ಎಲ್ಲದರಲ್ಲೂ 100% ಪ್ರದರ್ಶನ ಕೊಡ್ತಿರುವ ಭಾರತದ ಪ್ಲೇಯರ್ಸ್
ಪಂದ್ಯದಲ್ಲಿ ಅಗ್ರೆಸ್ಸೀವ್ ಬ್ಯಾಟಿಂಗ್ ಮಾಡುತ್ತಿರೋ ರೋಹಿತ್ ಶರ್ಮಾ
ರೋಹಿತ್ ಶರ್ಮಾನೇ ರಿಯಲ್ ಹೀರೋ, ಫಿಯರ್ಲೆಸ್ ಬ್ರ್ಯಾಂಡ್
ಕಿವೀಸ್ ಕಿವಿ ಹಿಂಡಿದ ಟೀಮ್ ಇಂಡಿಯಾ ಫೈನಲ್ಗೆ ರಾಜನಂತೆ ಎಂಟ್ರಿ ಕೊಟ್ಟಿದೆ. ಎಲ್ಲೆಡೆ ಟೀಮ್ ಇಂಡಿಯಾ ಗೆಲುವಿನ ರೂವಾರಿಗಳಿಗೆ ಜೈಕಾರ ಜೋರಾಗಿದೆ. ಆದ್ರೆ, ಎಲ್ಲರ ಅಬ್ಬರದ ನಡುವೆ ಕ್ಯಾಪ್ಟನ್ ರೋಹಿತ್ ಶರ್ಮಾ ಕಣ್ಮರೆಯಾಗಿದ್ದಾರೆ. ಟೀಮ್ ಇಂಡಿದ ಸಕ್ಸಸ್ ಹಿಂದಿನ ಅಸಲಿ ಹಿರೋನನ್ನೆ ಮರೆತರೆ ಹೇಗೆ..? ಈ ವಿಶ್ವಕಪ್ ಟೂರ್ನಿಯ ಯಶಸ್ಸಿನ ಸೂತ್ರದಾರ ಮುಂಬೈಕರ್.
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಡೆದಿದ್ದೇ ಹಾದಿ. ತವರಿನಂಗಳದಲ್ಲಿ ನಡೀತಾ ಇರೋ ಪ್ರತಿಷ್ಠಿತ ಟೂರ್ನಿಯ ಹೆಮ್ಮೆಯ ಕ್ರಿಕೆಟಿಗರು ಭಾರತ ವಿಜಯಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಒಬ್ಬೊಬ್ಬರ ಪರ್ಫಾಮೆನ್ಸ್ ಕೂಡ ಅದ್ಭುತ, ಅಮೋಘ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್.. ಎಲ್ಲಾ ವಿಭಾಗದಲ್ಲಿ 100 ಪರ್ಸೆಂಟ್ ಕೊಡ್ತಿರೋ ಪ್ಲೇಯರ್ಸ್ ಗೆಲುವಿನ ನಗಾರಿನ ದೇಶದ ಉದ್ದಗಲದಲ್ಲೂ ಬಾರಿಸಿದ್ದಾರೆ. ಈ ಸಕ್ಸಸ್ ಹಿಂದಿನ ಸೂತ್ರದಾರ ಕ್ಯಾಪ್ಟನ್ ರೋಹಿತ್ ಶರ್ಮಾ.
ಕ್ಯಾಪ್ಟನ್ ರೋಹಿತ್ಗೆ ಸಲ್ಲಬೇಕು ಸಂಪೂರ್ಣ ಶ್ರೇಯ..!
ಈ ವಿಶ್ವಕಪ್ನಲ್ಲಿ ಅಜೇಯವಾಗಿ ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಟ್ಟಿರೋದ್ರ ಹಿಂದೆ ಎಲ್ಲರ ಶ್ರಮವಿದೆ. ಒಗ್ಗಟ್ಟಿನ ಸೂತ್ರ ಯಶಸ್ಸಿನ ಗಿಫ್ಟ್ ನೀಡಿದೆ. ಇದ್ರಲ್ಲಿ ಅನುಮಾನವೇ ಬೇಡ. ಆದ್ರೆ, ಇದೆಲ್ಲ ಸಾಧ್ಯವಾಗಿದ್ದು ಹೇಗೆ?. ಈ ಪ್ರಶ್ನೆಗೆ ಉತ್ತರ ರೋಹಿತ್ ಶರ್ಮಾ.. ಸೆಮಿಸ್ ಗೆದ್ದ ಬಳಿಕ ಕ್ರಿಕೆಟ್ ಲೋಕ ಕಂಡ ದಿಗ್ಗಜರುಗಳು ಹೇಳ್ತಿರೋ ಮನದ ಮಾತಿದು.
ಸ್ವಾರ್ಥ ಇಲ್ಲ ತಂಡ ಗೆಲ್ಲಬೇಕು ಅನ್ನೋದೆ ಹಂಬಲ.!
ವಿಶ್ವಕಪ್ ಟೂರ್ನಿಯನ್ನ ನಾವು ಸೂಕ್ಮವಾಗಿ ಗಮನಿಸಿದ್ರೆ, ನೀವೂ ಕೂಡ ಇದೇ ಮಾತನ್ನ ಹೇಳ್ತಿರಾ. ಆರಂಭದಿಂದಲೇ ಅಗ್ರೆಸ್ಸೀವ್ ಆಟವಾಡ್ತಿರೋ ರೋಹಿತ್, ಬೌಲರ್ಗಳ ಬೆಂಡೆತ್ತುತ್ತಿದ್ದಾರೆ. ನಾನು ದೊಡ್ಡ ಇನ್ನಿಂಗ್ಸ್ ಕಟ್ಟಬೇಕು, ಸೆಂಚುರಿ ಸಿಡಿಸಬೇಕು ಅನ್ನೋ ಚಿಕ್ಕ ಸ್ವಾರ್ಥವೇ ಇಲ್ಲ..
ನನ್ನ ಪ್ರಕಾರ ರೋಹಿತ್ ರಿಯಲ್ ಹೀರೋ. ಮೊದಲ ಬಾರಿ ಪರೀಕ್ಷೆಯಾಯಿತು. ಗ್ರೂಪ್ ಸ್ಟೇಜ್ನದ್ದು ಒಂದು ಕತೆ. ಆದ್ರೆ, ನಾಕೌಟ್ ಹಂತದಲ್ಲಿ ಮತ್ತೆ ಭಯಮುಕ್ತರಾಗಿ ಆಡ್ತಾರಾ ಅನ್ನೋ ಪ್ರಶ್ನೆಯಿತ್ತು. ಮೈದಾನಕ್ಕೆ ಇಳಿದ ನಾಯಕ ಇಲ್ಲಿರುವವರಿಗೆ ಹಾಗೂ ಡ್ರೆಸ್ಸಿಂಗ್ ರೂಮ್ನಲ್ಲಿದ್ದವರಿಗೆ ಹೀಗೆ ಆಡಬೇಕು ಎಂದು ತೋರಿಸಿದ್ರು.
ನಾಸಿರ್ ಹುಸೇನ್, ಮಾಜಿ ಕ್ರಿಕೆಟಿಗ
ನಾಸಿರ್ ಹುಸೇನ್ ಹೇಳಿದ ಮಾತು ನೂರಕ್ಕೆ ನೂರು ಸತ್ಯ. ರೋಹಿತ್ ಶರ್ಮಾನೇ ರಿಯಲ್ ಹಿರೋ. ರೋಹಿತ್ ಆಡ್ತಿರೋ ಆ ಫಿಯರ್ಲೆಸ್ ಬ್ರ್ಯಾಂಡ್ ಆಫ್ ಕ್ರಿಕೆಟ್‌ನ ಹಿಂದೊಂದು ಉದ್ದೇಶಯಿದೆ. ತಂಡಕ್ಕೆ ಗುಡ್ ಸ್ಟಾರ್ಟ್ ಸಿಗಬೇಕು, ಉಳಿದ ಬ್ಯಾಟ್ಸ್ಮನ್ಗಳ ಮೇಲಿನ ಪ್ರೆಶರ್ ರಿಲೀಸ್ ಮಾಡಬೇಕು ಅನ್ನೋದು ರೋಹಿತ್ ಲೆಕ್ಕಾಚಾರ. ಈ ಲೆಕ್ಕಾಚಾರ ಸಖತ್ ಆಗಿ ವರ್ಕೌಟ್ ಆಗ್ತಿದೆ.
ಎಲ್ಲವೂ ನನ್ನನ್ನ ಇಂಪ್ರೆಸ್ ಮಾಡುತ್ತೆ. ಅವರ ಜೊತೆ ಬ್ಯಾಟಿಂಗ್ ಮಾಡುವಾಗ ನಾನು ನಾನ್ಸ್ಟ್ರೈಕರ್ ಎಂಡ್ನಲ್ಲೆ ಬಿಡ್ತೀನಿ. 10 ಆದಾಗ ನಾನು 15-20 ಬಾಲ್ ಆಡಿರುತ್ತೇನೆ. ಉಳಿದಿದ್ದೆಲ್ಲ ರೋಹಿತ್ ಬಾಯ್ ಸಿಕ್ಸ್-ಫೋರ್ ಹೊಡೆದು ಮುಗಿಸಿರುತ್ತಾರೆ. ನಾನು ನೋಡ್ತಾ ಇರೋದಷ್ಟೇ.
ಬದ್ಧವೈರಿ ಪಾಕ್ ಆಟಗಾರರಿಂದಲೂ ಬಹುಪರಾಕ್..!
ಸದಾ ಟೀಮ್ ಇಂಡಿಯಾವನ್ನ ಟೀಕಿಸೋ ಪಾಕಿಸ್ತಾನಿ ಕ್ರಿಕೆಟರ್ಸ್ ಕೂಡ ರೋಹಿತ್ ಆಟಕ್ಕೆ ಫಿದಾ ಆಗಿದ್ದಾರೆ. ರೋಹಿತ್ ಶರ್ಮಾ ನಾಯಕತ್ವಕ್ಕೆ ಬಹುಪರಾಕ್ ಹೇಳ್ತಿದ್ದಾರೆ. ನಾಯಕ ಮುಂದೆ ನಿಂತು ಮುನ್ನಡೆಸಿದ ಪರಿ ನಿಜಕ್ಕೂ ಅದ್ಭುತ. ರೋಹಿತ್ ಶರ್ಮಾ ಹೆಸರು ತುಂಬಾ ಬರಲ್ಲ. ಆತ ಸೆಂಚುರಿ ಹೊಡೆದಿಲ್ಲ. ದ್ವಿಶತಕ ಹೊಡೆದಿಲ್ಲ. ನಾಕೌಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡೋದು, 3ನೇ ಎಸೆತದಲ್ಲಿ ಬೌಲರ್ ಮೇಲೆ ಆಕ್ರಮಣ ಮಾಡೋದು ಅದೊಂದು ದೊಡ್ಡ ಡೀಲ್. ಅದನ್ನ ಮಾಡಲು ತುಂಬಾ ಧೈರ್ಯ ಬೇಕು. ಹ್ಯಾಟ್ಸಾಫ್.
ಗೆಲುವಿನೊಂದಿಗೆ ವಿದಾಯ ಹೇಳಲು ನಡೆದಿದೆ ಪ್ಲಾನ್.!
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿ ಸೆಮಿಫೈನಲ್ಗೆ ಎಂಟ್ರಿ ಕೊಡ್ತಿದ್ದಂತೆ ಹೊಸ ಸುದ್ದಿ ಹೊರಬಿದ್ದಿದೆ. ರೋಹಿತ್ ನಿವೃತ್ತಿಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನವೆಂಬರ್ 19ರಂದು ನಡೆಯೋ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಚಾಂಪಿಯನ್ ಪಟ್ಟಕ್ಕೇರಿಸಿ, ಕ್ರಿಕೆಟ್ ಗುಡ್ ಬೈ ಹೇಳೋ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ ಇದಾರೆ ಅನ್ನೋದು ಆಪ್ತ ಮೂಲಗಳ ಮಾಹಿತಿ. 36 ವರ್ಷದ ರೋಹಿತ್ ಮುಂದಿನ ವಿಶ್ವಕಪ್ನಲ್ಲಿ ಬಹುತೇಕ ಅಸಾಧ್ಯದ ಮಾತೇ.
ನಿವೃತ್ತಿಯ ಸುದ್ದಿ ಸದ್ಯಕ್ಕಂತೂ ಅಂತೆ ಕಂತೆಯ ಕಥೆಯಾಗಿದೆ. ಆದ್ರೆ, ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಟ್ಟಿರೋದಂತೂ ಕಣ್ಮುಂದೆ ಸತ್ಯ. ಈ ಫೈನಲ್ ಫೈಟ್ನಲ್ಲೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಲಿ. ಚಾಣಾಕ್ಷನಂತೆ ನಾಯಕತ್ವ ನಿಭಾಯಿಸಿ ಟ್ರೋಫಿ ಗೆಲುವಿನ ಕನಸನ್ನ ನನಸು ಮಾಡಲಿ ಅನ್ನೋದು ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ