ಬಿಗ್ ಬ್ಯಾಟಲ್ನಲ್ಲಿ ಇನ್ನಿಂಗ್ಸ್ ಆರಂಭಿಸೋ ಓಪನರ್ಸ್ ಯಾರು?
ಓಪನಿಂಗ್ ಸ್ಲಾಟ್ಗೆ ಟೀಮ್ ಇಂಡಿಯಾದಲ್ಲಿ ಏರ್ಪಟ್ಟ ಮೆಗಾಫೈಟ್
ರೇಸ್ನಲ್ಲಿ ಮುಂಚೂಣಿಯಲ್ಲಿರುವ ಜೋಡಿ ರೋಹಿತ್- ಶುಭ್ಮನ್
ಬಹುನಿರೀಕ್ಷಿತ ಒನ್ಡೇ ವಿಶ್ವಕಪ್ ದಂಗಲ್ ಬಂದೇ ಬಿಡ್ತು. ಫಿಫ್ಟಿ ಓವರ್ ಬ್ಯಾಟಲ್ ಸಮೀಪಿಸ್ತಿದ್ದಂತೆ ಟೀಮ್ ಇಂಡಿಯಾಗೆ ಓಪನಿಂಗ್ ಟೆನ್ಷನ್ ಶುರುವಾಗಿದೆ. ಒಂದು ಓಪನಿಂಗ್ ಸ್ಲಾಟ್ಗಾಗಿ 4 ಜೋಡಿ ಮಧ್ಯೆ ಫೈಟ್ ಏರ್ಪಟ್ಟಿದೆ. ಅಷ್ಟಕ್ಕೂ ಆ ಜೋಡಿ ಯಾವುವು, ಯಾರನ್ನ ಆಡಿಸಿದ್ರೆ ಭಾರತಕ್ಕೆ ಹೆಚ್ಚು ಲಾಭ ಎಂಬದರ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಟೀಮ್ ಇಂಡಿಯಾ ನಿರೀಕ್ಷೆಯಂತೆ ವೆಸ್ಟ್ ಇಂಡೀಸ್ ತಂಡವನ್ನ ಒನ್ಡೇ ಸಿರೀಸ್ನಲ್ಲಿ ಬೇಟೆಯಾಡಿದೆ. ಆ ಮೂಲಕ ಒನ್ಡೇ ವಿಶ್ವಕಪ್ಗೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ಸರಣಿಯಲ್ಲಿ ಮೆನ್ ಇನ್ ಬ್ಲೂ ಪಡೆಯ ಸರಣಿ ಗೆಲುವಿಗಿಂತ ಆರಂಭಿಕ ಜೋಡಿಯ ದಮ್ದಾರ್ ಪರ್ಫಾಮೆನ್ಸ್ ಸಖತ್ ಕಿಕ್ ನೀಡ್ತು. ಯಂಗ್ಪೇರ್ ಆರ್ಭಟದಿಂದ ಒನ್ಡೇ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಓಪನರ್ಸ್ ಯಾರು ಆಗ್ಬೇಕು ಅನ್ನೋ ಹೊಸ ಪ್ರಶ್ನೆ ಹುಟ್ಟುಕೊಂಡಿದೆ.
ಶುಭ್ಮನ್ ಗಿಲ್-ಇಶಾನ್ ಕಿಶನ್
ಯಂಗ್ಸ್ಟರ್ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಜೋಡಿ ವಿಂಡೀಸ್ ಏಕದಿನ ಸರಣಿಯಲ್ಲಿ ಓಪನರ್ ಆಗಿ ಸೂಪರ್ ಡೂಪರ್ ಆಟವಾಡಿದ್ರು. ಅನುಭವಿಗಳಂತೆ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಸರಣಿಯಲ್ಲಿ 1 ಶತಕ ಹಾಗೂ 1 ಅರ್ಧಶತಕದ ಜೊತೆಯಾಟವಾಡಿ ಸೈ ಅನ್ನಿಸಿಕೊಳ್ತು. ಆ ಮೂಲಕ ಒನ್ಡೇ ವಿಶ್ವಕಪ್ ಓಪನಿಂಗ್ ರೇಸ್ನಲ್ಲಿ ನಾವಿದ್ದೇವೆ ಅನ್ನೋ ಸ್ಟ್ರಾಂಗ್ ಮೆಸೇಜ್ ರವಾನಿಸಿದೆ.
ಗಿಲ್ ಹಾಗೂ ಕಿಶನ್ಗೆ ಅನುಭವ ಕಮ್ಮಿ ನಿಜ. ಆದ್ರೆ ಲೆಫ್ಟಿ ರೈಟಿ ಕಾಂಬಿನೇಶನ್ ತಂಡಕ್ಕೆ ನೆರವಾಗಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರು ಡೇರಿಂಗ್ ಬ್ಯಾಟರ್ಸ್. ಎಂತಹ ಬೌಲರ್ಗಳನ್ನೂ ಲೀಲಾಜಾಲವಾಗಿ ದಂಡಿಸಿ ಭದ್ರಬುನಾದಿ ಹಾಕಿಕೊಡಬಲ್ಲರು.
ರೋಹಿತ್ ಶರ್ಮಾ- ಶುಭ್ಮನ್ ಗಿಲ್
ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಜೋಡಿ ಓಪನಿಂಗ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಈ ಜೋಡಿಗೆ ಆರಂಭಿಕರಾಗಿ ಆಡಿದ ಸಾಕಷ್ಟು ಅನುಭವಿದೆ. ರೋಹಿತ್-ಗಿಲ್ ಕಣಕ್ಕಿಳಿತಾರೆ ಅಂದ್ರೆ ಎದುರಾಳಿ ಪಡೆ ಥಂಡಾ ಹೊಡೆಯುತ್ತೆ. ಅಷ್ಟರ ಮಟ್ಟಿಗೆ ಈ ಜೋಡಿ ಟೆರರ್. ಅದ್ಭುತ ಆಟದಿಂದ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಅಪಾರ ಅನುಭವ, ಶುಭ್ಮನ್ ಗಿಲ್ರ ಡೀಸೆಂಟ್ ಆಟ ವಿಶ್ವಕಪ್ನಲ್ಲಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಬಲ್ಲದು.
ರೋಹಿತ್ ಶರ್ಮಾ- ಇಶಾನ್ ಕಿಶನ್
ಇನ್ನು ಈ ಜೋಡಿಯು ಫಿಫ್ಟಿ ಓವರ್ ಮಹಾಸಮರದಲ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ. ಇಬ್ಬರು ಲೆಫ್ಟಿ, ರೈಟಿ ಆಗಿರೋದು ತಂಡಕ್ಕೆ ಮೊದಲ ಅಡ್ವಾಂಟೇಜ್. ಹಿಟ್ಮ್ಯಾನ್ ಅನುಭವ ಬಳಸಿ ಗಟ್ಟಿಯಾಗಿ ನೆಲೆ ನಿಂತ್ರೆ, ಇಶಾನ್ ಕಿಶನ್ ಬಿರುಸಿನ ಆಟವಾಡಿ ಎದುರಾಳಿ ತಂಡದ ಪ್ಲಾನ್ಗಳನ್ನ ತಲೆ ಕೆಳಗೆ ಮಾಡಬಲ್ಲರು.
ರೋಹಿತ್ ಶರ್ಮಾ- ಕೆ.ಎಲ್ ರಾಹುಲ್
ರೋಹಿತ್ ಶರ್ಮಾ- ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಅನುಭವಿ ಓಪನರ್ಸ್. ಈ ರೈಟಿ ಕಾಂಬೋ ಭಾರತಕ್ಕೆ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದೆ. ಇದೇ ಜೋಡಿ ವಿಶ್ವಕಪ್ ರಣಾಂಗಣದಲ್ಲಿ ಇನ್ನಿಂಗ್ಸ್ ಆರಂಭಿಸಿದ್ರೆ ಕಟ್ಟಿ ಹಾಕೋದು ಕಷ್ಟ. ಸದ್ಯ ರಾಹುಲ್ ಸುದೀರ್ಘ ಇಂಜುರಿ ಬಳಿಕ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಹಲವು ಸವಾಲು ಮುಂದಿದ್ರೂ ರೋಹಿತ್ರ ಸ್ಟಾರ್ ಓಪನರ್ ಜೊತೆಗಿದ್ರೆ ನಿರ್ಭೀತಿಯಿಂದ ಬ್ಯಾಟ್ ಬೀಸಬಹುದು.
ಮೇಲಿನ 4 ಜೋಡಿ ಒನ್ಡೇ ವಿಶ್ವಕಪ್ನಲ್ಲಿ ಆರಂಭಿಕ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಆದ್ರೆ ಟೀಮ್ ಮ್ಯಾನೇಜ್ಮೆಂಟ್ ಕೃಪಾಕಟಾಕ್ಷ ಯಾರ ಮೇಲಿದೆ ಅನ್ನೋದು ಗೊತ್ತಾಗಬೇಕಾದ್ರೆ ಇನ್ನೂ ಸ್ವಲ್ಪ ದಿನ ಕಾಯಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ