newsfirstkannada.com

2023ರ ಏಕದಿನ ವಿಶ್ವಕಪ್​ ಗೆಲ್ಲಲು ಪಣ.. ಕೋಚ್​, ಕೊಹ್ಲಿ, ರೋಹಿತ್​ ಜೊತೆ ಅಜಿತ್​ ಅಗರ್ಕರ್ ಸುಧೀರ್ಘ​ ಚರ್ಚೆ

Share :

Published July 31, 2023 at 12:40pm

    ಭಿನ್ನ ಹಾದಿ ತುಳಿದ ಅಜಿತ್ ಅಗರ್ಕರ್ ಆ್ಯಂಡ್ ಟೀಮ್​

    ವಿಶ್ವಕಪ್ ಗೆಲ್ಲೋಕೆ ಕೊಹ್ಲಿ ಮೊರೆ ಹೋದ್ರಾ ಸೆಲೆಕ್ಟರ್ಸ್ ?

    ಕೊಹ್ಲಿಯಿಂದ ಇನ್​​ಪುಟ್ಸ್​​​​ ತೆಗೆದುಕೊಂಡ್ರಾ ಅಜಿತ್​​ ಅಗರ್ಕರ್​?

ಟೀಮ್ ಇಂಡಿಯಾ ಅಗೈನ್ ವಿಶ್ವಕಪ್ ಗೆಲ್ಲೋದ್ಯಾವಾಗ? ಇದು ದಶಕದ ಕೊರಗು. ಎಷ್ಟೇ ಪ್ರಯತ್ನಿಸಿದ್ರೂ ಟ್ರೋಫಿ ದಕ್ಕುತ್ತಿಲ್ಲ. ಬಟ್​ ಈ ಬಾರಿ ಒನ್ಡೇ ವಿಶ್ವಕಪ್​ ಗೆದ್ದೇ ತೀರಲು ಬಿಸಿಸಿಐ ಪಣತೊಟ್ಟಿದೆ. ಅದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿದೆ. ಅಷ್ಟಕ್ಕೂ ಪ್ಲಾನ್ ಆದ್ರೂ ಏನು ಅನ್ನೋ ವೆರಿ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಇದೇ ಲಾಸ್ಟ್​​​​​. ಆ ಬಳಿಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ್ದೆ ಇಲ್ಲ. ಕಪ್​ ಎತ್ತಿ ಹಿಡಿಯೋದು ನೋಡದೆ ದಶಕಗಳೇ ಉರುಳಿದಿದೆ. 2013 ರಿಂದ ಇಲ್ಲಿತನಕ ಬರೋಬ್ಬರಿ 9 ಐಸಿಸಿ ಟ್ರೋಫಿಗಳಲ್ಲಿ ಮುಗ್ಗರಿಸಿದೆ. ಕೋಟ್ಯಾನುಕೋಟಿ ಭಾರತೀಯರು ಮತ್ಯಾವಾಗ ಮೆನ್​ ಇನ್​​ ಬ್ಲೂ ಪಡೆ ವಿಶ್ವಕಪ್ ಗೆಲ್ಲುತ್ತೆ ಅಂತ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಕಳೆದ 10 ವರ್ಷದಲ್ಲಿ ಕ್ರಿಕೆಟ್ ಅಭಿಮಾನಿಗಳಿಗಾದ ನಿರಾಸೆ ಅಷ್ಟಿಷ್ಟಲ್ಲ. ಬಟ್​ ಈ ಬಾರಿ ಎಲ್ಲಾ ನಿರಾಸೆಗಳಿಗೆ ಫುಲ್​ಸ್ಟಾಪ್​​​​ ಹಾಕಲು ಬಿಸಿಸಿಐ ನಿರ್ಧರಿಸಿದೆ. ಅದಕ್ಕಾಗಿ ಮುಂಬರೋ ಒನ್ಡೇ ವಿಶ್ವಕಪ್ ಗೆದ್ದೇ ತೀರಲು ವಿಶ್ವಸಾಮ್ರಾಟನ ಮೊರೆ ಹೋಗಿದೆ.

ಅಜಿತ್​ ಅಗರ್ಕರ್​
ಅಜಿತ್​ ಅಗರ್ಕರ್​

ಕಿಂಗ್ ಕೊಹ್ಲಿ ಜೊತೆ ಚೀಫ್​ ಸೆಲೆಕ್ಟರ್ ಮಾತುಕತೆ..!

ಒನ್ಡೇ ವಿಶ್ವಕಪ್ ಆರಂಭಕ್ಕೆ ಜಸ್ಟ್ ಎರಡು ತಿಂಗಳಷ್ಟೇ ಬಾಕಿ ಇದೆ. ತಂಡವನ್ನ ಫೈನಲ್​ಗೊಳಿಸಲು ಚೀಫ್​​​​ ಸೆಲೆಕ್ಟರ್​ ಅಜಿತ್ ಅಗರ್ಕರ್​​ ಕೆರಿಬಿಯನ್ ನಾಡಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ ಆಯ್ಕೆಗಾರರು ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆ ಡಿಸ್ಕಷನ್ ನಡೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಹೌದು. ಆಯ್ಕೆ ಸಮಿತಿ ಏಷ್ಯಾಕಪ್ ಹಾಗೂ ಒನ್ಡೇ ವಿಶ್ವಕಪ್​​ಗೆ ತಂಡವನ್ನ ಸಿದ್ಧಗೊಳಿಸಬೇಕಿದೆ. ಹಾಗಾಗಿನೇ ಅಜಿತ್​ ಅಗರ್ಕರ್​ ಆ್ಯಂಡ್ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್​ಕೋಚ್​ ರಾಹುಲ್​ ದ್ರಾವಿಡ್​ ಜೊತೆ ಮ್ಯಾರಥಾನ್ ಮೀಟಿಂಗ್ ನಡೆಸ್ತಿದೆ. ಇದೇ ಟೈಮಲ್ಲಿ ಚೀಫ್​ ಸೆಲೆಕ್ಟರ್ ಅಜಿತ್ ಅಗರ್ಕರ್​ ಹಾಗೂ ಸಲೀಲ್​​ ಅಂಕೋಲಾ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ರೋಹಿತ್​-ರಾಹುಲ್​ ದ್ರಾವಿಡ್​- ಅಜಿತ್​ ಅಗರ್ಕರ್​

ವಿಶ್ವಸಾಮ್ರಾಟನ ಜೊತೆ ಸುದೀರ್ಘ ಚರ್ಚೆ

ಮೇಲ್ನೋಟಕ್ಕೆ ಸೆಲೆಕ್ಟರ್ಸ್​ ಹಾಗೂ ಕಿಂಗ್ ಕೊಹ್ಲಿ ನಡುವಿನ ಭೇಟಿ ಕ್ಯಾಜುವಲ್ ಅನ್ನಿಸಬಹುದು. ಆದರೆ ವಿರಾಟ್ ಜೊತೆಗಿನ ಡಿಸ್ಕಷನ್ ಸಮಯ ಬಹಳಷ್ಟು ಕ್ಯೂರಿಯಾಸಿಟಿಯನ್ನ ಹುಟ್ಟುಹಾಕಿದೆ. ಯಾಕಂದ್ರೆ ಭಾರತ ಮುಂದೆ ಎರಡು ಮೇಜರ್​​ ಟೂರ್ನಿಗಳನ್ನ ಆಡಲಿದೆ. ಅದಕ್ಕೆ ಬ್ಲೂಪ್ರಿಂಟ್​ ಸಿದ್ಧಪಡಿಸಲೆಂದೇ ಅಜಿತ್ ಅಗರ್ಕರ್ ಆ್ಯಂಟ್ ಟೀಮ್ ವೆಸ್ಟ್​​ವಿಂಡೀಸ್​ಗೆ ಹಾರಿದೆ.

ಇಂತಹ ಕ್ರೂಷಿಯಲ್ ಟೈಮಲ್ಲಿ ಅಜಿತ್ ಅಗರ್ಕರ್ ಟೀಮ್ ಸೆಲೆಕ್ಷನ್ ಬಗ್ಗೆ ಕೊಹ್ಲಿ ಜೊತೆ ಡಿಸ್ಕಷನ್ ನಡೆಸಿದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಕೊಹ್ಲಿ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​​. ಅನೇಕ ಐಸಿಸಿ ಟೂರ್ನಿಗಳಲ್ಲಿ ತಂಡವನ್ನ ಮುನ್ನಡೆಸಿದ ಅನುಭವಿದೆ. ಹೆಚ್ಚಾಗಿ ಬಿಗ್ ಟೂರ್ನಿಗಳಲ್ಲಿ ಯಾರನ್ನ ಆಡಿಸಿದ್ರೆ ತಂಡಕ್ಕೆ ಹೆಚ್ಚು ಲಾಭ ಅನ್ನುವ ಅರಿವಿದೆ. ಹೀಗಾಗಿ ಆಯ್ಕೆಗಾರರು ಕೊಹ್ಲಿ ಜತೆ ಟೀಮ್ ಸೆಲೆಕ್ಷನ್ ವಿಚಾರವಾಗಿ ಇನ್​​ಪುಟ್ಸ್ ಪಡೆದಿರಬಹುದು.

ಅಜಿತ್​ ಅಗರ್ಕರ್​- ಕೊಹ್ಲಿ- ರೋಹಿತ್​ ಶರ್ಮಾ
ಅಜಿತ್​ ಅಗರ್ಕರ್​- ಕೊಹ್ಲಿ- ರೋಹಿತ್​ ಶರ್ಮಾ

ರೋಹಿತ್- ಕೊಹ್ಲಿ ಕೈಯಲ್ಲಿದೆ ವಿಶ್ವಕಪ್ ಗೆಲುವು

ಬರೀ ಆನ್​​ಫೀಲ್ಡ್​​​​ನಲ್ಲಷ್ಟೇ ಹೋರಾಡಿ ವಿಶ್ವಕಪ್ ಗೆಲ್ಲಲ್ಲು ಸಾಧ್ಯವಿಲ್ಲ. ಅಖಾಡಕ್ಕೆ ಧುಮುಕುವ ಮುನ್ನವೇ ಬಲಿಷ್ಠ ತಂಡವನ್ನ ಸಜ್ಜುಗೊಳಿಸಬೇಕು. ಪರ್ಫೆಕ್ಟ್​​​​​​​ ತಂಡವಿದ್ರೆ ವಿಶ್ವಕಪ್​​ ಗೆಲ್ಲೋದು ಸುಲಭ. ಇದನ್ನ ಬಿಸಿಸಿಐ ಅರಿತಂತೆ ಕಾಣಿಸ್ತಿದೆ. ಈ ಬಾರಿ ಟೀಮ್​​​ ಸೆಲೆಕ್ಷನ್​ಗೆ ಹೆಚ್ಚು ಫೋಕಸ್ ಮಾಡ್ತಿದೆ. ಕ್ಯಾಪ್ಟನ್ -ಮಾಜಿ ಕ್ಯಾಪ್ಟನ್​ ಜೊತೆ ಸುದೀರ್ಘ ಚರ್ಚೆ ನಡೆಸ್ತಿದೆ.

ಯಾಕಂದ್ರೆ ಟೀಮ್ ಇಂಡಿಯಾದ ವಿಶ್ವಕಪ್ ಭವಿಷ್ಯ ನಿಂತಿರೋದೆ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೇಲೆ. ಈ ಜೋಡೆತ್ತು ರನ್ ಭರಾಟೆ ಜೊತೆ ಆನ್ ಫೀಲ್ಡ್​​ನಲ್ಲಿ ಕರೆಕ್ಟಾಗಿ ಸ್ಟ್ರಾಟಜಿ ರೂಪಿಸಿ ಬಿಟ್ರೆ 2023 ರ ಒನ್ಡೇ ವಿಶ್ವಕಪ್ ಗೆಲ್ಲೋದು ಕಷ್ಟದ ಮಾತೇನಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2023ರ ಏಕದಿನ ವಿಶ್ವಕಪ್​ ಗೆಲ್ಲಲು ಪಣ.. ಕೋಚ್​, ಕೊಹ್ಲಿ, ರೋಹಿತ್​ ಜೊತೆ ಅಜಿತ್​ ಅಗರ್ಕರ್ ಸುಧೀರ್ಘ​ ಚರ್ಚೆ

https://newsfirstlive.com/wp-content/uploads/2023/07/Kohli-3.jpg

Load More