ಈ ಬಾರಿ ಮಳೆ ಕಡಿಮೆಯಾದ್ರೂ ಡೆಂಘೀ ಪ್ರಕರಣ ಹೆಚ್ಚಲು ಕಾರಣ?
ಬಿಬಿಎಂಪಿ, ಆರೋಗ್ಯ ಇಲಾಖೆ ಫುಲ್ ಅಲರ್ಟ್, ಜನರಿಗೆ ಎಚ್ಚರಿಕೆ
ಜೋರಾಗಿ ಸುರಿಯದ ಮಳೆಯಿಂದ ಡೆಂಘೀ ಕೇಸ್ ಹೆಚ್ಚುತ್ತಿವೆಯಾ?
ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು ಬಿಸಿಲು ಇಲ್ಲದೇ ವಾತಾವರಣ ತಂಪಾಗಿದೆ. ಇದರ ಜೊತೆಗೆ ನಗರದಲ್ಲೆಡೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಅತ್ಯಧಿಕ ಡೆಂಘೀ ಕೇಸ್ಗಳು ದಾಖಲಾಗಿವೆ. ಹೀಗಾಗಿ ನಗರದ ಜನರು ಸಾಕಷ್ಟು ಸುರಕ್ಷತೆಯಿಂದ ಇದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅಲ್ಲದೇ ಈ ಕಾಯಿಲೇ ಏರಿಕೆ ಬೆನ್ನಲ್ಲೇ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿವೆ.
ರಾಜ್ಯದಲ್ಲಿ ಈ ಬಾರಿ ಮಳೆ ಸಮಯಕ್ಕೆ ಸರಿಯಾಗಿ ಬಾರದಿದ್ದರೂ ಡೆಂಘೀ ಪ್ರಕರಣಗಳು ಹೆಚ್ಚಾಗಿರುವುದು ದೊಡ್ಡ ಪ್ರಶ್ನೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಡೆಂಘೀ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಈ ವರ್ಷ 6,806 ಡೆಂಘೀ ಪ್ರಕರಣಗಳು ಪತ್ತೆಯಾದರೇ, ಇದರಲ್ಲಿ 3,454 ಕೇಸ್ಗಳು ಬೆಂಗಳೂರಿನಲ್ಲಿ ಪತ್ತೆ ಆಗಿರುವುದು ಆತಂಕಕ್ಕೆ ಗುರಿ ಮಾಡಿದೆ.
ಇನ್ನು ಮಳೆ ಕಡಿಮೆಯಾದರೂ ಡೆಂಘೀ ಹೆಚ್ಚಾಗುತ್ತಿದ್ದು ಹಮಾಮಾನ ಬದಲಾವಣೆಯೇ ಇದಕ್ಕೆ ಮುಖ್ಯ ಕಾರಣ. ಏಕೆಂದರೆ ನಿರಂತರವಾಗಿ ಮಳೆ ಸುರಿಯುತ್ತಿಲ್ಲ. ಹೀಗಾಗಿ ಸೊಳ್ಳೆಗಳು ಮೊಟ್ಟೆ ಇಡುವುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ. ನಿರಂತರ ಜೋರಾಗಿ ಮಳೆ ಸುರಿದ್ರೆ ಆ ಮಳೆ ನೀರಲ್ಲಿ ಸೋಳ್ಳೆಗಳ ಮೊಟ್ಟೆಗಳು ಕೊಚ್ಚಿಕೊಂಡು ಹೋಗುತ್ತಿದ್ದವು. ಆದರೆ ಅದು ಆಗುತ್ತಿಲ್ಲ. ಹೀಗಾಗಿ ಕೇಸ್ಗಳು ಹೆಚ್ಚುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಡೆಂಘೀ ಕೇಸ್ಗಳ ವಿವಿರ
ಪರಿಸ್ಥಿತಿ ಕೈ ಮೀರುವ ಮೊದಲೇ ಬಿಬಿಎಂಪಿ & ಆರೋಗ್ಯ ಇಲಾಖೆ ಅಲರ್ಟ್
ಡೆಂಘೀ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಫುಲ್ ಅಲರ್ಟ್ ಆಗಿವೆ. ಪರಿಸ್ಥಿತಿ ಕೈ ಮೀರುವ ಮೊದಲೇ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಕೇಂದ್ರಗಳಲ್ಲಿ ಈ ಬಗ್ಗೆ ಹೆಚ್ಚಿನ ನಿಗವಹಿಸುವಂತೆ ಸೂಚಿಸಲಾಗಿದೆ. ದಾದಿಯರು, ಆಶಾ ಕಾರ್ಯಕರ್ತೆರು, ಬಿಬಿಎಂಪಿ ಸಿಬ್ಬಂದಿ ಮನೆ ಮನೆಗೆ ತೆರಳಿ ಡೆಂಘೀ ಬಗ್ಗೆ ಕಾಳಜಿ ಮೂಡಿಸಲಾಗುತ್ತಿದೆ. ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದು ನಗರದ ಪ್ರತಿ ವಾರ್ಡ್ಗಳಲ್ಲಿ ಔಷಧಿ ಸಿಂಪಡಿಸಲು ಬಿಬಿಎಂಪಿ ಮುಂದಾಗಿದೆ.
ಡೆಂಘೀ ಲಕ್ಷಣಗಳು ಏನೇನು ಗೊತ್ತಾ?
ಡೆಂಘೀ ಇದ್ದರೇ ಆಂಕ ಬೇಡ, ನಿರ್ಲಕ್ಷ್ಯ ಬೇಡವೇ ಬೇಡ
ಮೂರು ದಿನ ನಿರಂತರ ಜ್ವರ, ಮೈ, ಕೈ ನೋವು, ತಲೆ ನೋವು ಇದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮನೆಯ ಬಳಿ ಅಥವಾ ಎಲ್ಲಿಯಾದರೂ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಿ. ಶುದ್ಧವಾದ ಬಿಸಿ ನೀರು ಆರಿಸಿ ಕುಡಿಯಿರಿ. ಮನೆಯ ಸುತ್ತ ಹಾಗೂ ಟೆರೆಸ್ ಮೇಲೆ ನೀರು ನಿಲ್ಲದಂತೆ ಮಾಡಿ. ಸುತ್ತಲಿನ ವಾತಾವರಣ ಸ್ವಚ್ಛವಾಗಿ ಇಟ್ಟುಕೊಂಡರೇ ಡೆಂಘೀಯನ್ನು ದೂರ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ