newsfirstkannada.com

ವರ್ಲ್ಡ್​​ಕಪ್​ ಗೆದ್ರೆ ಸಚಿನ್​ರಂತೆ ಕೊಹ್ಲಿಗೂ ಸಿಗುತ್ತಾ ಬೀಳ್ಕೊಡುಗೆ.. ವಿರಾಟ್ ಬ್ಯಾಟಿಂಗ್ ರೇಂಜ್ ಹೇಗಿದೆ?​

Share :

25-10-2023

    ವಿರಾಟ್​-ಸಚಿನ್​ ಇಬ್ಬರ ನಡುವಿನ ಬ್ಯಾಟಿಂಗ್​ನಲ್ಲೂ ಇದೆ ಸಾಮ್ಯತೆ

    2011ರ ವಿಶ್ವಕಪ್​​ನಲ್ಲಿ ಬ್ಯಾಟಿಂಗ್​ ಬೆನ್ನೆಲುಬಾಗಿತ್ತು ಸಚಿನ್ ಬ್ಯಾಟಿಂಗ್

    ಟೀಮ್ ಇಂಡಿಯಾ ಗೆಲುವಿನಲ್ಲಿ ವಿರಾಟ್ ಕೊಹ್ಲಿಯ ಪಾತ್ರ ದೊಡ್ಡದು!

ಸಚಿನ್ ತೆಂಡೂಲ್ಕರ್ ನಿವೃತ್ತಿ ಬಳಿಕ ವಿರಾಟ್​ ಕೊಹ್ಲಿ ಟೀಮ್ ಇಂಡಿಯಾಗೆ ಸಿಕ್ಕ ಮಾಣಿಕ್ಯ. ಸಚಿನ್​​ರ ಉತ್ತರಾಧಿಕಾರಿಯಾಗಿ ವಿಶ್ವ ಕ್ರಿಕೆಟ್​ನ ಆಳ್ತಿರುವ ಈ ಧೀರ. ಕರಿಯರ್​ ಆರಂಭದಿಂದಲೂ ಕೊಹ್ಲಿ, ಸಚಿನ್​ ಹಾದಿಯಲ್ಲೇ ಸಾಗಿದ್ದಾರೆ. ಇದೀಗ ವಿಶ್ವಕಪ್​ನಲ್ಲೂ ಅವರನ್ನೇ ನೆನಪಿಸ್ತಿದ್ದಾರೆ.

ಕೊಹ್ಲಿ ಮಾಡ್ರನ್ ಡೇ ಕ್ರಿಕೆಟ್​ನ ಮಹಾರಾಜ. ವಿಶ್ವ ಕ್ರಿಕೆಟ್​ನ ಕಿಂಗ್ ಆಗಿ ಮೆರೆಯುತ್ತಿರುವ ವಿರಾಟ್​ಗೆ, ಮೊನ್ನೆ ಧರ್ಮಶಾಲಾದಲ್ಲಿ ಅವಿಸ್ಮರಣೀಯ ದಾಖಲೆ ಸರಿಗಟ್ಟೋ ಅವಕಾಶ ಸಿಕ್ಕಿತ್ತು. ಗಾಡ್​ ಆಫ್ ಕ್ರಿಕೆಟ್ ಸಚಿನ್​ ತೆಂಡೂಲ್ಕರ್​ ಜೊತೆ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸೆಂಚುರಿ ಹೊಡೆದವರ ಲಿಸ್ಟ್​ನಲ್ಲಿ ನಂಬರ್​ 1 ಸ್ಥಾನವನ್ನ ಹಂಚಿಕೊಳ್ತಿದ್ರು. ಆದ್ರೆ, 5 ರನ್​​ ಅಂತರದಲ್ಲಿ ಆ ಗೋಲ್ಡನ್​ ಆಪರ್ಚುನಿಟಿ ಮಿಸ್​ ಆಯ್ತು.

ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್

ಅಭಿಮಾನಿಗಳಿಗೆ ಇದ್ರಿಂದ ಬೇಸರ ಆಯ್ತು. ಆದ್ರೆ, ಶತಕ ಸಾಧನೆಯ ಅವಕಾಶ ಮಿಸ್​ ಆದ ಬಗ್ಗೆ ಕಿಂಗ್ ಕೊಹ್ಲಿಗೆ ಬೇಸರವಿಲ್ಲ. ಸದ್ಯ ಸಾಲಿಡ್​ ಫಾರ್ಮ್​​ನಲ್ಲಿರೋ ವಿರಾಟ್, ಇಂದಲ್ಲ ನಾಳೆ ಬ್ರೇಕ್ ಮಾಡೇ ಮಾಡ್ತಾರೆ. ಯಾಕಂದ್ರೆ, ಸದ್ಯ ಸಚಿನ್ ಹಾದಿಯಲ್ಲೇ ವಿರಾಟ್​ ಸಾಗ್ತಿದ್ದಾರೆ.

ಸಚಿನ್​ ನೆನಪಿಸಿದ ಕಿಂಗ್ ಕೊಹ್ಲಿಯ ಆಟ..!

ಪ್ರಸಕ್ತ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಆಟ, 2011ರ ಏಕದಿನ ವಿಶ್ವಕಪ್​ನಲ್ಲಿ ಸಚಿನ್ ತೆಂಡೂಲ್ಕರ್​​​ರ ರೋಲ್ ಅನ್ನೇ ನೆನಪಿಸುತ್ತಿದೆ. ಪ್ರಸಕ್ತ ವಿಶ್ವಕಪ್​ನಲ್ಲಿ ವಿರಾಟ್​, ಟೀಮ್ ಇಂಡಿಯಾ ಯಶಸ್ಸಿನಲ್ಲಿ ವಹಿಸುತ್ತಿರುವ ಪಾತ್ರವೇ ಇದಕ್ಕೆ ಕಾರಣವಾಗಿದೆ. ಈ ಟೂರ್ನಿಯಲ್ಲಿ ಜಸ್ಟ್ ಬ್ಯಾಟಿಂಗ್​ಗೆ ಮಾತ್ರವೇ ಸಿಮೀತವಾಗದ ವಿರಾಟ್​, ಅನ್​​ಫೀಲ್ಡ್​ನಲ್ಲಿ ಎಲ್ಲಕ್ಕೂ ನೆರವಾಗ್ತಿದ್ದಾರೆ.

ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಅಗತ್ಯ ಸಲಹೆ ಸೂಚನೆ ನೀಡ್ತಿದ್ದಾರೆ. ಫೀಲ್ಡಿಂಗ್​ ಸೆಟ್​ ಮಾಡೋದ್ರಲ್ಲೂ ಸೀನಿಯರ್​ ಆಟಗಾರನಾಗಿ ಜವಾಬ್ದಾರಿ ನಿರ್ವಹಿಸ್ತಿದ್ದಾರೆ. ಬೌಲರ್ಸ್​ಗೂ ಟಿಪ್ಸ್​ ನೀಡ್ತಿದ್ದಾರೆ. 2011ರ ಏಕದಿನ ವಿಶ್ವಕಪ್​ನಲ್ಲಿ ಸಚಿನ್ ಕೂಡ ಇಂತದ್ದೇ ರೋಲ್​​ ಪ್ಲೇ ಮಾಡಿದ್ರು.

ವರ್ಷ ಮಾತ್ರ ಬದಲು​.. ರೋಲ್ ಸೇಮ್ ಟು ಸೇಮ್!

2011ರ ವಿಶ್ವಕಪ್​​ನಲ್ಲಿ ಸಚಿನ್ ಬ್ಯಾಟಿಂಗ್ ಟೀಮ್​ ಇಂಡಿಯಾದ ಬೆನ್ನೆಲುಬಾಗಿತ್ತು. ಕೊಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಜೊತೆಗೆ ಇಡೀ ತಂಡ ಸಚಿನ್​ ಮೇಲೆ ಡಿಪೆಂಡ್​ ಆಗಿತ್ತು. ಈ ಭಾರವನ್ನ ಟೂರ್ನಿಯೂದ್ದಕ್ಕೂ ಸಚಿನ್​ ಹೊತ್ತು ಸಾಗಿದ್ರು. ಭಾರತದ ಪರ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದ ಸಚಿನ್, ಟೀಮ್ ಇಂಡಿಯಾ ಗೆಲುವುಗಳಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ರು.

2011 ವಿಶ್ವಕಪ್​ನಲ್ಲಿ ಸಚಿನ್

2011ರ ವಿಶ್ವಕಪ್​ನಲ್ಲಿ 9 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಸಚಿನ್, 53ರ ಸರಾಸರಿಯಲ್ಲಿ 482 ರನ್ ಗಳಿಸಿದರು. ಇದರಲ್ಲಿ 2 ಶತಕ, 2 ಅರ್ಧಶತಕ ಸೇರಿದ್ದವು. ಅಂದು ಸಚಿನ್​ ಸೂಪರ್​ ಡೂಪರ್​ ಆಟದ ಮೂಲಕ ತಂಡಕ್ಕೆ ನೆರವಾದಂತೆ, ಇಂದು ವಿರಾಟ್​ ಕೊಹ್ಲಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಸಚಿನ್​ರಂತೆ ನಿರೀಕ್ಷೆಯ ಭಾರವನ್ನ ಹೆಗಲ ಮೇಲೆ ಹೊತ್ತು ಸಾಗ್ತಿರುವ ಕಿಂಗ್​ ಕೊಹ್ಲಿ, ವಿಶ್ವಕಪ್​ ಅಖಾಡದಲ್ಲಿ ಬ್ಯಾಟಿಂಗ್ ದರ್ಬಾರ್​ ನಡೆಸ್ತಿದ್ದಾರೆ.

ಪ್ರಸಕ್ತ ವಿಶ್ವಕಪ್​ನಲ್ಲಿ ಕೊಹ್ಲಿ

ಪ್ರಸಕ್ತ ವಿಶ್ವಕಪ್​ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ವಿರಾಟ್, 118ರ ಸರಾಸರಿಯಲ್ಲಿ 354 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 3 ಅರ್ಧಶತಗಳು ಒಳಗೊಂಡಿವೆ.

ವಿರಾಟ್ ಕೊಹ್ಲಿ ಸೆಂಚುರಿ

ವಿರಾಟ್​ ಕೊಹ್ಲಿಗೆ ಟೀಮ್​​ ಇಂಡಿಯಾ ವಿಶ್ವಕಪ್ ಗಿಫ್ಟ್..?

ಟೀಮ್ ಇಂಡಿಯಾ ಗೆಲುವಲ್ಲಿ ವಿರಾಟ್​ ಪಾತ್ರ ದೊಡ್ಡದಿದೆ. ಕೊಹ್ಲಿಯ ಸ್ಪೆಷಲ್ ಇನ್ನಿಂಗ್ಸ್​ಗಳು ಟೀಮ್ ಇಂಡಿಯಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವನ್ನೇ ವಹಿಸ್ತಿವೆ. ಪಾಕ್ ವಿರುದ್ಧದ ಪಂದ್ಯ ಹೊರತುಪಡಿಸಿ ಉಳಿದ 4 ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್ ಬೀಸಿದ ಪರಿ ನಿಜಕ್ಕೂ ಅದ್ಬುತ. ಅದರಲ್ಲೂ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎದುರಿನ ಗೆಲುವುಗಳಲ್ಲಿ ಕೊಹ್ಲಿ, ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆಯ ಭಾರವನ್ನ ಹೆಗಲ ಮೇಲೆ ಹೊತ್ತಿ ಸಾಗಿದ್ರು. ಟೀಮ್ ಇಂಡಿಯಾವನ್ನ ಗೆಲುವಿನ ಗಡಿ ತಲುಪಿಸಿದ್ರು.

ಸಚಿನ್​ರಂತೆಯೇ ಇರುತ್ತಾ ಕಿಂಗ್ ಕೊಹ್ಲಿಯ ಬೀಳ್ಕೊಡುಗೆ..?

2011ರಲ್ಲಿ ವಿಶ್ವಕಪ್ ಗೆದ್ದ ನಂತರ ವಿರಾಟ್​​ ಕೊಹ್ಲಿ, ಸಚಿನ್​ರನ್ನ ಹೆಗಲ ಮೇಲೆ ಹೊತ್ತಿದ್ದ ಚಿತ್ರ ಇಂದಿಗೂ ಫ್ಯಾನ್ಸ್​ ಕಣ್ಣಿಗೆಕಟ್ಟಿದಂತಿದೆ. ಇದು ಮಾಸ್ಟರ್ ಬ್ಲಾಸ್ಟರ್‌ಗೆ ಸಿಕ್ಕ ಸ್ಮರಣೀಯ ಕಾಣಿಕೆಯಾಗಿತ್ತು. ಇದೀಗ ಕೋಟ್ಯಂತರ ಭಾರತೀಯರ ಭರವಸೆಯಾಗಿರುವ ವಿರಾಟ್​ಗೆ ವಿಶ್ವಕಪ್​​ ಉಡುಗೊರೆ ಸಿಗಬೇಕಾಗಿದೆ. ಅಂದು ಸಚಿನ್​ರಂತೆ ಇಂದು ಕೊಹ್ಲಿಯನ್ನ ಹೊತ್ತು ಆಟಗಾರರು ಸಾಗಬೇಕೆಂಬ ಅಪಾರ ಅಭಿಮಾನಿಗಳ ಹೆಬ್ಬಯಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವರ್ಲ್ಡ್​​ಕಪ್​ ಗೆದ್ರೆ ಸಚಿನ್​ರಂತೆ ಕೊಹ್ಲಿಗೂ ಸಿಗುತ್ತಾ ಬೀಳ್ಕೊಡುಗೆ.. ವಿರಾಟ್ ಬ್ಯಾಟಿಂಗ್ ರೇಂಜ್ ಹೇಗಿದೆ?​

https://newsfirstlive.com/wp-content/uploads/2023/09/Kohli_Sachin.jpg

Load More