ಕೊಹ್ಲಿ ಪಾಲಿಗೆ ಇದೇ ನೋಡಿ ಕನಸಿನ ವಿಶ್ವಕಪ್..!
ಅತ್ಯಮೋಘ ಫಾರ್ಮ್ನಲ್ಲಿ ವಿರಾಟ ಆರ್ಭಟ
ಸಾಲು ಸಾಲು ಸಾಧನೆಗಳು, ದಾಖಲೆಗಳು ಬ್ರೇಕ್
15 ವರ್ಷಗಳ ಸುದೀರ್ಘ ಕ್ರಿಕೆಟ್ ಜರ್ನಿಯಲ್ಲಿ ವಿರಾಟ್ ಕೊಹ್ಲಿ 3 ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಡಿದ್ದಾರೆ. ಟಿ20 ವಿಶ್ವಕಪ್, ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಖದರ್ ತೋರಿದ್ದಾರೆ. ಈ ಬಾರಿ ಆಡ್ತಿರೋ 4ನೇ ಏಕದಿನ ವಿಶ್ವಕಪ್ ಟೂರ್ನಿಯಿದ್ಯಲ್ಲ.. ಇದು ವಿರಾಟ್ ಪಾಲಿನ ಕನಸಿನ ಟೂರ್ನಿ. ದಾಖಲೆಗಳ ಒಡೆಯ, ಶತಕದ ಸರದಾರ ಕೊಹ್ಲಿಗೆ ಈ ಟೂರ್ನಿ ತುಂಬಾನೇ ಸ್ಪೆಷಲ್ ಆಗಿದೆ.
ಭಾರತೀಯ ಕ್ರಿಕೆಟ್ ಲೋಕದಲ್ಲಿ ಸದ್ಯ ಎರಡೇ ಸುದ್ದಿಗಳ ಆರ್ಭಟ. ಒಂದು ಟೀಮ್ ಇಂಡಿಯಾ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾದ್ರೆ, ಇನ್ನೊಂದು ವಿರಾಟ್ ಕೊಹ್ಲಿಯ ದಾಖಲೆಯ ಶತಕ. ವಿರಾಟ್ 50ನೇ ಸೆಂಚುರಿ ಸಿಡಿಸಿ ದಿನವೇ ಉರುಳಿದೆ. ಅಭಿಮಾನಿಗಳು ಮಾತ್ರ ಇನ್ನೂ ಅದೇ ಸೆಂಚುರಿಯ ಗುಂಗಲ್ಲೇ ಇದ್ದಾರೆ.
ಕಿಂಗ್ ಕೊಹ್ಲಿ ಪಾಲಿಗೆ ಇದೇ ನೋಡಿ ಕನಸಿನ ವಿಶ್ವಕಪ್
ಮೈದಾನ ಕ್ಕಿಕ್ಕಿರಿದು ತುಂಬಿತ್ತು. ಸ್ಟ್ಯಾಂಡ್ನಲ್ಲಿ ಸಾಲು ಸಾಲು ಸೆಲೆಬ್ರಿಟಿಗಳು ನೆರೆದಿದ್ರು. ಇಷ್ಟು ದಿನ ಆ ದಾಖಲೆಯ ಒಡೆಯನಾಗಿದ್ದ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡ ಈ ಶತಕಕ್ಕೆ ಸಾಕ್ಷಿಯಾಗಿದ್ರು. ಅಂತಾ ಹೈ ಪ್ರೆಶರ್ ಗೇಮ್ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ್ದು ಅವಿಸ್ಮರಣೀಯ ಶತಕ. ವಾಂಖೆಡೆ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವನ್ನ ಬೆಂಡೆತ್ತಿದ ವಿರಾಟ್ ಕೊಹ್ಲಿ ಯಾರೂ ಮಾಡದ ಸಾಧನೆ ಮಾಡಿದ್ರು. ಎಲ್ಲರೂ ಅಸಾಧ್ಯ ಅಂದಿದ್ದ ಸಚಿನ್ ದಾಖಲೆಯನ್ನ ಉಡಾಯಿಸಿದ್ರು. 50 ಸೆಂಚುರಿಗಳ ಸಾಧನೆ ಅಂದ್ರೆ ಅದು ಸಾಮಾನ್ಯದ ಮಾತಾ?
‘ಸೆಮಿಸ್ ಫೋಬಿಯಾ’ಗೆ ಬ್ರೇಕ್ ಹಾಕಿದ ವಿರಾಟ್
ಈ ವಿಶ್ವಕಪ್ ಲೀಗ್ ಹಂತದಲ್ಲಿ ವಿರಾಟ್ ಅದ್ಭುತ ಆಟವಾಡಿದ್ರೂ ಅಭಿಮಾನಿಗಳಲ್ಲಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಆತಂಕವಿತ್ತು. ಈ ಹಿಂದಿನ ಏಕದಿನ ವಿಶ್ವಕಪ್ ಸೆಮಿಸ್ ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಆ ರೀತಿಯಲ್ಲಿ ಮುಗ್ಗರಿಸಿದ್ರು. 2011ರ ವಿಶ್ವಕಪ್ ಸೆಮಿಸ್ ಫೈಟ್ನಲ್ಲಿ 9 ರನ್ಗಳಿಸಿದ್ದ ಕೊಹ್ಲಿ 2015, 2019ರ ವಿಶ್ವಕಪ್ ಸೆಮಿಸ್ನಲ್ಲಿ ಕೇವಲ 1 ರನ್ಗೆ ಶರಣಾಗಿದ್ರು. ಸೆಮಿಸ್ ಫೋಬಿಯಾ ಕೊಹ್ಲಿಯನ್ನ ಅಷ್ಟು ಕಾಡಿತ್ತು. ಇದಕ್ಕೆ ಕಿಂಗ್ ಕೊಹ್ಲಿ ಈ ಬಾರಿ ಬ್ರೇಕ್ ಹಾಕಿದ್ರು.
ಏಕದಿನ ವಿಶ್ವಕಪ್ ಟೂರ್ನಿಗೆ ಕೊಹ್ಲಿಯೇ ಕಿಂಗ್
ಏಕದಿನ ಮಾದರಿಯ ಶತಕದ ದಾಖಲೆ ಮಾತ್ರವಲ್ಲ. ಏಕದಿನ ವಿಶ್ವಕಪ್ ಟೂರ್ನಿಯೊಂದರಲ್ಲಿ ಹೆಚ್ಚು ರನ್ಗಳಿಸಿದ್ದ ಸಚಿನ್ ದಾಖಲೆಯನ್ನೂ ವಿರಾಟ್ ಈ ಬಾರಿ ಧ್ವಸಂಗೊಳಿದ್ದಾರೆ. 2003ರ ವಿಶ್ವಕಪ್ನಲ್ಲಿ 11 ಪಂದ್ಯ ಆಡಿದ್ದ ಸಚಿನ್ 673 ರನ್ ಸಿಡಿಸಿದ್ರು. ಈ ಬಾರಿ 10 ಪಂದ್ಯಗಳಲ್ಲೇ 711 ರನ್ ಸಿಡಿಸಿರೋ ವಿರಾಟ್ ಮಾಸ್ಟರ್ ದಾಖಲೆಯನ್ನ ಚಿಂದಿ ಉಡಾಯಿಸಿದ್ದಾರೆ.
ಯಾರೂ ಮಾಡದ ಸಾಧನೆ ಮಾಡಿದ್ದಾರೆ ವಿರಾಟ್
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ ಪರ್ವವೇ ನಡೆದಿದೆ. ವಿರಾಟ ರೂಪ ದರ್ಶನ ಮಾಡಿದ ಎದುರಾಳಿಗಳು ಸುಟ್ಟು ಹೋಗಿದ್ದಾರೆ. ಆಡಿರೋ 10 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ 50+ ರನ್ಗಳಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಯಾರೂ ಈ ಸಾಧನೆಯನ್ನ ಮಾಡಿಲ್ಲ ಗೊತ್ತಾ?
ಮೆಗಾ ಟೂರ್ನಿಯಲ್ಲಿ ವಿರಾಟ ಪರ್ವ..!
ಈ ಬಾರಿಯ ಟೂರ್ನಿ ಕಿಂಗ್ ಕೊಹ್ಲಿ ಪಾಲಿಗೆ ಡ್ರೀಮ್ ಟೂರ್ನಿ ಅನ್ನೋದಕ್ಕೆ ಈ ಟೂರ್ನಿಯಲ್ಲಿ ಮಾಡಿರುವ ಸಾಧನೆಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈ ವರೆಗೆ ಆಡಿದ 10 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಮಾಡಿರೋದು ಅತ್ಯಮೋಘ ಸಾಧನೆ.
ಪ್ರಸಕ್ತ ಟೂರ್ನಿಯಲ್ಲಿ ವಿರಾಟ್
ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, ಬರೋಬ್ಬರಿ 101.57ರ ಸರಾಸರಿಯಲ್ಲಿ 711 ರನ್ ಸಿಡಿಸಿದ್ದಾರೆ. 3 ಶತಕ, 5 ಅರ್ಧಶತಕಗಳ ಇನ್ನಿಂಗ್ಸ್ ಕಟ್ಟಿದ್ದಾರೆ.
ಕೊನೆಯ ವಿಶ್ವಕಪ್, ಅದೊಂದೇ ಅಲ್ಟಿಮೇಟ್ ಕನಸು
ನಂಬೋಕ್ಕೆ ಕಷ್ಟ ಆದ್ರೂ ವಾಸ್ತವವನ್ನ ಅರ್ಥ ಮಾಡಿಕೊಳ್ಳಲೇ ಬೇಕು. 35 ವರ್ಷದ ವಿರಾಟ್ ಕೊಹ್ಲಿ ಫುಲ್ ಫಿಟ್ ಆಗಿದ್ದಾರೆ. ಫಾರ್ಮ್ನಲ್ಲೂ ಇದ್ದಾರೆ. ಆದ್ರೆ, ಮುಂದಿನ ವಿಶ್ವಕಪ್ ಆಡೋದು ಬಹುತೇಕ ಅನುಮಾನವೇ. ಹೀಗಾಗಿ ಈ ಬಾರಿ ತವರಿನಂಗಳದಲ್ಲಿ ವಿಶ್ವಕಪ್ ಗೆಲ್ಲಬೇಕು ಅನ್ನೋದು ಕೊಹ್ಲಿಯ ಅಲ್ಟಿಮೇಟ್ ಕನಸು. 12 ವರ್ಷಗಳ ಕೊರಗಿದೆ ಬ್ರೇಕ್ ಹಾಕೋದೆ ಮನದಾಳದ ಹಂಬಲ..! ಅದಕ್ಕಾಗಿಯೇ ಈ ಕೆಚ್ಚೆದೆಯ ಹೋರಾಟ.. ಕೊಹ್ಲಿಯ ಆ ಕನಸು ನನಸಾಗಲಿ ಅನ್ನೋದೇ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಕೂಡ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್