ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ಪಂದ್ಯ ಕಡೆಗಣಿಸುವಂತಿಲ್ಲ ಭಾರತ
ಟೀಮ್ ಇಂಡಿಯಾ ಈ ಚಾಲೆಂಜ್ಗಳನ್ನು ಗೆಲ್ಲೋದು ಕಷ್ಟ.. ಕಷ್ಟ
ರೋಹಿತ್ ಶರ್ಮಾ ಪಡೆ ಪ್ರತಿ ಪಂದ್ಯಕ್ಕೆ ಪ್ರಾಮುಖ್ಯತ ಕೊಡಬೇಕು
ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಆತಂಕ ಶುರುವಾಗಿದೆ. ತವರಿನಂಗಳದಲ್ಲಿ ಸುಲಭಕ್ಕೆ ಕಪ್ ಗೆಲ್ಲೋ ಲೆಕ್ಕಾಚಾರದಲ್ಲಿದ್ದ ರೋಹಿತ್ ಪಡೆಗೆ ಬಿಗ್ ಟಾಸ್ಕ್ ಎದುರಾಗಿದೆ. ಹೋಮ್ ಅಡ್ವಾಂಟೇಜ್ ಇದ್ರೂ, ಸೆಮಿಸ್ಗೆ ಕ್ವಾಲಿಫೈ ಆಗಬೇಕಂದರೆ ಯುದ್ಧವನ್ನೇ ಗೆಲ್ಲಬೇಕಿದೆ.
ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಕೊನೆಗೂ ಪ್ರಕಟವಾಗಿದೆ. ಶೆಡ್ಯೂಲ್ ಅನೌನ್ಸ್ ಆದ ಬಳಿಕ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದ್ರೆ, ಟೀಮ್ ಇಂಡಿಯಾ ಕ್ಯಾಂಪ್ ಮಾತ್ರ ಫುಲ್ ಥಂಡಾ ಹೊಡೆದಿದೆ. 10 ವರ್ಷದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್ ಹಾಕೋ ಲೆಕ್ಕಾಚಾರದಲ್ಲಿ ತಂಡ, ಬಲಿಷ್ಠ ಎದುರಾಳಿಗಳನ್ನ ಸವಾಲನ್ನ ಎದುರಿಸಬೇಕಿದೆ. 7 ಪಂದ್ಯಗಳಲ್ಲಿ ಭಾರತಕ್ಕೆ ಕಠಿಣ ಸವಾಲು ಕಾದಿದೆ.
ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಟಫ್ ಟಾಸ್ಕ್ ಟೀಮ್ ಇಂಡಿಯಾಗೆ ಎದುರಾಗಲಿದೆ. ಚೆನ್ನೈನ ಚೆಪಾಕ್ನಲ್ಲಿ ನಡೆಯೋ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನ ರೋಹಿತ್ ಪಡೆ ಎದುರಿಸಲಿದೆ. ಏಕದಿನ ಮಾದರಿಯಲ್ಲಿ ನಂಬರ್ 1 ತಂಡದ ಆಸಿಸ್ ಪಡೆಯನ್ನ ಕಟ್ಟಿ ಹಾಕಿ ಟೂರ್ನಿಯಲ್ಲಿ ಕಿಕ್ ಸ್ಟಾರ್ಟ್ ಮಾಡೋದು ಸುಲಭದ ವಿಚಾರ ಅಲ್ಲವೇ ಇಲ್ಲ.
ಅಫ್ಘಾನಿಸ್ತಾನ ತಂಡವನ್ನು ಟೀಮ್ ಇಂಡಿಯಾ ಕಡೆಗಣಿಸುವಂತೇ ಇಲ್ಲ.. ಡೇರ್ ಡೆವಿಲ್ ಬ್ಯಾಟ್ಸ್ಮನ್ಗಳು, ಯಂಗ್ ಗನ್ಗಳಂತ ವೇಗಿಗಳನ್ನ ಹೊಂದಿರೋ ಅಫ್ಘನ್ ಶಾಕ್ ಟ್ರೀಟ್ಮೆಂಟ್ ಕೊಡೋದ್ರಲ್ಲಿ ಎತ್ತಿದ ಕೈ. ಪಂದ್ಯ ಬೇರೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿರೋದ್ರಿಂದ ಅಫ್ಘನ್ನ ಮ್ಯಾಚ್ ವಿನ್ನಿಂಗ್ ಸ್ಪಿನ್ನರ್ಸ್ ಎದುರಿಸೋದು ನಿಜಕ್ಕೂ ಕಷ್ಟ.
ಭಾರತ -ಪಾಕಿಸ್ತಾನ ಪಂದ್ಯ ಅಂದ್ರೆ ಇಡೀ ವಿಶ್ವ ಕಾದು ಕುಳಿತಿರುತ್ತೆ. ತವರಿನಲ್ಲಿ ಬೇರೆ ಮುಖಾಮುಖಿ ಆಗ್ತಿರೋದು ಭಾರತೀಯ ಅಭಿಮಾನಿಗಳ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ಈ ನಿರೀಕ್ಷೆಯ ಭಾರವೇ ಆಟಗಾರರನ್ನ ಒತ್ತಡಕ್ಕೆ ಸಿಲುಕಿಸೋ ಸಾಧ್ಯತೆಯಿದೆ. ಅದ್ರ ಜೊತೆಗೆ ಪಾಕಿಸ್ತಾನ ಕೂಡ ಎಲ್ಲ ವಿಭಾಗದಲ್ಲಿ ಬಲಿಷ್ಠವಾಗಿರೋದ್ರಿಂದ ರೋಹಿತ್ ಟೀಮ್ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
ನೋಡೋಕೆ ಬಲಿಷ್ಠ ಟೀಮ್ ಇಂಡಿಯಾಗೆ ಬಾಂಗ್ಲಾದೇಶ ಸುಲಭದ ತುತ್ತಂತೆ ಕಾಣ್ತಿದೆ. ಆದ್ರೆ, ಸ್ವಲ್ಪ ಯಾಮಾರಿದ್ರೂ ಮುಖಭಂಗ ಅನುಭವಿಸಬೇಕಾಗುತ್ತೆ. ಬಿಗ್ ಟೂರ್ನಮೆಂಟ್ಗಳಲ್ಲಿ ಬಾಂಗ್ಲಾದೇಶ ತಂಡ ಟೀಮ್ ಇಂಡಿಯಾವನ್ನ ಅಷ್ಟು ಕಾಡಿದೆ. ಇದಕ್ಕೆ ಇತಿಹಾಸವೇ ಸಾಕ್ಷಿ.
ಅಕ್ಟೋಬರ್ 22ರಂದು ಮತ್ತೊಂದು ಕಠಿಣ ಸವಾಲನ್ನ ಇಂಡಿಯಾ ಎದುರಿಸಲಿದೆ. ಟಾಪ್ ಕ್ಲಾಸ್ ಬ್ಯಾಟ್ಸ್ಮನ್ಗಳು, ಬೆಂಕಿಯುಂಡೆಗಳನ್ನೇ ಉಗುಳೊ ಬೌಲರ್ಗಳಿರೋ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಪಡೆ ಸೆಣೆಸಲಿದೆ. ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲೋಕೆ ಟೀಮ್ಗೆ ಆಟದ ಜೊತೆ ಲಕ್ ಕೂಡ ಬೇಕಾಗಿತ್ತೆ.
2019ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಇಂಗ್ಲೆಂಡ್ ತಂಡ ಈಗ ಮತ್ತಷ್ಟು ಬಲಿಷ್ಠವಾಗಿದೆ. ಅಗ್ರೆಸ್ಸಿವ್ ಆಟವನ್ನಾಡ್ತಿರೋ ಆಂಗ್ಲರನ್ನ ಕಟ್ಟಿ ಹಾಕೋದು ಟೀಮ್ ಇಂಡಿಯಾಗೆ ನಿಜಕ್ಕೂ ಸವಾಲಾಗಲಿದೆ.
ನವೆಂಬರ್ 5ರಂದು ಈಡನ್ ಗಾರ್ಡನ್ನಲ್ಲಿ ಸೌತ್ ಆಫ್ರಿಕಾ ಸವಾಲನ್ನ ಟೀಮ್ ಇಂಡಿಯಾ ಎದುರಿಸಲಿದೆ. ಐಸಿಸಿ ಟೂರ್ನಿಯಲ್ಲಿ ಸೌತ್ ಆಫ್ರಿಕಾವನ್ನ ಚೋಕರ್ಸ್ ಅಂತಾರೆ. ಸದ್ಯ ಟೀಮ್ ಇಂಡಿಯಾ ಕೂಡ ಇದೇ ಸ್ಥಿತಿಯಲ್ಲಿದ್ದು, ಎಚ್ಚರಿಕೆಯ ಆಟ ಆಡಬೇಕಿದೆ.
ಟೂರ್ನಿಯ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಎದುರಿಸೋ ಎಲ್ಲ ತಂಡಗಳೂ ಆನ್ ಪೇಪರ್ ಸಖತ್ ಸ್ಟ್ರಾಂಗ್ ಆಗಿವೆ. ಹಾಗಂತ ಟೀಮ್ ಇಂಡಿಯಾ ದುರ್ಬಲ ತಂಡ ಅಂತಾ ಹೇಳೋಕಾಗಲ್ಲ. ರೋಹಿತ್ ಪಡೆಯನ್ನ ಅದ್ರಲ್ಲೂ, ತವರಿನಲ್ಲಿ ಮಣಿಸೋದು ವಿದೇಶಿ ತಂಡಗಳ ಪಾಲಿಗೆ ಅಸಾಧ್ಯದ ಮಾತೇ. ಹಾಗಂತ ಅತಿಯಾದ ಆತ್ಮವಿಶ್ವಾಸದಲ್ಲಿ ಎದುರಾಳಿಯನ್ನ ಕಡೆಗಣಿಸೋಕೆ ಆಗುತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ