ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನ ಎಷ್ಟು ಪ್ರೀತಿಸುತ್ತಾರೆ.. ಇವರಿಬ್ಬರ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಇದನ್ನು ಓದಿ: ಪ್ರೀತಿಯಿಂದ ಅಮ್ಮನ ಅಪ್ಪಿಕೊಂಡು ರಾಹುಲ್ ಗಾಂಧಿ ಏನ್ ಹೇಳಿದ್ರು ಗೊತ್ತಾ..?
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ಉತ್ತರಪ್ರದೇಶವನ್ನ ಪ್ರವೇಶಿಸಿತ್ತು. ಈ ವೇಳೆ ಅಣ್ಣನಿಗೆ ಸಾಥ್ ಕೊಟ್ಟ ಪ್ರಿಯಾಂಕಾ ವಾದ್ರಾ ವೇದಿಕೆ ಹಂಚಿಕೊಂಡಿದ್ರು. ಪಕ್ಕದಲ್ಲೇ ಕೂತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾರನ್ನ ಬಿಗಿದಪ್ಪಿಕೊಂಡ್ರು. ಉಕ್ಕಿ ಬಂದ ಪ್ರೀತಿಯಲ್ಲೇ ಪಪ್ಪಿಯನ್ನು ಕೊಟ್ರು.. ನೆರೆದಿದ್ದವರು ಒನ್ಸ್ ಮೋರ್ ಅಂದ್ರೂ ರಾಹುಲ್ ಗಾಂಧಿ ಅವರನ್ನು ನಿರಾಸೆಗೊಳಿಸಲಿಲ್ಲ.. ಪ್ರಿಯಾಂಕಾ ಅವರನ್ನ ಬಿಗಿದಪ್ಪಿಕೊಂಡು ಖುಷಿಯಲ್ಲಿ ತೇಲಾಡಿದ್ರು.. ಅಣ್ಣ-ತಂಗಿಯ ಈ ಸಲುಗೆಯ ದೃಶ್ಯ ನೋಡುಗರು ಉಬ್ಬೇರುವಂತೆ ಮಾಡಿದ್ದಂತೂ ಸುಳ್ಳಲ್ಲ..
ಭಾರತ್ ಜೋಡೋ ಯಾತ್ರೆಯಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಬಂದಿದ್ದಾಗ ರಾಹುಲ್ ಗಾಂಧಿ ಅವರ ಶೂ ಲೆಸ್ ಕಟ್ಟಿದ್ರು.. ತಾಯಿ ಮಗನ ಈ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಇದೀಗ ರಾಹುಲ್ ಗಾಂಧಿ, ಪ್ರಿಯಾಂಕಾ ಮೇಲೆ ಅಪಾರ ಪ್ರೀತಿ ತೋರಿಸಿರೋ ವಿಡಿಯೋ ಸಹ ವೈರಲ್ ಆಗಿದೆ.
❤️❤️ pic.twitter.com/9MIQKMIdAQ
— Congress (@INCIndia) January 3, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post