ವಿದೇಶಗಳಲ್ಲಿ ಕೊರೊನಾ ಆರ್ಭಟ ಮತ್ತೆ ಶುರುವಾಗಿದೆ. ರಾಜ್ಯದಲ್ಲೂ ಈ ಬಗ್ಗೆ ತಲ್ಲಣ ಶುರುವಾಗಿದೆ. ಅದರಲ್ಲೂ ಕರುನಾಡಲ್ಲಿ ಒಮಿಕ್ರಾನ್ ಉಪತಳಿ BF.7 ಭೀತಿ ಸೃಷ್ಟಿಸಿದೆ. ಈ ಬಗ್ಗೆ ತಜ್ಞರು ಸೋಂಕು ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೊಸವರ್ಷದ ಮೊದಲ ತಿಂಗಳಲ್ಲಿ ಮತ್ತು ಫೆಬ್ರವರಿ ತಿಂಗಳಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಮುಂದಿನ 40 ದಿನಗಳು ನಿರ್ಣಾಯಕ ಎಂದಿದ್ದಾರೆ.
ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಆಗುವ ಆತಂಕ ಹೆಚ್ಚಾಗಿದ್ದು, ಸೋಂಕು ಹೆಚ್ಚಳದ ಪ್ರಮಾಣ ಅಂದಾಜಿಸಲು ತೀರ್ಮಾನಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸೋಂಕಿನ ಪ್ರಕರಣ ಏರಿಕೆ ಆಗುವ ಸಾಧ್ಯತೆ ಇದ್ದು, ಕೊರೊನಾ ಪರಿಸ್ಥಿತಿ ಎದುರಿಸಲು ತಾಂತ್ರಿಕ ಸಲಹಾ ಸಮಿತಿ ಸಿದ್ಧತೆ ನಡೆಸಿದೆ.
ಸೋಂಕು ಹೆಚ್ಚಳದ ಅಂದಾಜು ವರದಿಯಲ್ಲಿ ಏನಿದೆ?
ಸರ್ಕಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸಂಸ್ಥೆಯ ಮೊರೆ ಹೋಗಿದೆ. ಕೊರೊನಾ ಸೋಂಕು ಹೆಚ್ಚಳದ ಅಂದಾಜು ವರದಿ ರೂಪಿಸಲು ತಿಳಿಸಲಾಗಿದೆ. ಸದ್ಯದ ಪ್ರಕರಣ ಆಧರಿಸಿ ಸೋಂಕು ಹೆಚ್ಚಳದ ಮಾದರಿ ವರದಿ ಬಿಡುಗಡೆ ಮಾಡಲಿದೆ. ಮುಂದಿನ 2 ತಿಂಗಳಲ್ಲಿ ಅಂದಾಜು ಎಷ್ಟು ಕೇಸ್ ದಾಖಲಾಗುವ ಸಾಧ್ಯತೆ ಇದೆ ಎಂಬುದು ಬೆಳಕಿಗೆ ಬರಲಿದೆ.
ಪರಿಸ್ಥಿತಿ ಬದಲಾಗುವ ಸಾಧ್ಯತೆ?
ಸೋಂಕು ಹೆಚ್ಚಳದ ವರದಿ ಆಧರಿಸಿ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಲಾಗುತ್ತಿದೆ. ಸೋಂಕು ಹೆಚ್ಚಾದಾಗ ಬೇಕಾಗುವ ಬೆಡ್, ಔಷಧಗಳ ಬಗ್ಗೆ ಲೆಕ್ಕಾಚಾರ ನಡೆಸಿದೆ. ಎಷ್ಟು ಕೇಸ್ ದಾಖಲಾಗಬಹುದೆಂದು ನೋಡಿಕೊಂಡು ಚಿಕಿತ್ಸೆಗೆ ಸಿದ್ಧತೆ ಮಾಡಲಾಗುತ್ತಿದೆ. ತಜ್ಞರು ನೀಡುವ ವರದಿ ಆಧರಿಸಿ ತಾಂತ್ರಿಕ ಸಲಹಾ ಸಮಿತಿಯಿಂದ ಕ್ರಮ ಕೈಗೊಳ್ಳಲಿದೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯ, ಡಾ. ಸತ್ಯನಾರಾಯಣ್ ಮಾತನಾಡಿ, ಅಂದಾಜು ವರದಿ ಸಿದ್ಧಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ, ಚೀನಾದಿಂದ ಸೋಂಕಿನ ಬಗ್ಗೆ ಸರಿಯಾದ ಅಂಕಿ- ಸಂಖ್ಯೆ ಸಿಗ್ತಿಲ್ಲ. ಅದರಲ್ಲೂ ಸೋಂಕು ಹೆಚ್ಚಳದ ಅಂದಾಜು ವರದಿ ತಯಾರಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post