ಟೀಮ್ ಇಂಡಿಯಾಕ್ಕೆ ಅಜೇಯ ಓಟ ಮುಂದುವರೆಸೋ ತವಕ.!
2016ರಲ್ಲಿ ಟಿ20 ವಿಶ್ವಕಪ್ಗೆ ಬಂದಿದ್ದ ಪಾಕಿಸ್ತಾನ ಸೋತು ಹೋಗಿತ್ತು
ವಿಶ್ವಕಪ್ನಲ್ಲಿ ಪಾಕ್-ಭಾರತ ಎದುರಾಗೋದು ಎಷ್ಟು ಪಂದ್ಯ ಗೊತ್ತಾ?
ವಿಶ್ವಕಪ್ ಶೆಡ್ಯೂಲ್ ರಿಲೀಸ್ ಆಗಿದ್ದೇ ಆಗಿದ್ದು, ಇಂಡೋ- ಪಾಕ್ ಫೈಟ್ನ ಕಿಡಿ ಹೊತ್ತಿದೆ. ಪ್ರತಿಷ್ಠೆಯ ಕದನದ ಕಾವು ಅಭಿಮಾನಿಗಳ ವಲಯದಲ್ಲಿ ಎಷ್ಟಿದೆ ಅಂದ್ರೆ ಎಲ್ಲಿ ನೋಡಿದ್ರೂ ಬದ್ಧವೈರಿಗಳ ನಡುವಿನ ಕಾದಾಟದ ಸುದ್ದಿಯದ್ದೇ ಚರ್ಚೆ. ಯಾಕಂದ್ರೆ ಈ ಬಾರಿ ಅಭಿಮಾನಿಗಳಿಗೆ ಡಬಲ್ ಧಮಾಕಾ ಕಾದಿದೆ.
ಭಾರತ -ಪಾಕಿಸ್ತಾನ ನಡುವಿನ ಪಂದ್ಯ ಅಂದರೆ, ಅದಕ್ಕಿರೋ ಗತ್ತೆ ಬೇರೆ. ಅದ್ರಲ್ಲೂ ಪ್ರತಿಷ್ಠೆಯ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿ ಅಂದ್ರೆ, ಅದು ಕೇವಲ ಪಂದ್ಯವಾಗಿ ಉಳಿದಿರಲ್ಲ. ಇಲ್ಲಿ ಬ್ಯಾಟ್ & ಬಾಲ್ ವೆಪನ್ಗಳಾಗಿ ಬದಲಾದ್ರೆ, ಇಡೀ ಮೈದಾನ ಅಕ್ಷರಶಃ ಯುದ್ಧ ಭೂಮಿಯಾಗಿ ಪರಿವರ್ತನೆಯಾಗುತ್ತೆ. ಒಂದೊಂದು ಎಸೆತ, ಒಂದೊಂದು ರನ್ ಅಭಿಮಾನಗಳ ಹಾರ್ಟ್ ಬೀಟ್ ಜೋರಾಗಿಸುತ್ತದೆ.
ಭಾರತ- ಪಾಕಿಸ್ತಾನ ಕ್ರಿಕೆಟ್ ಫೀಲ್ಡ್ನಲ್ಲಿ ಮುಖಾಮುಖಿ ಆಗ್ತಿವೆ ಅಂದ್ರೆ, ಇಡೀ ವಿಶ್ವವೇ ನೋಡೋಕೆ ಕಾದು ಕುಳಿತಿರುತ್ತೆ. ಯಾಕಂದ್ರೆ ಇಲ್ಲಿ ಸೋಲು ಅನ್ನೋ ಪದವನ್ನ ಯಾರು ಸಹಿಸಲ್ಲ. ಹೀಗಾಗಿಯೇ ಈ ಪಂದ್ಯದಲ್ಲಿ ಹೈವೋಲ್ಟೆಜ್ ಟ್ರೀಟ್ ಸಿಗುತ್ತೆ ಅನ್ನೋದು ಎಲ್ಲರ ನಿರೀಕ್ಷೆ. ಆ ನಿರೀಕ್ಷೆ ಹುಸಿಯಾಗಿದ್ದೇ ಇಲ್ಲ. ಇದಕ್ಕೆ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಟೂರ್ನಿ ರೋಚಕ ಹಣಾಹಣಿಯೇ ಸಾಕ್ಷಿ.
ಇಂಡೋ- ಪಾಕ್ ಫೈಟ್ಗೆ ಡೇಟ್ ಫಿಕ್ಸ್, ಫ್ಯಾನ್ಸ್ ಫುಲ್ ಖುಷ್.!
ಈ ಬಾರಿಯ ಏಕದಿನ ವಿಶ್ವಕಪ್ ಕದನದಲ್ಲಿ ಅಕ್ಟೋಬರ್ 15ರಂದು ಇಂಡೋ- ಪಾಕ್ ಫೈಟ್ಗೆ ಐಸಿಸಿ ಮಹೂರ್ತ ಇಟ್ಟಿದೆ. ಇದರ ಬೆನ್ನಲ್ಲೇ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಏಕದಿನ ವಿಶ್ವಕಪ್ ಶೆಡ್ಯೂಲ್ ಅನೌನ್ಸ್ ಆಗಿದ್ದೇ ಆಗಿದ್ದು, ಸೋಷಿಯಲ್ ಪ್ಲಾಟ್ಫಾರ್ಮ್ಗಳಲ್ಲಿ ಉಳಿದೆಲ್ಲ ಪಂದ್ಯಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ಇಂಡೋ -ಪಾಕ್ ಫೈಟ್. ಅಭಿಮಾನಿಗಳ ವಲಯದಲ್ಲಿ ಈ ಪಂದ್ಯಕ್ಕೆ ಎಂತಾ ಕ್ರೇಜ್ ಇದೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್.
ಭಾರತದಲ್ಲೇ ಪಂದ್ಯ, ಗೆಲುವೊಂದೆ ಗುರಿ.!
ಹೇಳಿ-ಕೇಳಿ ಈ ಬಾರಿ ವಿಶ್ವಕಪ್ ನಡೆಯುತ್ತಿರುವುದು ಭಾರತದಲ್ಲಿ. ಇನ್ನು ಕ್ರೆಜ್ ಬಗ್ಗೆ ನಾವ್ ಹೇಳ್ಬೇಕಾ?. ಅಕ್ಟೋಬರ್ 15ಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಹೌಸ್ಫುಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಏಕದಿನ ವಿಶ್ವಕಪ್ನಲ್ಲಿ ಈವರೆಗೆ ಇಂಡೋ -ಪಾಕ್ ಒಟ್ಟು 7 ಬಾರಿ ಮುಖಾಮುಖಿ ಆಗಿವೆ. ಈವರೆಗೂ ಸೋಲು ಅನ್ನೋ ಪದದ ಸಮೀಪಕ್ಕೂ ಟೀಮ್ ಇಂಡಿಯಾ ಹೋಗಿಲ್ಲ. ತವರಿನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತದ ಗುರಿ ಗೆಲುವೊಂದೆ.
7 ವರ್ಷದ ಬಳಿಕ ಭಾರತಕ್ಕೆ ಪಾಕ್ ತಂಡ.!
2016 ಮಾರ್ಚ್ 25, ಅದೇ ಕೊನೆಯ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದಲ್ಲಿ ಆಡಿದ್ದು. ಅಂದು ಪ್ಲೇಯಿಂಗ್ ಇಲೆವೆನ್ನಲ್ಲಿದ್ದ ಒಬ್ಬ ಆಟಗಾರ ಕೂಡ ಈಗ ಪಾಕ್ ತಂಡದಲ್ಲೇ ಇಲ್ಲ. ಅಂದು, ಟಿ20 ವಿಶ್ವಕಪ್ ಟೂರ್ನಿಗೆಂದು ಬಂದಿದ್ದ ಪಾಕ್, 4 ಪಂದ್ಯ ಆಡಿ ಕೇವಲ 1 ಪಂದ್ಯ ಗೆದ್ದು ಹೀನಾಯ ಸೋಲುಂಡು ತವರಿಗೆ ತೆರಳಿತ್ತು.
ಅಭಿಮಾನಿಗಳಿಗೆ ಸಿಗುತ್ತಾ ಡಬಲ್ ಟ್ರೀಟ್.?
ಅಕ್ಟೋಬರ್ 15ಕ್ಕೆ ನಡೆಯೋ ಒಂದು ಪಂದ್ಯದ ಡೇಟ್ ಅಫಿಶಿಯಲ್ ಆಗೇ ಫಿಕ್ಸ್ ಆಗಿದೆ. ಅದು ಎಲ್ಲರಿಗೂ ಗೊತ್ತಿರೋ ಸತ್ಯ. ಆದ್ರೆ, ವಿಶ್ವಾದ್ಯಂತ ಫ್ಯಾನ್ಸ್ ನಿರೀಕ್ಷೆ ಡಬಲ್ ಆಗಿದೆ. ಅಂದ್ರೆ, ಟೂರ್ನಿಯಲ್ಲಿ 2 ಬಾರಿ ಇಂಡೋ- ಪಾಕ್ ಮುಖಾಮುಖಿಯಾಗಲಿ ಅನ್ನೋದು ಫ್ಯಾನ್ಸ್ ಮಹದಾಸೆಯಾಗಿದೆ. ಅದಕ್ಕೆ ಅವಕಾಶ ಇದೆ. ಒಂದು ವೇಳೆ ಅಂಕಪಟ್ಟಿಯ ಟಾಪರ್ ಆಗಿ ಒಂದು ತಂಡ, 4ನೇ ಸ್ಥಾನಿಯಾಗಿ ಒಂದು ತಂಡ ಸೆಮಿಫೈನಲ್ಗೆ ಎಂಟ್ರಿ ಕೊಟ್ರೆ, ಮತ್ತೊಂದು ಇಂಡೋ -ಪಾಕ್ ಹೈವೋಲ್ಟೆಜ್ ಕದನ ಫಿಕ್ಸ್.
ಅಭಿಮಾನಿಗಳಿಗೆ ನಾಯಕನ ವಾಗ್ದಾನ.!
ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗ್ತಿದ್ದಂತೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫ್ಯಾನ್ಸ್ಗೆ ಪ್ರಾಮಿಸ್ ಮಾಡಿದ್ದಾರೆ. ಈ ಬಾರಿ ತವರಲ್ಲೇ ವಿಶ್ವಕಪ್ ನಡೀತಾ ಇರೋ ನಿಮಗೆಲ್ಲಾ ಖುಷಿ ಅಂತಿದೆ ಅಂತಾ ನಂಗೊತ್ತು. ನಾವು ಕೂಡ ಗೆಲುವಿಗೆ ಪಣ ತೊಟ್ಟು ಹೋರಾಡ್ತಿವಿ ಅಂತಾ ಮಾತು ಕೊಟ್ಟಿದ್ದಾರೆ. ಈ ಮೂಲಕ ಐಸಿಸಿ ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್ ಹಾಕೋ ಇರಾದೆ ವ್ಯಕ್ತಪಡಿಸಿದ್ದಾರೆ.
ಇಂಡೋ- ಪಾಕ್ ಮುಖಾಮುಖಿ ಅಂದ್ರೆ ಯಾವಾಗ್ಲೂ ಟೀಮ್ ಇಂಡಿಯಾನೆ ಗೆಲ್ಲೋ ಹಾಟ್ ಫೇವರಿಟ್ ಅನ್ನೋ ಟಾಕ್ ಶುರುವಾಗಿ ಬಿಡುತ್ತೆ. ಸದ್ಯ ವಿಶ್ವಕಪ್ ಶೆಡ್ಯೂಲ್ ಅನೌನ್ಸ್ ಆಗ್ತಿದ್ದಂತೆ ಆಗಿರೋದು ಅದೇ. ಅದ್ರಲ್ಲೂ ಭಾರತದಲ್ಲೇ ಈ ಬಾರಿ ಟೂರ್ನಿ ನಡೆಯೋದ್ರಿಂದ ಭಾರತ ಗೆಲ್ಲುತ್ತೆ ಅನ್ನೋ ನಿರೀಕ್ಷೆ ದುಪ್ಪಟ್ಟಿದೆ. ಈ ನಿರೀಕ್ಷೆ ಆಟಗಾರರ ಮೇಲೆ ಒತ್ತಡವಾಗದಿರಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ