನ ನೆಟ್ಟರು. ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಸಿಗಳನ್ನ ನೆಟ್ಟ ನಾಯಕರು ನೀರೆರೆದು ಸಂತಸಪಟ್ಟರು.

‘ಒಂದು ಭವಿಷ್ಯದ’ ಬಗ್ಗೆ ಶೃಂಗದಲ್ಲಿ ಸುದೀರ್ಘ ಚರ್ಚೆ!

ಜಿ20 ಶೃಂಗಸಭೆಯ ಮೊದಲ ದಿನವಾದ ನಿನ್ನೆ ಒಂದು ನೆಲ, ಒಂದು ಕುಟುಂಬ ಎಂಬ ವಿಷಯದ ಬಗ್ಗೆ 20 ದೇಶಗಳ ನಾಯಕರು ಚರ್ಚೆ ನಡೆಸಿದ್ರು. ನಿನ್ನೆ ನಡೆದ ಶೃಂಗಸಭೆಯ ಎರಡನೇ ದಿನದ ಚರ್ಚೆಯಲ್ಲಿ ಒಂದು ಭವಿಷ್ಯ ಎಂಬ ವಿಚಾರದ ಬಗ್ಗೆ ಸುದೀರ್ಘ ಮಾತುಕತೆ ನಡೆಸಲಾಯ್ತು.

ಜಿ20ಗೆ ಮಹತ್ವದ ನೆರವು ಘೋಷಿಸಿದ ರಿಷಿ ಸುನಾಕ್!

ಜಿ20 ಶೃಂಗಸಭೆಯ 100ನೇ ಸಮಾವೇಶದಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್​ ಮಹತ್ವದ ನೆರವು ಘೋಷಿಸಿದ್ದಾರೆ. 20 ರಾಷ್ಟ್ರಗಳ ಸಂಕಷ್ಟದ ಸಮಯದಲ್ಲಿ ಸಹಕಾರ ನೀಡುವ ಗ್ರೀನ್ ಕ್ಲೈಮೇಟ್ ಫಂಡ್​ಗೆ ಬದ್ಧತೆಯ ನೆರವು ನೀಡುವುದಾಗಿ ರಿಷಿ ಸುನಾಕ್ ತಿಳಿಸಿದ್ರು. ಗ್ರೀನ್ ಕ್ಲೈಮೇಟ್ ಫಂಡ್‌ಗೆ 2 ಬಿಲಿಯನ್ ಡಾಲರ್ ಯುಕೆ ನೀಡಲಿದೆ ರಿಷಿ ಸುನಾಕ್ ಘೋಷಣೆ ಮಾಡಿದ್ರು. ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಯುಕೆ ಮಾಡಿದ ಅತಿದೊಡ್ಡ ಫಂಡಿಂಗ್ ಆಗಿದ್ದು, ರಿಷಿ ಸುನಾಕ್ ನಿರ್ಧಾರ G20ಯ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಶೃಂಗಸಭೆಯಲ್ಲಿ ಪ್ರತಿಧ್ವನಿಸಿದ ಉಕ್ರೇನ್ ಯುದ್ದದ ಚರ್ಚೆ!

ಭಾರತ ನಾಯಕತ್ವದಲ್ಲಿ ನಡೆಯುತ್ತಿರೋ 100ನೇ ಶೃಂಗಸಭೆಯಲ್ಲಿ ಉಕ್ರೇನ್ ಯುದ್ದದ ವಿಚಾರ ಪ್ರಮುಖ ವಿಷಯವಾಗಿ ಚರ್ಚೆಗೆ ಒಳಪಟ್ಟಿದೆ.. ಉಕ್ರೇನ್​ನಲ್ಲಿ ಸಮಗ್ರ ನ್ಯಾಯಯುತ ಮತ್ತು ಶಾಶ್ವತ ಶಾಂತಿ ನಿರ್ಮಾಣಕ್ಕೆ ಜಿ20 ರಾಷ್ಟ್ರಗಳ ನಾಯಕರು ಕರೆ ನೀಡಿದ್ದಾರೆ. ಇನ್ನೂ ಸಭೆಯಲ್ಲಿ ದೇಶವನ್ನ ಸ್ವಾಧಿನಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಸೇನಾಪಡೆಗಳನ್ನ ಬಳಸುವ ಬೆದರಿಕೆ ಕೃತ್ಯಗಳಿಂದ ಸದಸ್ಯ ರಾಷ್ಟ್ರಗಳು ಹಿಂದೆ ಸರಿಯಬೇಕು ಅನ್ನೋ ನಿಲುವನ್ನ ವ್ಯಕ್ತಪಡಿಸಲಾಗಿದೆ. ಅಲ್ಲದೇ ಪರಮಾಣು ಬಾಂಬ್ ಬಳಕೆ ಅಥವಾ ಪರಮಾಣು ಬಳಕೆಯ ಬೆದರಿಕೆ ಮಾಡುವ ವಿರುದ್ಧವೂ ವಿರೋಧ ವ್ಯಕ್ತವಾಗಿದೆ.

ದೆಹಲಿಯ ಅಕ್ಷರಧಾಮಕ್ಕೆ ಭೇಟಿ ನೀಡಿದ ರಿಷಿ ಸುನಕ್!

ಶೃಂಗಸಭೆಗಾಗಿ ಆಗಮಿಸಿ ದೆಹಲಿಯಲ್ಲಿ ಬೀಡು ಬಿಟ್ಟಿರೋ ಯುಕೆ ಪ್ರಧಾನಿ ರಿಷಿ ಸುನಕ್​ ದೆಹಲಿಯ ಅಕ್ಷರಧಾಮಕ್ಕೆ ಭೇಟಿ ನೀಡಿದ್ದಾರೆ. ಅಕ್ಷರಧಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಿಷಿ ಸುನಕ್ ದಂಪತಿ, ದೇವಾಲಯದ ಪ್ರಮುಖರ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ.

2024 ಶೃಂಗಸಭೆಯ ಜವಾಬ್ದಾರಿ ಬ್ರೆಜಿಲ್ ಹೆಗಲಿಗೆ!

ಭಾರತದ ಪ್ರಧಾನಿಯಾಗಿ ಜಿ20 ಶೃಂಗಸಭೆಯ 100ನೇ ಸಮಾವೇಶವನ್ನ ಯಶಸ್ವಿಯಾಗಿ ಪೂರೈಸಿದ ನರೇಂದ್ರ ಮೋದಿ ಮುಂದಿನ ಸಮಾವೇಶದ ಜವಬ್ದಾರಿಯನ್ನ ಹಸ್ತಾಂತರ ಮಾಡಿದ್ರು. 2024ರಲ್ಲಿ ನಡೆಯಲಿರುವ 101 ಶೃಂಗಸಭೆಯ ಸಮಾವೇಶದ ಮುಖ್ಯಸ್ಥಿಕೆಯನ್ನ ಮೋದಿ, ಬ್ರೇಜಿಲ್​ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದ್ರು. ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕಳೆಗಟ್ಟಿದ್ದ ಜಿ20 ಶೃಂಗಸಭೆಗೆ ಇಂದು ವೈಭವದ ತೆರೆಬಿದ್ದಿದೆ.. ಭಾರತದ ಅತಿಥಿ ಸತ್ಕಾರ, ಅಚ್ಚುಕಟ್ಟಿನ ನಿರ್ವಹಣೆಗೆ ವಿದೇಶಿ ನಾಯಕರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಭಾರತದ ಪಾಲಿಗೆ ಶೃಂಗಸಭೆಯ ಜವಾಬ್ದಾರಿ ಮತ್ತೊಂದು ಮೈಲಿಗಲ್ಲಾಗಿ, ದೇಶದ ಅಭಿವೃದ್ದಿಗೆ ಅಡಿಗಲ್ಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೇಗಿತ್ತು 2 ದಿನಗಳ ಜಿ20 ಶೃಂಗಸಭೆ..? ಯಾವ್ಯಾವ ನಿರ್ಧಾರಗಳನ್ನು ಕೈಗೊಂಡ್ರು ಗೊತ್ತಾ..?

https://newsfirstlive.com/wp-content/uploads/2023/09/g20-30.jpg

Load More