ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ
ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಲಂಕಾದ ಓಪನರ್ ಕುಸಾಲ್ ಪೆರೆರಾ
ಅತಿ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಶ್ರೀಲಂಕಾದ ಬ್ಯಾಟ್ಸ್ಮನ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳ ಮಧ್ಯೆ ವಿಶ್ವಕಪ್ ಹಣಾಹಣಿ ನಡೆಯುತ್ತಿದೆ. ಪಂದ್ಯದ ವೇಳೆ ಲಂಕಾದ ಬ್ಯಾಟ್ಸ್ಮನ್ ಕುಸಾಲ್ ಪೆರೆರಾ ಅತಿ ವೇಗದ ಅರ್ಧ ಶತಕ ಬಾರಿಸಿ ವಿಶ್ವ ದಾಖಲೆ ಮಾಡಿದ್ದಾರೆ.
ಟಾಸ್ ಗೆದ್ದುಕೊಂಡ ಕಿವೀಸ್, ಎದುರಾಳಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಪಾತುಂ ನಿಸ್ಸಾಂಕ ಮತ್ತು ಕುಸಾಲ್ ಪೆರೆರಾ ಉತ್ತಮ ಆರಂಭವೇನು ಪಡೆಯಲಿಲ್ಲ. ಕೇವಲ 2 ರನ್ಗೆ ನಿಸ್ಸಾಂಕ ಕ್ಯಾಚ್ ನೀಡಿ ಪೆವಿಲಿಯನ್ಗೆ ನಡೆದರು. ಆದ್ರೆ ಕ್ರೀಸ್ ಕಾಯ್ದುಕೊಂಡ ಪೆರೆರಾ ಧೈರ್ಯ ಕಳೆದುಕೊಳ್ಳದೇ ಸಿಡಿಲಬ್ಬರದ ಬ್ಯಾಟಿಂಗ್ಗೆ ಮುಂದಾದರು.
#NZvSL #ICCRankings #ICCCricketWorldCup #WorldCup2023 Kusal Perera is on the attack..👍👍👍👍#NZVSL #Cricket #CricketReels #CWC23 pic.twitter.com/nAuWWYy7Bp
— Rustam Gopang (@RustamGopang) November 9, 2023
ಕೀವಿಸ್ ಬೌಲರ್ಗಳನ್ನ ಆರಂಭದಲ್ಲಿ ದಂಡಿಸಿದ ಪೆರೆರಾ ಕೇವಲ 22 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಮೇತ 50 ರನ್ ಸಿಡಿಸಿದರು. ಅತಿ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ 2ನೇ ಆಟಗಾರ ಎಂಬ ಖ್ಯಾತಿಗೆ ಶ್ರೀಲಂಕಾದ ಪೆರೆರಾ ಪಾತ್ರರಾಗಿದ್ದಾರೆ. ಈ ವೇಳೆ 51 ರನ್ ಗಳಿಸಿ ಆಡುವಾಗ ಪೆರೆರಾ ಸ್ಯಾಟ್ನರ್ಗೆ ಕ್ಯಾಚ್ ನೀಡಿ ಔಟ್ ಆದರು. ಇದಕ್ಕೂ ಮೊದಲು ಅಂದರೆ 2015ರಲ್ಲಿ ಆಲ್ ರೌಂಡರ್ ಮ್ಯಾಥ್ಯೂಸ್ ಕೇವಲ 20 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ಟೀಮ್ 46.4 ಓವರ್ಗೆ ಎಲ್ಲ ವಿಕೆಟ್ ಕಳೆದುಕೊಂಡು 171 ರನ್ಗಳನ್ನು ಮಾತ್ರ ಗಳಿಸಿದೆ. ನ್ಯೂಜಿಲೆಂಡ್ 172 ರನ್ ಟಾರ್ಗೆಟ್ ಎದುರಿಸುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ