ಕಿಚ್ಚ ನಿರೂಪಣೆಯ ಬಿಗ್ ಬಾಸ್ ಸೀಸನ್ 9 ವಿನ್ನರ್ ಆಗಿ ಮಂಗಳೂರು ಮೂಲದ ನಟ ರೂಪೇಶ್ ಶೆಟ್ಟಿ ಜಯ ಸಾಧಿಸಿದ್ದಾರೆ. ನ್ಯೂಸ್ ಫಸ್ಟ್ಗೆ ಆಗಮಿಸಿದ್ದ ರೂಪೇಶ್ ತಮ್ಮ ಹಾಗೂ ಸಾನ್ಯ ಅವರ ವಿವಾಹದ ಬಗ್ಗೆ ಹೇಳಿದ್ದಾರೆ.
ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಉತ್ತಮ ಸ್ನೇಹಿತರಾಗಿ ದೊಡ್ಮನೆಯಲ್ಲಿ ಗುರುತಿಸಿಕೊಂಡವರು.. ಇವರಿಬ್ಬರ ಸ್ನೇಹ ದೊಡ್ಡಮಟ್ಟದಲ್ಲಿ ಸದ್ದು ಮಾತ್ರವಲ್ಲ, ಸುದ್ದಿ ಮಾಡಿತ್ತು. ಈ ಜೋಡಿಗಳ ಪ್ರೀತಿ ಮಾಡುತ್ತಿದ್ದಾರೆ ಎಂಬ ಮಾತುಗಳು ವೀಕ್ಷಕರು ಬಾಯಲ್ಲಿ ಹರಿದಾಡಿತ್ತು. ಆದರೀಗ ವಿನ್ನರ್ ಪಟ್ಟ ಅಲಂಕರಿಸಿಕೊಂಡು ಹೊರಬಂದ ರೂಪೇಶ್ ಅವರು ಸಾನ್ಯ ಅವರ ಜೊತೆಗಿನ ವಿವಾಹದ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ.
ಸಾನ್ಯ ಅವರನ್ನು ವಿವಾಹವಾಗುತ್ತಾರಾ ರೂಪೇಶ್?
ಬಿಗ್ ಬಾಸ್ ಮನೆಯೊಳಗೆ ಪ್ರಶಾಂತ್ ಸಂಬರಗಿ ಅವರು ರೂಪೇಶ್ ಬಳಿ ಸಾನ್ಯ ಅವರನ್ನು ವಿವಾಹವಾಗುತ್ತೀರಾ? ಎಂಬ ಬಗ್ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ರೂಪೇಶ್ ದೊಡ್ಮನೆಯಲ್ಲೇ ಉತ್ತರಿಸಿದ್ದರು. ಆದರೆ ಈ ಜಾಗದಲ್ಲಿ ಸಾನ್ಯ ಅವರ ಉತ್ತರ ಹೇಗಿರಬಹುದು ಎಂಬುದನ್ನು ರೂಪೇಶ್ ನ್ಯೂಸ್ ಫಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ.
ರೂಪೇಶ್ ಊಹನೆಯಂತೆ ಸಾನ್ಯ ಉತ್ತರ ಹೀಗಿರಬಹುದು..
ಸದ್ಯ ನನಗೆ ಮದುವೆ ಪ್ಲಾನ್ ಇಲ್ಲ. ನನಗೆ ತುಂಬಾ ದೊಡ್ಡ ಕನಸಿದೆ. ದೊಡ್ಡ ಪ್ರೊಡಕ್ಷನ್ ಹೌಸ್ನಲ್ಲಿ ಸಿನಮಾ ಮೂಲಕ ಲಾಂಚ್ ಆಗಬೇಕು ಮತ್ತು ಹಿರೋಯಿನ್ ಆಗಬೇಕು ಎಂಬ ಕನಸಿದೆ. ರೂಪೇಶ್ಗೂ ತುಂಬಾ ಕನಸುಗಳಿದೆ. ಸದ್ಯಕಂತೂ ಮದುವೆ ಪ್ಲಾನೇ ಇಲ್ಲ ಎಂದು ಊಹಿಸಿ ಹೇಳಿದ್ದಾರೆ.
ಕಿಚ್ಚ ನಿರೂಪಣೆಯ ಬಿಗ್ ಬಾಸ್ ಸೀಸನ್ 9 ಅಂತ್ಯಗೊಂಡಿದೆ. ರೂಪೇಶ್ ವಿನ್ ಆದರೆ ರಾಕೇಶ್ ಅಡಿಗ ರನ್ನರ್ ಪಟ್ಟ ಅಲಂಕರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post